ಐಪಿಎಲ್ 2020: ಭರ್ಜರಿ ಗೆಲುವಿನ ಬಳಿಕ ಟೀಕಾಕಾರರಿಗೆ ತೀಕ್ಷ್ಣವಾಗಿ ಛಾಟಿ ಬೀಸಿದ ಕೊಹ್ಲಿ

ಕೊಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ 8 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ ಬೀಗಿದೆ. ಈ ಭರ್ಜರಿ ಗೆಲುವಿನ ಬಳಿಕ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ವೇಳೆ ಟೀಕಾಕಾರರಿಗೆ ತೀಕ್ಷ್ಣವಾಗಿ ಪ್ರತ್ಯುತ್ತರವನ್ನು ನೀಡಿದ್ದಾರೆ.

ಕೆಕೆಆರ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸುವ ಮೂಲಕ ಆರ್‌ಸಿಬಿ ಅಂಕಪಟ್ಟಿಯಲ್ಲೂ ಗಮನಾರ್ಹ ಸಾಧನೆಯನ್ನು ಮಾಡಿದೆ. ಎರಡನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿರುವ ಆರ್‌ಸಿಬಿ ಎರಡನೇ ಸ್ಥಾನವನ್ನು ಅಲಂಕರಿಸಿಕೊಂಡಿದೆ.

ಐಪಿಎಲ್‌ನಲ್ಲಿ 20 ಓವರ್‌ ಆಡಿಯೂ ದಾಖಲಾಗಿರುವ ಕಡಿಮೆ ಟೋಟಲ್‌ಗಳು

ಈ ಗೆಲುವಿನ ಬಳಿಕ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, "ತಂಡದ ಯೋಜನೆಗಳಿಗೆ ಪೂರಕವಾಗಿ ಮ್ಯಾನೇಜ್‌ಮೆಂಟ್ ಸೂಕ್ತ ತಂತ್ರಗಳನ್ನು ಅಳವಡಿಸಿಕೊಳ್ಳುವ ಸಂಸ್ಕೃತಿಯನ್ನು ಹೊಂದಿದೆ. ನಿರ್ಧಾರಗಳು ಮನಬಂದಂತೆ ಇರುವುದಿಲ್ಲ. ನಮ್ಮಲ್ಲಿ ಪ್ಲಾನ್ ಎ ಪ್ಲಾನ್ ಬಿ ಇರುತ್ತದೆ. ಆಟಗಾರರು ಇದನ್ನೂ ಪರಿಣಾಮಕಾರಿಯಾಗಿ ಆಟದಲ್ಲಿ ನಿರ್ವಹಿಸುತ್ತಾರೆ. ಹೀಗಾಗಿ ಎಲ್ಲವೂ ಚೆನ್ನಾಗಿ ಕಾಣಿಸುತ್ತದೆ" ಎಂದು ಕೊಹ್ಲಿ ಹೇಳಿದ್ದಾರೆ.

"ಆರ್‌ಸಿಬಿ ತಂಡದ ಮೇಲೆ ಬಹಳಷ್ಟು ಜನರಿಗೆ ನಂಬಿಕೆ ಇದೆ ಎಂದು ನಾನು ಭಾವಿಸುವುದಿಲ್ಲ. ಆದರೆ ನಾನು ನಂಬಿಕೆಯನ್ನಿಟ್ಟುಕೊಂಡಿದ್ದೇನೆ, ಹಾಗೂ ತಂಡದ ಸದಸ್ಯರು ನಂಬಿಕೆಯನ್ನು ಇಟ್ಟಿದ್ದಾರೆ. ಅದಷ್ಟೇ ಸಾಕಾಗುತ್ತದೆ" ಎಂದು ವಿರಾಟ್ ಕೊಹ್ಲಿ ಟೀಕಾಕಾರರಿಗೆ ಉತ್ತರಿಸಿದ್ದಾರೆ.

ಐಪಿಎಲ್ 2020: ಕೆಕೆಆರ್‌ಗೆ ಭರ್ಜರಿಯಾಗಿ ಸೋಲಿನ ರುಚಿ ತೋರಿಸಿದ ಆರ್‌ಸಿಬಿ

"ನಾವು ಇಲ್ಲಿರುವುದು ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಲುವಾಗಿ. ನಮ್ಮಲ್ಲಿ ಕೌಶಲ್ಯತೆಯಿದೆ. ನಿಮ್ಮಲ್ಲಿ ವಿಶ್ವದ ಅತ್ಯುತ್ತಮ ಆಟಗಾರರು ಇದ್ದು ಅವರ ಮೇಲೆ ನಂಬಿಕೆಯೆ ಇಲ್ಲದಿದ್ದರೆ ಅಂಗಳದಲ್ಲಿ ಫಲಿತಾಂಶ ದೊರೆಯಲಾರದು" ಎಂದು ವಿರಾಟ್ ಕೊಹ್ಲಿ ಪಂದ್ಯದ ಮುಕ್ತಾಯದ ನಂತರ ಪ್ರತಿಕ್ರಿಯಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, October 21, 2020, 23:54 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X