ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'2020ರ ಐಪಿಎಲ್‌ನ ಅತ್ಯುತ್ತಮ ಪ್ರದರ್ಶನ': ಆರ್‌ಸಿಬಿ ಬೌಲರ್ ಹೊಗಳಿದ ಶಾಸ್ತ್ರಿ

IPL 2020: Ravi Shastri Praises RCB bowler, credits him for best IPL performance of 2020

ದುಬೈ: ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನ ರೋಮಾಂಚಕಾರಿ ಆಟಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮುಂಬೈ ಇಂಡಿಯನ್ಸ್ ಪಂದ್ಯ ಸಾಕ್ಷಿಯಾಗಿತ್ತು. ಎರಡೂ ತಂಡಗಳೂ ಪಂದ್ಯವನ್ನು ಸೂಪರ್‌ ಓವರ್‌ನತ್ತ ಕೊಂಡೊಯ್ದಿದ್ದವು. ಆದರೆ ಆರ್‌ಸಿಬಿ ಗೆಲ್ಲುವಲ್ಲಿ ಆ ತಂಡದ ಬೌಲರ್ ವಾಷಿಂಗ್ಟನ್ ಸುಂದರ್ ಪ್ರಮುಖ ಪಾತ್ರ ವಹಿಸಿದ್ದರು.

ಗೌತಮ್ ಗಂಭೀರ್‌ ವಿರುದ್ಧ ತಿರುಗಿಬಿದ್ದ ಧೋನಿ ಫ್ಯಾನ್ಸ್: ಹೊಸ ಪಟ್ಟವನ್ನೇ ಕಟ್ಟಿ ಬಿಟ್ರು!ಗೌತಮ್ ಗಂಭೀರ್‌ ವಿರುದ್ಧ ತಿರುಗಿಬಿದ್ದ ಧೋನಿ ಫ್ಯಾನ್ಸ್: ಹೊಸ ಪಟ್ಟವನ್ನೇ ಕಟ್ಟಿ ಬಿಟ್ರು!

ಬೆಂಗಳೂರು ಮತ್ತು ಮುಂಬೈ ತಂಡ ಐಪಿಎಲ್ 10ನೇ ಪಂದ್ಯದಲ್ಲಿ 201 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಂಡಿದ್ದವು. ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ಪರ ನವದೀಪ್ ಸೈನಿ ಬೌಲಿಂಗ್ ಮಾಡಿದ್ದರು. ಎದುರಾಳಿಗೆ ಕೇವಲ 7 ರನ್ ನೀಡಿದ್ದರು. ಹೀಗಾಗಿ ಆರ್‌ಸಿಬಿ ತಂಡ ಮುಂಬೈ ವಿರುದ್ಧ 8 ರನ್ ಬಾರಿಸಿ ಜಯ ದಾಖಲಿಸಿತ್ತು.

RCB ಡಗೌಟ್: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳುRCB ಡಗೌಟ್: ಅರೆ! ಯಾರಿವಳು ಯಾರಿವಳು ಚಂಗನೆದ್ದು ಕುಣಿವವಳು

ಆರ್‌ಸಿಬಿ ಬೌಲರ್ ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ ಪ್ರದರ್ಶನವನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೊಂಡಾಡಿದ್ದಾರೆ. 'ಬ್ಯಾಟ್ಸ್‌ಮನ್ ಜಗತ್ತಿನಲ್ಲಿ-ಚೆನ್ನೈನಿಂದ ವಾಷಿಂಗ್ಟನ್‌ ವರೆಗೆ. 2020ರಲ್ಲಿ ಇದುವರೆಗಿನ ಅತ್ಯುತ್ತಮ ಐಪಿಎಲ್ ಸಾಧನೆ. ವಿಶೇಷವಾಗಿತ್ತು' ಎಂದು ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.

ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯದ ಇಶಾನ್ ಕಿಶನ್: ಕಾರಣ ತಿಳಿಸಿದ ರೋಹಿತ್ ಶರ್ಮಾಸೂಪರ್ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿಯದ ಇಶಾನ್ ಕಿಶನ್: ಕಾರಣ ತಿಳಿಸಿದ ರೋಹಿತ್ ಶರ್ಮಾ

ಪಂದ್ಯದಲ್ಲಿ ಸುಂದರ್ 4 ಓವರ್‌ ಎಸೆದು 12 ರನ್‌ ನೀಡಿ 1 ವಿಕೆಟ್ ಮುರಿದಿದ್ದರು. ಅದೂ ಮುಂಬೈ ನಾಯಕ ರೋಹಿತ್ ಶರ್ಮಾ ಅವರ ಪ್ರಮುಖ ವಿಕೆಟ್ ಆಗಿತ್ತು. 8 ಎಸೆತಗಳಿಗೆ 8 ರನ್ ಬಾರಿಸಿದ್ದ ರೋಹಿತ್, ಸುಂದರ್ ಓವರ್‌ನಲ್ಲಿ ಪವನ್ ನೇಗಿಗೆ ಕ್ಯಾಚಿತ್ತು ನಿರ್ಗಮಿಸಿದರು.

Story first published: Tuesday, September 29, 2020, 16:22 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X