ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕನ್ನಡಿಗರ ಹೃದಯ ಗೆದ್ದ ಆರ್‌ಸಿಬಿ ಬೌಲರ್ ಚಾಹಲ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೆಸರಿನಲ್ಲಿರುವ ಬೆಂಗಳೂರು ಎಂಬ ಪದವೇ ಅನೇಕರು ಈ ತಂಡವನ್ನು ಬೆಂಬಲಿಸುವಂತೆ ಮಾಡುತ್ತಿದೆ. ಕಾರಣ ಇದು ನಮ್ಮ ತಂಡವೆಂಬ ಭಾವನಾತ್ಮಕ ಪ್ರೀತಿ. ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್‌ಗೆ ಈರೀತಿಯ ಪ್ರಾದೇಶಿಕ ಭಾವನೆಗಳನ್ನು ಗೌರವಿಸುವ ಮನೋಭಾವ ಇಲ್ಲ ಎಂಬ ಆರೋಪವೂ ಇದೆ.

ಬೆಂಗಳೂರು ಎಫ್‌ಸಿ ಫುಟ್ಬಾಲ್ ತಂಡ ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಪ್ರೀತಿ ಪಡೆದಿದೆ. ಇದೇ ರೀತಿಯ ಕನ್ನಡ ಬಳಕೆಯನ್ನು ಆರ್‌ಸಿಬಿ ತಂಡದಲ್ಲಿ ಕಾಣಲಾಗದು. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ವಿದೇಶಿ ಆಟಗಾರರೂ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಮಿಳಿನಲ್ಲಿ ಪೋಸ್ಟ್ ಮಾಡುತ್ತಾರೆ. ಸಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ತೆಲುಗು ಹಾಡುಗಳಿಗೆ ಟಿಕ್ ಟಾಕ್ ಮಾಡುತ್ತಾರೆ. ಆದರೆ ಈ ರೀತಿಯ ಪ್ರಾದೇಶಿಕ ಭಾಷೆಯ ಪ್ರೀತಿ ಆರ್‌ಸಿಬಿ ಆಟಗಾರರಲ್ಲಿ ಇಲ್ಲ ಎಂಬುದು ಅಭಿಮಾನಿಗಳ ಬೇಸರ. ಮುಂದೆ ಓದಿ...

ಒಂದು ತಂಡ ಒಂದು ಗುರಿ

ಒಂದು ತಂಡ ಒಂದು ಗುರಿ

ಕನ್ನಡಿಗರ ಬೇಸರವನ್ನು ತುಸು ತಗ್ಗಿಸುವ ಪ್ರಯತ್ನವನ್ನು ಆರ್‌ಸಿಬಿಯ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್. ಟ್ವಿಟ್ಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ರೋಮಾಂಚಕ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿರುವ ಚಾಹಲ್ , 'ಒಂದು ತಂಡ ಒಂದು ಗುರಿ' ಎಂದು ಕನ್ನಡದಲ್ಲಿ ಕ್ಯಾಪ್ಷನ್ ಬರೆದು ಕಪ್ ಎಮೋಜಿ ಬಳಸಿದ್ದಾರೆ.

ಕೊಹ್ಲಿ ಕಳಪೆ ಪ್ರದರ್ಶನದಲ್ಲೂ ಆರ್‌ಸಿಬಿ ಖುಷಿ ಪಡುವ ಸಂಗತಿ ಹೇಳಿದ ಆಕಾಶ್ ಚೋಪ್ರ

ಕನ್ನಡ & ಸಂಸ್ಕೃತಿ ಸಚಿವ

ಕನ್ನಡ & ಸಂಸ್ಕೃತಿ ಸಚಿವ

ಚಾಹಲ್ ಅವರ ಈ ಭಾಷಾ ಪ್ರೇಮ ಎಲ್ಲರ ಗಮನ ಸೆಳೆದಿದೆ. ಒಂದು ಕಡೆ ಮ್ಯಾಚ್ ಗೆದ್ದು, ಇನ್ನೊಂದೆಡೆ ನಮ್ಮ ಹೃದಯ ಗೆಲ್ಲುತ್ತಿದ್ದೀರಿ ಎಂದು ಆರ್‌ಸಿಬಿ ಅಭಿಮಾನಿಗಳು ಚಾಹಲ್ ಅವರನ್ನು ಕೊಂಡಾಡಿದ್ದಾರೆ. 'ಚಾಹಲ್ ಅವರನ್ನೇ ನಮ್ಮ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನಾಗಿ ಮಾಡಿ' ಎಂದು ಟ್ವಿಟ್ಟರಿಗರೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ನಮ್ಮ ಬೆಂಗಳೂರು ಕುಟುಂಬ

ನಮ್ಮ ಬೆಂಗಳೂರು ಕುಟುಂಬ

ಅಂದಹಾಗೆ, ಚಾಹಲ್ ತಾವು ಪ್ರತಿನಿಧಿಸುವ ತಂಡದ ರಾಜ್ಯಭಾಷೆಯನ್ನು ಬಳಸಿದ್ದು ಇದು ಮೊದಲ ಸಲವೇನಲ್ಲ. ಮಾರ್ಚ್ ತಿಂಗಳಲ್ಲಿ ಐಪಿಎಲ್ ಪ್ರಾರಂಭಿಸಲು ತಯಾರಿ ನಡೆಸುವಾಗಲೂ ಅವರು 'ನಮ್ಮ ಬೆಂಗಳೂರು ಕುಟುಂಬ, ರೆಡೀ ನಾ?' ಎಂದು ಕೇಳುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಡೆದಿದ್ದರು.

ಐಪಿಎಲ್‌ನಲ್ಲಿ ಸೂಪರ್ ಓವರ್‌ನಲ್ಲಿ ಕಡಿಮೆ ರನ್ ನೀಡಿದ ಬೌಲರ್‌ಗಳು

ಉಮೇಶ್ ಯಾದವ್ ಕನ್ನಡ

ಉಮೇಶ್ ಯಾದವ್ ಕನ್ನಡ

ವೇಗದ ಬೌಲರ್ ಉಮೇಶ್ ಯಾದವ್ ಕೂಡ ಕೆಲವು ದಿನಗಳ ಹಿಂದೆ 'ನನ್ನ ಹೃದಯ ಯಾವಾಗಲೂ ಆರ್‌ಸಿಬಿಗಾಗಿ ಬಡಿಯುತ್ತದೆ' ಎಂದು ಆರ್‌ಸಿಬಿ ಆಂಥೆಮ್ಅನ್ನು ಹಂಚಿಕೊಂಡಿದ್ದರು. ಆಗ ಉಮೇಶ್ ಯಾದವ್ ಅವರನ್ನು ಫ್ಯಾನ್ಸ್ ಕೊಂಡಾಡಿದ್ದರು. ಆದರೆ ಎರಡು ಪಂದ್ಯಗಳಲ್ಲಿ ಅವರು ನೀಡಿದ ಕಳಪೆ ಪ್ರದರ್ಶನ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು.

ಆರ್‌ಸಿಬಿ Vs ಮುಂಬೈ ಕದನ: ಮರೆಯಲಾಗದ ಐದು ಸ್ಮರಣೀಯ ಘಟನೆಗಳು

Story first published: Tuesday, October 6, 2020, 15:12 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X