ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಬೃಹತ್ ಗುರಿಯನ್ನು ರೋಚಕವಾಗಿ ಬೆನ್ನತ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್

ipl 2020: rajasthan royals won the match against kings xi punjab

ರಾಜಸ್ಥಾನ್ ರಾಯಲ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ನಡುವಿನ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಕಿಂಗ್ಸ್ ಇಲವೆನ್ ಪಂಜಾಬ್ ನೀಡಿದ ಬೃಹತ್ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲವೆನ್ ಪಂಜಾಬ್ ತಂಡ 223 ರನ್‌ ಗಳಿಸಿತ್ತು. ಮಯಾಂಕ್ ಅಗರ್ವಾಲ್ ಸ್ಪೋಟಕ ಶತಕ ಹಾಗೂ ಕೆಎಲ್ ರಾಹುಲ್ ಭರ್ಜರಿ ಅರ್ಧ ಶತಕದ ನೆರವಿನಿಂದ ಪಂಜಾಬ್ ಈ ಬೃಹತ್ ಮೊತ್ತವನ್ನು ಕಲೆ ಹಾಕಿತು. ಈ ಇಬ್ಬರು ಮೊದಲನೇ ವಿಕೆಟ್‌ಗೆ 183 ರನ್‌ ಸಿಡಿಸಿ ಐಪಿಎಲ್‌ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ರನ್ ಜೊತೆಯಾಟವನ್ನು ದಾಖಲಿಸಿದರು.

ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ಉಂಟಾದರೂ ಎರಡನೇ ವಿಕೆಟ್‌ಗೆ ಭರ್ಜರಿ ಜೊತೆಯಾಟ ಲಭ್ಯವಾಯಿತು. ಸಂಜು ಸ್ಯಾಮ್ಸನ್ ಹಾಗೂ ಸ್ಟೀವ್ ಸ್ಮಿತ್ 81 ರನ್‌ಗಳ ಜೊತೆಯಾಟವನ್ನು ನೀಡದರು. ಸ್ಟೀವ್ ಸ್ಮಿತ್ 27 ಎಸೆತಗಳಲ್ಲಿ 50 ರನ್‌ಗಳಿಸಿ ಔಟಾದರು.

ಈ ಸಂದರ್ಭದಲ್ಲಿ ಸ್ಪೋಟಕವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್‌ಗೆ ಜೊತೆಯಾಗಿದ್ದು ರಾಹುಲ್ ತಿವಾಟಿಯಾ. ಒಂದೆಡೆ ಸಂಜು ಸ್ಯಾಮ್ಸನ್ ಸಿಕ್ಸರ್‌ಗಳ ಮೇಲೆ ಸಿಕ್ಸರ್ ಸಿಡಿಸುತ್ತಿದ್ದರೆ ರಾಹುಲ್ ತಿವಾಟಿಯಾ ಸತತವಾಗಿ ಚೆಂಡನ್ನು ಬಾರಿಸಲು ವಿಫಲರಾಗುತ್ತಿದ್ದರು. ಪೈಪೋಟಿಯ ಮೊತ್ತದತ್ತ ಹೋಗುತ್ತಿದ್ದ ರಾಜಸ್ಥಾನ್ ರಾಯಲ್ಸ್ ಸೋಲಿನತ್ತ ಮುಖಮಾಡಿತ್ತು. ರನ್ ಹಾಗೂ ಎಸೆತಗಳ ನಡುವಿನ ಅಂತರ ದೊಡ್ಡದಾಗುತ್ತಾ ಹೋಯಿತು. ಇದನ್ನು ಗಮನಿಸಿದ ಸಂಜು ಸ್ಯಾಮ್ಸನ್ ತಾನೇ ಸ್ಟ್ರೈಕ್ ಪಡೆದುಕೊಂಡು ಏಕಾಂಗಿ ಹೋರಾಟ ನಡೆಸುವ ಪ್ರಯತ್ನ ನಡೆಸಿದರು.

ರಾಹುಲ್ ತಿವಾಟಿಯಾ ರನ್‌ಗಳಿಸಲು ಪರದಾಡುತ್ತಿದ್ದ ರೀತಿಗೆ ಏಕಾಂಗಿಯಾಗಿ ಹೋರಾಡಲು ಮುಂದಾದರು ಸಂಜು ಸ್ಯಾಮ್ಸನ್. ಹೀಗಾಗಿ ಸಂಪೂರ್ಣ ಒತ್ತಡ ಸಂಜು ಮೇಲೆಯೇ ಬಿತ್ತು. ತಂಡದ ಮೊತ್ತ 161 ರನ್ ಆಗುವಷ್ಟರಲ್ಲಿ ಗೆಲುವಿನ ಭರವಸೆಯನ್ನು ಮೂಡಿಸಿದ್ದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 85 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ರಾಜಸ್ಥಾನ್ ರಾಯಲ್ಸ್ ಸೋಲುವುದು ಖಚಿತವಾಯಿತು. ಆದರೆ ಬಳಿಕ ನಡೆದಿದ್ದು ಎಲ್ಲವೂ ಅನಿರೀಕ್ಷಿತವಾಗಿತ್ತು.

ಆದರೆ ಇಡೀ ಪಂದ್ಯಕ್ಕೆ ಮತ್ತೊಂದು ತಿರುವು ಸಿಕ್ಕಿದ್ದೇ ಆಗ. 23ಎಸೆತಗಳಲ್ಲಿ 17 ರನ್‌ಗಳಿಸಿ ಕುಂಟುತ್ತಿದ್ದ ತಿವಾಟಿಯಾ ಯಾರೂ ಊಹಿಸಿರದ ರೀತಿಯಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಬೌಲರ್‌ಗಳ ಮೇಲೆ ಮುಗಿ ಬಿದ್ದರು. ಶೆಲ್ಡನ್ ಕಾಟ್ರೆಲ್ ಓವರ್‌ ಒಂದರಲ್ಲಿ ಸತತ ನಾಲ್ಕು ಸಿಕ್ಸರ್ ಸಹಿತ ಐದು ಸಿಕ್ಸ್ ಬಾರಿಸಿದರು. ಬಳಿಕ ನೋಡ ನೋಡುತ್ತಲೇ ಇಡೀ ಪಂದ್ಯಕ್ಕೆ ನಾಟಕೀಯ ತಿರುವು ನೀಡಿದರು ರಾಹುಲ್ ತಿವಾಟಿಯಾ.

ಶೆಲ್ಡನ್ ಕಾಟ್ರೆಲ್, ಮೊಹಮದ್ ಶಮಿ ಸೇರಿದಂತೆ ಎಲ್ಲರ ಎಸೆತಗಳನ್ನೂ ಸಿಕ್ಸರ್‌ಗೆ ಅಟ್ಟಲು ಶುರುಮಾಡಿದರು. ಇದೇ ಸಂದರ್ಭ ಜೊತೆಯಾದ ಜೋಫ್ರಾ ಆರ್ಚರ್ ಕೂಡ ಸಿಕ್ಸರ್ ಸಿಡಿಸಲು ಆರಂಭಿಸಿದರು. ನೋಡನೋಡುತ್ತಲೇ ರಾಜಸ್ಥಾನ್ ಗೆಲುವಿನ ಸನಿಹಕ್ಕೆ ಬಂದು ತಲುಪಿತ್ತು. ರಾಜಸ್ಥಾನ್ ರಾಯಲ್ಸ್ ಗೆಲುವಿಗೆ ಅಂತಿಮ ಓವರ್‌ನಲ್ಲಿ 2 ರನ್‌ಗಳ ಅಗತ್ಯವಿದ್ದಾಗ ರಾಹುಲ್ ತಿವಾಟಿಯಾ ವಿಕೆಟ್ ಒಪ್ಪಿಸಿ ಹೊರ ನಡೆದರು.

ಈ ಸಂದರ್ಭದಲ್ಲಿ 31 ಎಸೆತಗಳಲ್ಲಿ 53 ರನ್‌ಗಳಿಸಿ ವಿಲನ್ ಆಗಿದ್ದ ತಿವಾಟಿಯಾ ಪಂದ್ಯದ ಹೀರೋ ಆಗಿ ಬದಲಾಗಿದ್ದರು. ಅಂತಿಮ ಓವರ್‌ನಲ್ಲಿ ಇನ್ನೂ 3 ಎಸೆತಗಳು ಉಳಿದಿರುವಂತೆಯೇ ರಾಜಸ್ಥಾನ್ ರಾಯಲ್ಸ್ ರೋಚಕ ಜಯವನ್ನು ಗಳಿಸಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಬೃಹತ್ ಮೊತವನ್ನು ಬೆನ್ನತ್ತಿದ ದಾಖಲೆಯನ್ನು ಮಾಡಿತು.

Story first published: Monday, September 28, 2020, 10:05 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X