ವಿಷಲ್ ಹೊಡಿ: ಹೈದರಾಬಾದ್ ವಿರುದ್ಧ ರಾಯುಡು, ಬ್ರಾವೋ ಕಣಕ್ಕೆ!

ಐಪಿಎಲ್ 2020 ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಚೆನ್ನೈ ತಂಡದ ಗೆಲುವಿಗೆ ಕಾರಣರಾಗಿದ್ದ ಅಂಬಾಟಿ ರಾಯುಡು ಗಾಯಗೊಂಡು ತಂಡದಿಂದ ಹೊರಗಿದ್ದು ಅಭಿಮಾನಿಗಳಿಗೆ ಆಘಾತ ತಂದಿದ್ದಂತೂ ನಿಜ.

ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ 48 ಎಸೆತಗಳಲ್ಲಿ 71 ರನ್‌ ಸಿಡಿಸಿ ಮ್ಯಾಚ್ ವಿನ್ನರ್ ಆಗಿ ಮಿಂಚಿದ್ದ ಅಂಬಾಟಿ ರಾಯುಡು ಬಳಿಕ ಗಾಯಗೊಂಡ ಕಾರಣ ಮುಂದಿನ ಎರಡು ಪಂದ್ಯಗಳಿಗೂ ಅಲಭ್ಯರಾಗಿದ್ದರು. ಜೊತೆಗೆ ಅನುಭವಿ ಆಲ್‌ರೌಂಡರ್ ಡ್ವೇಯ್ನೆ ಬ್ರಾವೋ ಈ ಟೂರ್ನಿಯಲ್ಲಿಇನ್ನೂ ಒಂದು ಪಂದ್ಯದಲ್ಲೂ ಕಣಕ್ಕಿಳಿದಿಲ್ಲ. ಆದರೆ, ಚೆನ್ನೈ ಅಭಿಮಾನಿಗಳು ವಿಷಲ್ ಹೊಡೆಯುವಂಥ ಸುದ್ದಿಯನ್ನು ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೊಟ್ಟಿದ್ದಾರೆ.

ಐಪಿಎಲ್ 2020ರ ಅತ್ಯಂತ ದುಬಾರಿ ಕೊನೆ ಓವರ್ ಎಸೆದ ಲುಂಗಿ ಎನ್‌ಗಿಡಿ

ಅಕ್ಟೋಬರ್ 2ರಂದು ಸಿಎಸ್‌ಕೆ ತಂಡವು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದ್ದು, ಬ್ರಾವೋ ಹಾಗೂ ರಾಯುಡು ಇಬ್ಬರೂ ಆಯ್ಕೆ ಮಾಡಲು ಅರ್ಹರಾಗಿದ್ದಾರೆ ಎಂದಿದ್ದಾರೆ. ಸೆಪ್ಟೆಂಬರ್ 25ರ ತನಕ ಸಣ್ಣ ವಿರಾಮದ ನಂತರ ಧೋನಿ ಪಡೆ ಬಲಿಷ್ಠ ಆಡುವ XI ರೊಂದಿಗೆ ಮೈದಾನಕ್ಕಿಳಿಯಲಿದೆ. ಮುಂದಿನ ಐದು ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ಅಂಕಪಟ್ಟಿಯಲ್ಲಿ ಕೊನೆ ಸ್ಥಾನ: ಮುಂಬೈ ವಿರುದ್ಧ ಗೆದ್ದ ಬಳಿಕ ಧೋನಿ ಪಡೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ16 ರನ್‌ನಿಂದ ಪರಾಭವಗೊಂಡಿತ್ತು. ಇನ್ನು ಯುವಕರು ಹೆಚ್ಚಿರುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸಿಎಸ್‌ಕೆ 44 ರನ್‌ ಸೋಲನುಭವಿಸಿತ್ತು.

400 ಪ್ಲಸ್ ರನ್ ಮಳೆಯಲ್ಲಿ ಮಿಂಚಿದ ಸುಂದರ, ಕುಂಬ್ಳೆ ಸಾಲಿಗೆ ಸೇರ್ಪಡೆ

ಕ್ವಾರಂಟೈನ್ ಅವಧಿ ಸರಿ ಹೋಗಲಿಲ್ಲ, ನಾನು ಕೂಡಾ ಬಹುದಿನಗಳ ನಂತರ ಬ್ಯಾಟ್ ಮಾಡುತ್ತಿದ್ದೆ ಹೀಗಾಗಿ ಯುವಕರಿಗೆ ಮೇಲ್ಪಂಕ್ತಿಯಲ್ಲಿ ಆಡಲು ಅವಕಾಶ ನೀಡಿದೆ. ಅವರು ನನಗಿಂತ ಹೆಚ್ಚು ಲಯದಲ್ಲಿದ್ದರು ಎಂದು ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯನ್ನು ಧೋನಿ ಸಮರ್ಥಿಸಿಕೊಂಡಿದ್ದರು.

ವೈಫಲ್ಯ ಸಮರ್ಥಿಸಿಕೊಂಡ ಎಂಎಸ್ ಧೋನಿ, ನಾನ್ಸೆನ್ಸ್ ಎಂದ ಪೀಟರ್ಸನ್

ಆದರೆ, ದುಬೈನಲ್ಲಿ ಡೆಲ್ಲಿ ವಿರುದ್ಧ ಸೋಲಲು ಪಿಚ್ ಬಗ್ಗೆ ಸರಿಯಾಗಿ ತಿಳಿಯದೆ ತೆಗೆದುಕೊಂಡ ನಿರ್ಣಯ ಧೋನಿಗೆ ಉಲ್ಟಾ ಹೊಡೆದಿತ್ತು. ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಇನ್ನೂ ಗೊಂದಲ ಮುಂದುವರೆದಿದೆ. ಫಾಫ್ ಡುಪ್ಲೆಸಿಸ್ ಬಿಟ್ಟರೆ ಸಮರ್ಥ ಬ್ಯಾಟ್ಸ್ ಮನ್ ಕಂಡು ಬಂದಿಲ್ಲ. ಸ್ಪಿನ್ ಅಸ್ತ್ರವೂ ಕೈ ಕೊಡುತ್ತಿದೆ. ಹೀಗಾಗಿ, ಮುಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಯಾವೆಲ್ಲ ಬದಲಾವಣೆ ಮಾಡಬಹುದು ಎಂಬುದು ಕುತೂಹಲಕಾರಿಯಾಗಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, October 2, 2020, 0:39 [IST]
Other articles published on Oct 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X