ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿಡಿ, ಕೊಹ್ಲಿ ಜೊತೆಗಿನ ಅನುಭವ ಹಂಚಿಕೊಂಡ ಗುರ್‌ಕೀರತ್ ಸಿಂಗ್

IPL 2020: RCB Player Gurkeerat Singh Mann shares his experience of batting with Virat Kohli and ABD

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸುಲಭ ಗೆಲುವು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಅಷ್ಟೇ ಅಲ್ಲ, ಆರ್‌ಸಿಬಿಯ ಮೈನಸ್ ನೆಟ್ ರನ್‌ರೇಟ್‌ ಪ್ಲಸ್ ನೆಟ್‌ ರನ್‌ ರೇಟ್ ಆಗಿ ಬದಲಾಗಿದೆ ಕೂಡ.

KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?

ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗ ಎರಡೂ ಈ ಉತ್ತಮ ಪ್ರದರ್ಶನ ನೀಡುತ್ತಿದೆ. ಇದೇ ಕಾರಣಕ್ಕೆ ಬುಧವಾರದ ಪಂದ್ಯದಲ್ಲಿ ಕೆಕೆಆರ್ ವಿರುದ್ಧದ ಆರ್‌ಸಿಬಿ ಭರ್ಜರಿ 8 ವಿಕೆಟ್‌ಗಳ ಜಯ ದಾಖಲಿಸಿತ್ತು. ಅದೂ 13.3ನೇ ಓವರ್‌ನಲ್ಲಿ ಕೋಲ್ಕತ್ತಾ ನೀಡಿದ್ದ 85 ರನ್ ಗುರಿ ತಲುಪಿತ್ತು.

ಬೆಂಗಳೂರು ತಂಡದ ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ 3, ಯುಜುವೇಂದ್ರ ಚಾಹಲ್ 2 ವಿಕೆಟ್‌ನಿಂದ ಗಮನ ಸೆಳೆದಿದ್ದರು. ಬ್ಯಾಟಿಂಗ್ ವಿಭಾಗದಲ್ಲಿ ದೇವದತ್ ಪಡಿಕ್ಕಲ್ 25, ಆ್ಯರನ್ ಫಿಂಚ್ 16, ಗುರ್‌ಕೀರತ್ ಸಿಂಗ್ ಮಾನ್ ಅಜೇಯ 21, ವಿರಾಟ್ ಕೊಹ್ಲಿ ಅಜೇಯ 18 ರನ್‌ನೊಂದಿಗೆ ಬಲ ತುಂಬಿದ್ದರು.

ಐಪಿಎಲ್‌ನಲ್ಲಿ 20 ಓವರ್‌ ಆಡಿಯೂ ದಾಖಲಾಗಿರುವ ಕಡಿಮೆ ಟೋಟಲ್‌ಗಳುಐಪಿಎಲ್‌ನಲ್ಲಿ 20 ಓವರ್‌ ಆಡಿಯೂ ದಾಖಲಾಗಿರುವ ಕಡಿಮೆ ಟೋಟಲ್‌ಗಳು

ಅಕ್ಟೋಬರ್ 21ರಂದು ಕೊಹ್ಲಿ ಜೊತೆಗೆ ಕ್ರೀಸ್‌ನಲ್ಲಿ ಕಳೆಯುವ ಅವಕಾಶ ಸಿಕ್ಕಿದ್ದರಿಂದ ಗುರ್‌ಕೀರತ್ ಸಿಂಗ್ ಮಾನ್, ಕೊಹ್ಲಿ ಮತ್ತು ಎಬಿಡಿ ಜೊತೆಗಿನ ಅನುಭವ ಹಂಚಿಕೊಂಡಿದ್ದಾರೆ. ಕಳೆದ ಬಾರಿಯ ಎಬಿಡಿ ಜೊತೆ ಮತ್ತು ಈ ಬಾರಿ ಕೊಹ್ಲಿ ಜೊತೆ ಇರುವ ಫೋಟೋ ಟ್ವೀಟ್ ಮಾಡಿರುವ ಸಿಂಗ್ ಇಬ್ಬರು ಪ್ರತಿಭಾನ್ವಿತ ಕ್ರಿಕೆಟಿಗರ ಜೊತೆ ಆಡುವಾಗಿನ ಖುಷಿ ಹೇಳಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಗುರ್‌ಕೀರತ್, 'ಹಿಂದಿನ ಸಾರಿ ಎಬಿ ಡಿ ವಿಲಿಯರ್ಸ್ ಸರ್ ಜೊತೆ, ಇವತ್ತು ವಿರಾಟ್ ಕೊಹ್ಲಿ ಭಾಯ್ ಜೊತೆ ಸಾಕಷ್ಟು ಕಲಿಯಲು ಸಿಕ್ಕಿತು. ಅವರ ಜೊತೆ ಆಡೋದು ಯಾವಾಗಲೂ ಒಳ್ಳೆಯ ಅನುಭವ ನೀಡುತ್ತದೆ. ಇಂಥದ್ದೇ ಖುಷಿಯ ಕ್ಷಣಗಳು ಇನ್ನಷ್ಟು ಬರಲಿ ಎನ್ನುವ ಆಶಾಭಾವನೆ ನನ್ನದು' ಎಂದು ಬರೆದುಕೊಂಡಿದ್ದಾರೆ.

Story first published: Thursday, October 22, 2020, 16:25 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X