ಆರ್‌ಸಿಬಿಯಿಂದ ಪದೇ ಪದೆ ಕನ್ನಡಿಗರಿಗೆ ಅನ್ಯಾಯ: ಈ ಬಾರಿಯಾದರೂ ಸಿಗುತ್ತಾ ನ್ಯಾಯ?

ಐಪಿಎಲ್ ಜ್ವರ ಆರಂಭವಾಗಿ ಅದಾಗಲೇ ಎರಡು ದಿನಗಳಾಗಿದೆ. ಮೊದಲ ಎರಡು ಪಂದ್ಯಗಳಿಂದ ವೀಕ್ಷಕರು ರೋಚಕ ಅನುಭವ ಪಡೆದ ಬಳಿಕ ಇಂದು ಮತ್ತೊಂದು ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಕಣಕ್ಕಿಳಿಯುತ್ತಿರುವುದು ಕನ್ನಡಿಗ ಕ್ರಿಕೆಟ್ ಅಭಿಮಾನಿಗಳಿಗೆ ಉತ್ಸಾಹ ಹೆಚ್ಚಿಸಿದೆ.

ಬೆಂಗಳೂರು ಮೂಲದ ಆರ್‌ಸಿಬಿ ತಂಡ ಈವರೆಗೆ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿದೆ. ಹಾಗಿದ್ದರೂ ಕನ್ನಡಿಗ ಕ್ರಿಕೆಟ್ ಅಭಿಮಾನಿಗಳು ಹೆಮ್ಮೆಯ ನಗರ ಬೆಂಗಳೂರನ್ನು ಪ್ರತಿನಿಸುತ್ತದೆ ಎಂಬ ಒಂದೇ ಕಾರಣದಿಂದಾಗಿ ಸೋಲು ಗೆಲುವನ್ನು ಪಕ್ಕಕ್ಕಿಟ್ಟು ಅಭಿಮಾನವನ್ನು ಮೆರೆಯುತ್ತಾರೆ. ಆದರೂ ಸ್ಥಳೀಯ ಆಟಗಾರರೊಗೆ ಅವಕಾಶವನ್ನು ನೀಡುವ ವಿಚಾರ ಸೇರಿದಂತೆ ಕೆಲ ಭಾವನಾತ್ಮಕ ವಿಚಾರಗಳಲ್ಲಿ ಆರ್‌ಸಿಬಿ ಪ್ರಾಂಚೈಸಿ ನ್ಯಾಯ ಒದಗಿಸುವ ಕಾರ್ಯವನ್ನು ಮಾಡುವಲ್ಲಿ ವಿಫಲವಾಗಿದೆ.

ಐಪಿಎಲ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕನ್ನಡಿಗ ಕೆಎಲ್ ರಾಹುಲ್

ಪ್ರಮುಖವಾಗಿ ಕನ್ನಡಿಗ ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಆರ್‌ಸಿಬಿ ಉತ್ಸಾಹವನ್ನು ತೋರುತ್ತಿಲ್ಲ ಎಂಬುದು ಅಭಿಮಾನಿಗಳ ಪ್ರಮುಖ ಆರೋಪ. ಈ ಬಾರಿಯಾದರೂ ಈ ಆರೋಪದಿಂದ ಆರ್‌ಸಿಬಿ ಮುಕ್ತವಾಗುತ್ತಾ ಕಾದು ನೀಡಬೇಕಿದೆ.

ಕನ್ನಡಿಗ ಆಟಗಾರರನ್ನು ಉಳಿಸಿಕೊಳ್ಳಲು ನಿರುತ್ಸಾಹ

ಕನ್ನಡಿಗ ಆಟಗಾರರನ್ನು ಉಳಿಸಿಕೊಳ್ಳಲು ನಿರುತ್ಸಾಹ

ಪ್ರತಿ ಫ್ರಾಂಚೈಸಿಯೂ ಸ್ಥಳೀಯ ಪ್ರತಿಭಾನ್ವಿತ ಆಟಗಾರರಿಗೆ ಆದ್ಯತೆಯನ್ನು ನೀಡಲು ಬಯಸುತ್ತದೆ. ಆದರೆ ಆರ್‌ಸಿಬಿ ಈ ವಿಚಾರದಲ್ಲಿ ಹಿಂದಿದೆ. ಈ ಹಿಂದೆ ತಂಡದಲ್ಲಿ ಇದ್ದ ಆಟಗಾರರನ್ನು ಉಳಿಸಿಕೊಳ್ಳುವಲ್ಲಿಯೂ ಆರ್‌ಸಿಬಿ ಉತ್ಸಾಹ ತೋರಲಿಲ್ಲ ಎಂಬುದು ಅಭಿಮಾನಿಗಳ ಅಸಮಾದಾನಕ್ಕೆ ಕಾರಣ. ಇನ್ನು ಕೆಲ ಆಟಗಾರರಿಗೆ ಸ್ಕ್ವಾಡ್‌ನಲ್ಲಿದ್ದರೂ ಆಡುವ ಬಳಗದಲ್ಲಿ ಅವಕಾಶ ನೀಡದೆ ಬೆಂಚು ಬಿಸಿ ಮಾಡಿಸಲಾಯಿತು ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪಡಿಕ್ಕಲ್ ಪ್ರತಿಭೆಗೆ ಸಿಗಲಿದೆಯಾ ಮನ್ನಣೆ

ಪಡಿಕ್ಕಲ್ ಪ್ರತಿಭೆಗೆ ಸಿಗಲಿದೆಯಾ ಮನ್ನಣೆ

ಕನ್ನಡಿಗ ಯುವ ಆಟಗಾರ ದೇವದತ್ ಪಡಿಕ್ಕಲ್ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿ ಎಲ್ಲರ ಚಿತ್ತ ತಮ್ಮತ್ತ ಹರಿಯುವಂತೆ ಮಾಡಿದ ಪ್ರತಿಭಾನ್ವಿತ ಆಟಗಾರ. ಕಳೆದ ಬಾರಿಯ ದೇಶಿಯ ಕ್ರಿಕೆಟ್ ಆವೃತ್ತಿಯಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಝಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದು ಮಾತ್ರವಲ್ಲ ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಆಡುವ ತಂಡದಲ್ಲಿ ಅವಕಾಶ ಗಳಿಸಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ತಂಡದ ಲೆಕ್ಕಾಚಾರಗಳು ಏನು?

ತಂಡದ ಲೆಕ್ಕಾಚಾರಗಳು ಏನು?

ಆದರೆ ದೇವದತ್ ಪಡಿಕ್ಕಲ್‌ಗೆ ಅವಕಾಶ ದೊರೆಯುವ ಬಗ್ಗೆ ಅಂತಿಮ ಹಂತದವರೆಗೂ ತಂಡ ಗುಟ್ಟುಬಿಟ್ಟುಕೊಡಲಾರದು. ಆದರೆ ಆರ್‌ಸಿಬಿಯಲ್ಲಿ ಹಲವಾರು ದಿಗ್ಗಜ ಆಟಗಾರರಿದ್ದಾರೆ. ಆರಂಭಿಕ ಸ್ಥಾನದಲ್ಲಿ ಫಿಂಚ್‌ ಖಾಯಂ. ಅವರ ಜೊತೆಗೆ ಪಾರ್ಥೀವ್ ಪಟೆಲ್ ಆಡಲಿಳಿದರೆ ಪಡಿಕ್ಕಲ್‌ಗೆ ಅವಕಾಶ ಕ್ಷೀಣಿಸಲಿದೆ. ಮುಂದಿನ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಪಡಿಕ್ಕಲ್ ವಿಚಾರದಲ್ಲಿ ತಂಡ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಬೇರೆ ತಂಡಗಳಲ್ಲಿ ಮಿಂಚುತ್ತಿದ್ದಾರೆ ಕನ್ನಡಿಗರು

ಬೇರೆ ತಂಡಗಳಲ್ಲಿ ಮಿಂಚುತ್ತಿದ್ದಾರೆ ಕನ್ನಡಿಗರು

ಕನ್ನಡಿಗ ಆಟಗಾರರು ಇತರೆ ತಂಡಗಳಲ್ಲಿ ಹೆಚ್ಚಿನ ಅವಕಾಶವನ್ನು ಪಡೆದುಕೊಂಡಿದ್ದಾರೆ. ಪಂಜಾಬ್ ತಂಡ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗ ಆಟಗಾರರನ್ನು ಹೊಂದಿದ ತಂಡವಾಗಿದ್ದು ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಿದ್ದಾರೆ. ಮಯಾಂಕ್ ಅಗರ್ವಾಲ್ ತಂಡದ ಮೊದಲ ಪಂದ್ಯದಲ್ಲಿ ಸೋಲಿನ ಅಂಚಿನಲ್ಲಿದ್ದ ತಂಡವನ್ನು ಟೈ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಆದರೆ ಕರ್ನಾಟಕ ಮೂಲದ ಫ್ರಾಂಚೈಸಿಯಾಗಿದ್ದು ಆರ್‌ಸಿಬಿ ತೆಗೆದುಕೋಳ್ಳುತ್ತಿರುವ ನಡೆ ಮಾತ್ರ ಅಭಿಮಾನಿಗಳಿಗೆ ಅಸಮಾದಾನಕ್ಕೆ ಕಾರಣವಾಗುತ್ತಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, September 21, 2020, 13:56 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X