ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CSK ವಿರುದ್ಧ ಹಸಿರು ಜರ್ಸಿಯಲ್ಲಿ ಕಣಕ್ಕಿಳಿಯಲಿದೆ RCB

IPL 2020: RCB Players Wearing Green Jersey Against CSK On October 25

ಪ್ರತಿ ಐಪಿಎಲ್ ಟೂರ್ನಿಯಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷವೂ ಗೋ ಗ್ರೀನ್ ಅಭಿಯಾನಕ್ಕೆ ಒತ್ತು ನೀಡಿದೆ. ಈ ಬಾರಿ ದುಬೈ ಇಂಟರ್‌ನ್ಯಾಷ್‌ನಲ್ ಸ್ಟೇಡಿಯಂನಲ್ಲಿ ಅಕ್ಟೋಬರ್ 28 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗ್ರೀನ್ ಜರ್ಸಿ ತೊಟ್ಟು ಕಣಕ್ಕಿಳಿಯಲಿದೆ.

ಪರಿಸರ ಸಂರಕ್ಷಣೆ ಹಾಗೂ ತಾಜ್ಯಗಳ ಮರುಬಳಕೆಗೆ ಒತ್ತು ನೀಡವು ಉದ್ದೇಶದಿಂದ ಪ್ರತಿ ಆವೃತ್ತಿಯಲ್ಲಿ RCB ಗೋ ಗ್ರೀನ್ ಅಭಿಯಾನವನ್ನ ಪಾಲಿಸಿಕೊಂಡು ಬಂದಿದೆ. ಹಸಿರು ಬಣ್ಣದ RCB ಜರ್ಸಿ ಕೂಡ ತ್ಯಾಜ್ಯಗಳ ಮರುಬಳಕೆಯಿಂದ ತಯಾರಿಸಲಾಗಿದೆ.

ದೇವದತ್ ಪಡಿಕ್ಕಲ್ 'ಭಾರತೀಯ ಕ್ರಿಕೆಟ್‌ನ ಭವಿಷ್ಯ' ಎಂದ ಕ್ರಿಸ್ ಮೊರಿಸ್ದೇವದತ್ ಪಡಿಕ್ಕಲ್ 'ಭಾರತೀಯ ಕ್ರಿಕೆಟ್‌ನ ಭವಿಷ್ಯ' ಎಂದ ಕ್ರಿಸ್ ಮೊರಿಸ್

ಪ್ರತಿ ಬಾರಿ ಬಹುತೇಕ ಗೋ ಗ್ರೀನ್ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿತ್ತು, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಆರ್‌ಸಿಬಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಇಡೀ ಮೈದಾನವೇ ಹಸಿರುಮಯಗೊಳ್ಳುತ್ತಿತ್ತು. ಆದರೆ ಈ ಬಾರಿ ಟೂರ್ನಮೆಂಟ್ ಯುಎಇನಲ್ಲಿ ನಡೆಯುತ್ತಿರುವುದರಿಂದ ದುಬೈ ಅಂಗಳದಲ್ಲಿ ಆರ್‌ಸಿಬಿ ಹಸಿರು ಜರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಇಷ್ಟಲ್ಲದೆ ಐಪಿಎಲ್ ಟೂರ್ನಿಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಏಕೈಕ ತಂಡ ಅನ್ನೋ ಹೆಗ್ಗಳಿಕೆಯು ಆರ್‌ಸಿಬಿಗಿದೆ.

ಇನ್ನು ಭಾನುವಾರ ಗೋ ಗ್ರೀನ್ ಪಂದ್ಯದ ಕುರಿತು ಆರ್‌ಸಿಬಿ ಅಧಿಕೃತ ಯೂಟ್ಯೂಬ್ ಅಕೌಂಟ್‌ನಿಂದ ವೀಡಿಯೋ ಬಿಡುಗಡೆ ಮಾಡಲಾಗಿದೆ. ಎಬಿ ಡಿ ವಿಲಿಯರ್ಸ್, ಡೇಲ್ ಸ್ಟೇನ್, ವಾಷಿಂಗ್ಟನ್ ಸುಂದರ್ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪರಿಸರ ರಕ್ಷಣೆಯ ಮಹತ್ವದ ಕುರಿತು ಸಂದೇಶ ಸಾರಿದ್ದಾರೆ.

Story first published: Saturday, October 24, 2020, 14:42 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X