ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಪಾಲಿನ ದೇವದೂತ ದೇವದತ್ ಪಡಿಕ್ಕಲ್

ಐಪಿಎಲ್ 13ನೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳು ಟೂರ್ನಿ ಆರಂಭದಿಂದಲೇ ಸ್ವಲ್ಪ ಜಾಸ್ತಿನೆ ಖುಷಿಯಾಗಿದ್ದಾರೆ. ಏಕೆಂದರೆ ಈ ಬಾರಿ ಆರ್‌ಸಿಬಿಯ ಸೋಲಿನ ಅಭಿಯಾನ ಆರಂಭಿಸಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನ ಭರ್ಜರಿಯಾಗಿ ಗೆದ್ದಿದೆ.

ಆರ್‌ಸಿಬಿ ಗೆಲುವಿನ ಹಿಂದೆ ಮಿಸ್ಟರ್ 360 ಅನುಗ್ರಹ ಹೆಚ್ಚಾಗಿಯೇ ಇದೆ. ಆಸೀಸ್ ಹಿಟ್ಟರ್ ಆ್ಯರೋನ್ ಫಿಂಚ್ ಪಾತ್ರವು ಗಮನಾರ್ಹವಾಗಿದೆ. ಇದರ ಜೊತೆಗೆ ಈ ಬಾರಿ ಆರ್‌ಸಿಬಿ ತಂಡಕ್ಕೆ ಸಿಕ್ಕಿರುವ ಬಹುದೊಡ್ಡ ಗಿಫ್ಟ್ ದೇವದತ್ ಪಡಿಕ್ಕಲ್.

ಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್‌ ದೇವರ ಮನಗೆದ್ದಿದ್ದ ನಿಕೋಲಸ್ ಪೂರನ್‌ನ ಕಷ್ಟದ ದಿನಗಳುಅದ್ಭುತ ಫೀಲ್ಡಿಂಗ್‌ನಿಂದ ಕ್ರಿಕೆಟ್‌ ದೇವರ ಮನಗೆದ್ದಿದ್ದ ನಿಕೋಲಸ್ ಪೂರನ್‌ನ ಕಷ್ಟದ ದಿನಗಳು

ಆರ್‌ಸಿಬಿ ಪಾಲಿನ ದೇವದೂತನೇ ದೇವದತ್ ಪಡಿಕ್ಕಲ್..!

ಆರ್‌ಸಿಬಿ ಪಾಲಿನ ದೇವದೂತನೇ ದೇವದತ್ ಪಡಿಕ್ಕಲ್..!

ದೇವದತ್ ಪಡಿಕ್ಕಲ್.. ಆರ್ ಸಿಬಿ ಪಾಲಿಗೆ ದೇವದೂತನ ರೂಪದಲ್ಲಿ ಸಿಕ್ಕಿರೋ ಪ್ರತಿಭಾವಂತ ಕನ್ನಡಿಗ. ಐಪಿಎಲ್ ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಹೈದ್ರಾಬಾದ್ ವಿರುದ್ಧ ಚೊಚ್ಚಲ ಅರ್ಧಶತಕ ಸಿಡಿಸಿದ್ದ ಪಡಿಕ್ಕಲ್, ಇತ್ತೀಚೆಗಷ್ಟೇ ಬಲಿಷ್ಠ ಮುಂಬೈ ವಿರುದ್ಧದ ಪಂದ್ಯದಲ್ಲೂ ಭರ್ಜರಿ ಬ್ಯಾಟಿಂಗ್ ಮಾಡಿದ್ದಾನೆ.

ಮುಂಬೈ ವಿರುದ್ಧ 40 ಬಾಲ್ ಗಳನ್ನ ಎದುರಿಸಿದ ದೇವದತ್ ಪಡಿಕ್ಕಲ್, 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 54 ರನ್ ಗಳಿಸಿ, ಆರ್ ಸಿಬಿ ಬಿಗ್ ಸ್ಕೋರ್ ಕಲೆಹಾಕೋದಕ್ಕೆ ಕಾರಣವಾಗಿದ್ರು.

ಕೊಹ್ಲಿ ಕೃಪಾಕಟಾಕ್ಷ ಪಡಿಕ್ಕಲ್ ಮೇಲಿದೆ

ಕೊಹ್ಲಿ ಕೃಪಾಕಟಾಕ್ಷ ಪಡಿಕ್ಕಲ್ ಮೇಲಿದೆ

ಹೌದು, ಪಾರ್ಥೀವ್ ಪಟೇಲ್‌ರಂತಹ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಇರಬೇಕಾದ್ರೆ, ಯುವ ಆಟಗಾರ ದೇವದತ್ ಪಡಿಕ್ಕಲ್ ಮೊದಲ ಪಂದ್ಯದಿಂದಲೇ ಕಣಕ್ಕಿಳಿಯಲು ಕ್ಯಾಪ್ಟನ್ ಕೊಹ್ಲಿ ಒಪ್ಪಿದ್ದಾರೆ ಅಂದ ಮೇಲೆ ಪಡಿಕ್ಕಲ್ ಮೇಲೆ ಕ್ಯಾಪ್ಟನ್ ಕೃಪಾಕಟಾಕ್ಷ ಇರಲೇಬೇಕು.

ಇದರ ಜೊತೆಗೆ ಸಹಜವಾಗಿ ಕ್ಯಾಪ್ಟನ್ ಕೊಹ್ಲಿ, ಮಿಸ್ ಫೀಲ್ಡಿಂಗ್ ಮಾಡಿದ್ರೆ ಕೋಪಗೊಳ್ತಾರೆ. ಆದ್ರೆ ಮಿಸ್ ಫೀಲ್ಡಿಂಗ್ ಮಾಡಿದ ಪಡಿಕ್ಕಲ್ ಮೇಲೆ ಕ್ಯಾಪ್ಟನ್ ಕೊಹ್ಲಿ ಕೂಗಾಡದೇ, ಬೆಂಬಲವನ್ನ ನೀಡಿದ್ರು. ಅಷ್ಟರ ಮಟ್ಟಿಗೆ ಕನ್ನಡದ ಹುಡುಗ ನಾಯಕನ ನಂಬಿಕೆ ಉಳಿಸಿಕೊಂಡಿದ್ದಾನೆ...

ದ್ರಾವಿಡ್ ಜತೆ ಬ್ಯಾಟಿಂಗ್ ಮಾಡುತ್ತೀನೆಂದು ಕನಸಲ್ಲೂ ಯೋಚಿಸಿರಲಿಲ್ಲ: ಸಂಜು ಸ್ಯಾಮ್ಸನ್

ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್‌ ಈತ!

ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್‌ ಈತ!

ಇನ್ನು ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಆಗೋದ್ರಲ್ಲಿ ಅನುಮಾನವೇ ಇಲ್ಲ ಅಂತ, ದಿಗ್ಗಜ ಸುನಿಲ್ ಗವಾಸ್ಕರ್, ಜಿ.ಆರ್ ವಿಶ್ವನಾಥ್ ನುಡಿದ ಭವಿಷ್ಯವನ್ನ ಬಾಯ್ಬಿಟ್ಟಿದ್ದಾರೆ...

‘‘ ಗುಂಡಪ್ಪ ವಿಶ್ವನಾಥ್ ಒಬ್ಬ ಯುವ ಕ್ರಿಕೆಟಿಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡ್ತಾರೆ ಅಂದ್ರೆ, ಅವರು ನಿಜಕ್ಕೂ ಪ್ರತಿಭಾವಂತರೆ. ಯಾಕಂದ್ರೆ ವಿಶ್ವನಾಥ್, ರಾಹುಲ್ ದ್ರಾವಿಡ್ ಮತ್ತು ಕೆ.ಎಲ್.ರಾಹುಲ್ ವಿಚಾರದಲ್ಲೂ ಮೆಚ್ಚುಗೆಯ ಮಾತುಗಳನ್ನಾಡಿದ್ರು. ಈಗ ದೇವದತ್ ಪಡಿಕ್ಕಲ್ ಪ್ರತಿಭೆ ಬಗ್ಗೆಯೂ ಗುಣಗಾನ ಮಾಡಿದ್ದಾರೆ.'' ಎಂದು ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಹುಟ್ಟಿದ್ದೆಲ್ಲೊ, ಬೆಳೆದಿದ್ದು ಮತ್ತೆಲ್ಲೊ.. ಭವಿಷ್ಯ ರೂಪಿಸಿಕೊಂಡಿದ್ದು ಬೆಂಗಳೂರಿನಲ್ಲಿ!

ಹುಟ್ಟಿದ್ದೆಲ್ಲೊ, ಬೆಳೆದಿದ್ದು ಮತ್ತೆಲ್ಲೊ.. ಭವಿಷ್ಯ ರೂಪಿಸಿಕೊಂಡಿದ್ದು ಬೆಂಗಳೂರಿನಲ್ಲಿ!

ಹೌದು, ಕುತೂಹಲಕಾರಿ ವಿಷಯ ಏನಪ್ಪಾ ಅಂದರೆ ದೇವದತ್ ಹುಟ್ಟಿದ್ದು ಕೇರಳದಲ್ಲಿ.. ಬೆಳೆದಿದ್ದು ಹೈದ್ರಾಬಾದ್ ನಲ್ಲಿ. ಆದ್ರೆ ಭವ್ಯ ಭವಿಷ್ಯ ರೂಪಿಸಿಕೊಂಡಿದ್ದು ಬೆಂಗಳೂರಿನಲ್ಲಿ. ಹೀಗಾಗಿ ದೇವದತ್ ಅಚ್ಚ ಕನ್ನಡಿಗನಂತೆ ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ಪಡಿಕ್ಕಲ್ ಕನ್ನಡಿಗರ ಮನಗೆದ್ದಿದ್ದಾನೆ.

ಐಪಿಎಲ್ ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಪಡಿಕ್ಕಲ್ ಎರಡು ಅರ್ಧಶತಕ ಸಿಡಿಸಿ, ತಾನೆಂತಾ ಪ್ರತಿಭಾವಂತ ಕ್ರಿಕೆಟಿಗ್ ಅನ್ನೋದನ್ನು ಸಾಭೀತು ಪಡಿಸಿದ್ದಾನೆ. ಐಪಿಎಲ್‌ನಲ್ಲಿ ಅವರ ಈ ಪ್ರದರ್ಶನ ಹೀಗೆಯೇ ಮುಂದುವರಿಯಲಿ. ಜೊತೆಗೆ ಅವರ ಪ್ರದರ್ಶನವೇ ಟೀಮ್ ಇಂಡಿಯಾ ಕದ ತಟ್ಟಲಿ.

Story first published: Thursday, October 1, 2020, 9:59 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X