ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮುಂಬೈ ವಿರುದ್ಧ ಗೆಲ್ಲಲು ಆರ್‌ಸಿಬಿಗೆ ಈ ಮೂರು ಬದಲಾವಣೆಗಳು ಅನಿವಾರ್ಯ

Ipl 2020: Rcb Need 3 Changes to Win Against Mumbai Indians

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಆವೃತ್ತಿ ಆರಂಭಿಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗೆಲ್ಲುವ ಮೂಲಕ ಟೂರ್ನಿಯನ್ನು ಆರಂಭಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ಹೀನಾಯವಾಗಿ ಸೋತು ಮುಖಭಂಗವನ್ನು ಅನುಭವಿಸಿದೆ. ಯುಜುವೇಂದ್ರ ಚಾಹಲ್ ಹಾಗೂ ವಾಶಿಂಗ್ಟನ್ ಸುಂದರ್ ಹೊರತುಪಡಿಸಿ ಉಳಿದ ಎಲ್ಲಾ ಬೌಲರ್‌ಗಳು ನೀರಸ ಪ್ರದರ್ಶನವನ್ನು ನೀಡಿದರು.

ಆರ್‌ಸಿಬಿ ವೇಗದ ಬೌಲಿಂಗ್‌ ಪಡೆಯಲ್ಲಿ ಡೇಲ್ ಸ್ಟೈನ್, ಉಮೇಶ್ ಯಾದವ್ ಹಾಗೂ ಸವ್‌ದೀಪ್ ಸೈನಿ ಅವರಂತಾ ದೊಡ್ಡ ಆಟಗಾರರನ್ನು ಹೊಂದಿತ್ತು. ಆದರೆ ಈ ಮೂವರು ಬೌಲರ್‌ಗಳು ಎಸೆದ 11 ಓವರ್‌ಗಳಲ್ಲಿ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ಸಫಲವಾಗದಿರುವುದು ತಂಡದ ಪಾಲಿಗೆ ಬಿಸಿತುಪ್ಪವಾಗಿದೆ.

ಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆ

ಸೋಮವಾರ ಆರ್‌ಸಿಬಿ ತಂಡ ತನ್ನ ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ. ಆದರೆ ಮುಂದಿನ ಪಂದ್ಯದಲ್ಲಿ ಗೆಲುವನ್ನು ಪಡೆದುಕೊಳ್ಳಬೇಕಾದರೆ ತಂಡದಲ್ಲಿ ಕೆಲ ಅನಿವಾರ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಹಾಗಾದರೆ ಆ ಬದಲಾವಣೆಗಳು ಯಾವುದು ಮುಂದೆ ಓದಿ..

ಜೋಶ್ ಫಿಲಿಪ್ಪೆ ಸ್ಥಾನಕ್ಕೆ ಪಾರ್ಥೀವ್ ಪಟೇಲ್

ಜೋಶ್ ಫಿಲಿಪ್ಪೆ ಸ್ಥಾನಕ್ಕೆ ಪಾರ್ಥೀವ್ ಪಟೇಲ್

ಬಿಗ್‌ಬ್ಯಾಷ್ ಕ್ರಿಕೆಟ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದ ಜೋಶ್ ಫಿಲಿಪ್ಪೆಯನ್ನು ಭಾರೀ ನಿರೀಕ್ಷೆಯನ್ನು ಇಟ್ಟು ಆರ್‌ಸಿಬಿ ತಂಡಕ್ಕೆ ಸೇರ್ಪಡೆಗೊಳಿಸಿತು. ಆದರೆ ಜೋಶ್ ಫಿಲಿಪ್ಪೆ ಪ್ರದರ್ಶನ ಆರ್‌ಸಿಬಿ ಪಾಲಿಗೆ ನಿರಾಶಾದಾಯಕವಾಗಿದೆ. ಮೊದಲ ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಕಣಕ್ಕಿದಿದ್ದ ಫಿಲಿಪ್ಪೆಯನ್ನು ಎರಡನೇ ಪಂದ್ಯದಲ್ಲು ನಾಯಕ ಕೊಹ್ಲಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ದರು. ಆದರೂ ಫಿಲಿಪ್ಪೆ ವಿಫಲರಾಗಿದ್ದು ಆ ಸ್ಥಾನವನ್ನು ಪಾರ್ಥೀವ್ ಪಟೇಲ್‌ಗೆ ನೀಡುವ ಅನಿವಾರ್ಯತೆ ಉಂಟಾಗಿದೆ.

ಫಿಂಚ್ ಬದಲು ಮೊಯಿನ್ ಅಲಿಗೆ ಅವಕಾಶ

ಫಿಂಚ್ ಬದಲು ಮೊಯಿನ್ ಅಲಿಗೆ ಅವಕಾಶ

ಕಳೆದ ಆವೃತ್ತಿಯಲ್ಲಿ ಮೊಯಿನ್ ಆಲಿ ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರವಾಗಿದ್ದವರು ಮೊಯಿನ್ ಅಲಿ. ಕಳೆದ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಿಂದ ಮೊಯಿನ್ ಅಲಿ 164.41ರ ಸ್ಟ್ರೈಕ್‌ರೇಟ್‌ನಲ್ಲಿ 220 ರನ್‌ಗಳಿಸಿದ್ದರು. ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ಗೆ ಬೆಂಬಲವಾಗಿ ನಿಲ್ಲುವ ಮೂಲಕ ಆರ್‌ಸಿಬಿಯ ಮಧ್ಯಮ ಕ್ರಮಾಂಕಕ್ಕೆ ಆಧಾರವಾಗಲಿದ್ದಾರೆ ಮೊಯಿನ್ ಅಲಿ. ಯುಎಇನಲ್ಲಿ ಸ್ಪಿನ್ ಸಹಕಾರಿಯಾಗುವ ಪಿಚ್‌ನಲ್ಲಿ ಬೌಲಿಂಗ್ ವಿಭಾಗದಲ್ಲೂ ತಂಡಕ್ಕೆ ನೆರವಾಗುವ ಸಾಧ್ಯತೆಯಿದೆ.

ಫಿಂಚ್ ನೀರಸ ಪ್ರದರ್ಶನ

ಫಿಂಚ್ ನೀರಸ ಪ್ರದರ್ಶನ

ಗುಜರಾತ್ ಲಯನ್ಸ್ ಐಪಿಎಲ್‌ನಿಂದ ಹೊರಬಿದ್ದ ನಂತರ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಾ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. 2018ರ ಆವೃತ್ತಿಯಲ್ಲಿ ಪಂಜಾಬ್ ಪರ ಕಣಕ್ಕಿಳಿದಿದ್ದ ಫಿಂಚ್ ಕೇವಲ 16.75ರ ಸರಾಸರಿಯಲ್ಲಿ 134 ರನ್ ಗಳಿಸಿದ್ದರು. ಈ ಬಾರಿಯ 2 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಫಿಂಚ್ 102.08ರ ಸ್ಟ್ರೈಕ್‌ರೇಟ್‌ನಲ್ಲಿ 49 ರನ್‌ಗಳಿಸಲಷ್ಟೇ ಶಕ್ತರಾಗಿದ್ದಾರೆ. ಫಿಂಚ್‌ ನಿಧಾನಗತಿಯ ಆರಂಭ ಯುವ ಆಟಗಾರ ಪಡಿಕ್ಕಲ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ.

ಉಮೇಶ್ ಯಾದವ್ ಸ್ಥಾನಕ್ಕೆ ಇಸುರು ಉದನ

ಉಮೇಶ್ ಯಾದವ್ ಸ್ಥಾನಕ್ಕೆ ಇಸುರು ಉದನ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಹರಾಜಿನಲ್ಲಿ ಇಬ್ಬರು ವೇಗದ ಬೌಲರ್ ಆಲ್‌ರೌಂಡರ್‌ಗಳನ್ನು ತೆಕ್ಕೆಗೆ ಹಾಕಿಕೊಂಡಿತ್ತು. ಇದರಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೊರಿಸ್ ಆಡಲು ಸಂಪೂರ್ಣವಾಗಿ ಫಿಟ್ ಆಗಿಲ್ಲ. ಆದರೆ ಇಸುರು ಉದಾನ ಲಭ್ಯರಿದ್ದಾರೆ. ಹೀಗಾಗಿ ಆರ್‌ಸಿಬಿ ಪಾಲಿಗೆ ಕಳೆದ ಎರಡು ಪಂದ್ಯಗಳಲ್ಲಿ ಅತ್ಯಂತ ದುಬಾರಿಯಾಗಿರುವ ಉಮೇಶ್ ಯಾದವ್ ಸ್ಥಾನವನ್ನು ಶ್ರೀಲಂಕಾದ ಆಟಗಾರನಿಗೆ ನೀಡುವುದು ತಂಡದ ದೃಷ್ಠಿಯಿಂದ ಸೂಕ್ತ ನಿರ್ಧಾರವಾಗಿರಲಿದೆ.

Story first published: Tuesday, October 6, 2020, 15:28 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X