ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ vs ಆರ್‌ಆರ್ ಮುಖಾಮುಖಿಯಲ್ಲಿ ಹೆಚ್ಚು ಗೆದ್ದಿದ್ಯಾರು ಗೊತ್ತಾ?!

IPL 2020 Rajasthan Royals vs Chennai Super Kings – Head-to-head record and past stats

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 22) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಸ್‌ಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕಾದಾಡಲಿವೆ. ಇದರಲ್ಲಿ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಆಡಿದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಕಂಡಿದೆ. ರಾಜಸ್ಥಾನ್ ರಾಯಲ್ಸ್‌ಗೆ ಇದು ಟೂರ್ನಿಯ ಮೊದಲ ಪಂದ್ಯ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಕೂಡ ಬಲಿಷ್ಠ ತಂಡವೇ. ಐಪಿಎಲ್ ಉದ್ಘಾಟನಾ ಸೀಸನ್‌ನಲ್ಲಿ ಆರ್‌ಆರ್‌ ಇದೇ ಸಿಎಸ್‌ಕೆ ವಿರುದ್ಧ ಗೆದ್ದು ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು.

ಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕಐಪಿಎಲ್ ಮೊದಲ ಪಂದ್ಯದಲ್ಲಿ 50+: ಮೆಕಲಮ್‌ನಿಂದ ದೇವದತ್ ತನಕ

ಐಪಿಎಲ್ ಹಿಂದಿನ ಸೀಸನ್‌ಗಳಲ್ಲಿ ಸಿಎಸ್‌ಕೆ ಮತ್ತು ಆರ್ಆರ್ ಅನೇಕ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿವೆ. ಸಿಎಸ್‌ಕೆ-ಆರ್‌ಆರ್ ಕುತೂಹಲಕಾರಿ ಮುಖಾಮುಖಿಯ ಅಂಕಿ-ಅಂಶಗಳು ಇಲ್ಲಿವೆ.

ಎರಡೂ ತಂಡಗಳಲ್ಲೂ ಬ್ಯಾನ್ ಕಳಂಕ

ಎರಡೂ ತಂಡಗಳಲ್ಲೂ ಬ್ಯಾನ್ ಕಳಂಕ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಂಡಗಳ ಮೇಲೂ ಬ್ಯಾನ್ ಕಳಂಕವಿದೆ. ಎರಡೂ ತಂಡಗಳೂ 2016 ಮತ್ತು 2017ರ ಸೀಸನ್‌ನಿಂದ ಬ್ಯಾನ್‌ ಆಗಿದ್ದವು. ಮ್ಯಾಚ್ ಫಿಕ್ಸಿಂಗ್‌ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎರಡೂ ತಂಡಗಳ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಗಿತ್ತು.

ಸಿಎಸ್‌ಕೆ vs ಆರ್‌ಆರ್ ಮುಖಾಮುಖಿ

ಸಿಎಸ್‌ಕೆ vs ಆರ್‌ಆರ್ ಮುಖಾಮುಖಿ

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಒಟ್ಟು 21 ಬಾರಿ ಮುಖಾಮುಖಿಯಾಗಿವೆ. ಆರ್ಆರ್ ಒಂದೇ ಬಾರಿ ಟ್ರೋಫಿ ಜಯಿಸಿದೆ. ಆದರೆ ಸಿಎಸ್‌ಕೆ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಪಟ್ಟ ಆವರಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಮೇಲುಗೈ

ಚೆನ್ನೈ ಸೂಪರ್ ಕಿಂಗ್ಸ್ ಮೇಲುಗೈ

ಆಡಿರುವ 21 ಪಂದ್ಯಗಳಲ್ಲಿ ಸಿಎಸ್‌ಕೆ ಬಲಿಷ್ಠ ತಂಡವಾಗಿ ಕಾಣಿಸಿದೆ. 21ರಲ್ಲಿ 14 ಪಂದ್ಯಗಳನ್ನು ಸಿಎಸ್‌ಕೆ ಜಯಿಸಿದೆ. ಇನ್ನುಳಿದ 7 ಪಂದ್ಯಗಳಲ್ಲಿ ಆರ್‌ಆರ್ ಗೆದ್ದು ಬೀಗಿದೆ. ಹೀಗಾಗಿ ಆರ್‌ಆರ್‌ಗೆ ಹೋಲಿಸಿದರೆ ಸಿಎಸ್‌ಕೆ ಕೊಂಚ ಬಲಿಷ್ಠ ತಂಡ.

ತಂಡಗಳ ಬಲಾಬಲ

ತಂಡಗಳ ಬಲಾಬಲ

ಈ ಬಾರಿ ಎರಡೂ ತಂಡಗಳೂ ಬಲಿಷ್ಠವಾಗಿವೆ. ಸಿಎಸ್‌ಕೆಯಲ್ಲಿ ಎಂಎಸ್ ಧೋನಿ, ಶೇನ್ ವಾಟ್ಸನ್, ಫಾಪ್ ಡು ಪ್ಲೆಸಿಸ್, ಅಂಬಾಟಿ ರಾಯುಡು, ಲುಂಗಿ ಎನ್‌ಗಿಡಿ, ಸ್ಯಾಮ್ ಕರನ್, ರವಿಂದ್ರ ಜಡೇಜಾ ಅವರಂಥ ಆಟಗಾರರಿದ್ದರೆ, ಆರ್‌ಆರ್‌ನಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ಮಿಲ್ಲರ್, ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್, ಯಶಸ್ವಿ ಜೈಸ್ವಾಲ್ ಇದ್ದಾರೆ. ಇಂಗ್ಲೆಂಡ್ ಅನುಭವಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಈ ಪಂದ್ಯದಲ್ಲಿ ಆಡೋದು ಅನುಮಾನ.

Story first published: Tuesday, September 22, 2020, 15:33 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X