ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಥೀಮ್ ಸಾಂಗ್ ಬಿಡುಗಡೆ:ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದ ಆರ್‌ಸಿಬಿ ಫ್ರಾಂಚೈಸಿ

Ipl 2020: Rcb Released Its Official Team Anthem Ahead Of New Season

ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ತನ್ನ ಥೀಮ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಆರ್‌ಸಿಬಿ ತಂಡದ ಅಭಿಮಾನಿಗಳಿಗ ಜೋಶ್ ತುಂಬಲು ತನ್ನ ಹೊಸ ಥೀಮ್ ಸಾಂಗ್‌ಅನ್ನು ಆರ್‌ಸಿಬಿ ಫ್ರಾಂಚೈಸಿ ಬಿಡುಗಡೆಗೊಳಿಸಿದೆ. ಯುಎಇನಲ್ಲಿ ಅಭ್ಯಾಸವನ್ನು ನಡೆಸುತ್ತಿರುವ ಆರ್‌ಸಿಬಿ ಆಟಗಾರರ ವಿಶೇಷ ಕ್ಷಣಗಳ ದೃಶ್ಯಗಳನ್ನು ಹೊಂದಿದೆ ಈ ಥೀಮ್ ಸಾಂಗ್.

ಎರಡು ಕನ್ನಡದ ಸಾಲುಗಳನ್ನು ಹೊಂದಿರುವ ಈ ಥೀಮ್ ಸಾಂಗ್‌ನಲ್ಲಿ ಹಾಡಿನಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಲಾಗಿದೆ. ಹೀಗಾಗಿ ಆರ್‌ಸಿಬಿಯ ಕನ್ನಡಿಗ ಅಭಿಮಾನಿಗಳು ಈಗ ಆರ್‌ಸಿಬಿ ಫ್ರಾಂಚೈಸಿ ವಿರುದ್ಧ ಕಿಡಿಕಾರುತ್ತಿದ್ದಾರೆ.

ಐಪಿಎಲ್: ದಾಖಲೆಯ ಸಮೀಪದಲ್ಲಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾಐಪಿಎಲ್: ದಾಖಲೆಯ ಸಮೀಪದಲ್ಲಿದ್ದಾರೆ ಆಲ್ ರೌಂಡರ್ ರವೀಂದ್ರ ಜಡೇಜಾ

ಕರ್ನಾಟಕ ಮೂಲದ ಫ್ರಾಂಚೈಸಿಯಾಗಿದ್ದು ಕನ್ನಡ ಭಾಷೆಯನ್ನು ಸೂಕ್ತವಾಗಿ ಬಳಕೆ ಮಾಡದಿರುವುದು ಅಭಿಮಾನಿಗಳಿಗೆ ಬೇಸರವಾಗಲು ಒಂದು ಕಾರಣವಾದರೆ ಮತ್ತೊಂದು ಹಾಡಿನಲ್ಲಿ ಯಥೇಚ್ಛವಾಗಿ ಹಿಂದಿ ಬಳಕೆಯಾಗಿದೆ. ಇದು ಕನ್ನಡಿಗ ಅಭಿಮಾನಿಗಳನ್ನು ಕೆರಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ಇದೇ ಕಾರಣಕ್ಕಾಗಿ ಬಹುತೇಕ ಕನ್ನಡಿಗರು ಆರ್‌ಸಿಬಿ ತಂಡದ ಜೊತೆಗೆ ಭಾವನಾತ್ಮಕವಾಗಿ ಬೆರೆತುಕೊಂಡಿಲ್ಲ ಎಂದು ಕೆಲ ಅಭಿಮಾನಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲವರು ನಮಗೆ ಕರ್ನಾಟಕದ ರಣಜಿ ತಂಡವೇ ಸಾಕು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈ ರೀತಿಯಾಗಿ ಹಿಂದಿ ಹೇರಿಕೆ ಮಾಡುತ್ತಿದ್ದೀರಾ ಎಂದು ಆಕ್ರೋಶದಿಂದ ಹೇಳಿದ್ದಾರೆ.

ಶನಿವಾರದಿಂದ ಐಪಿಎಲ್ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಣಕ್ಕಿಳಿಯುತ್ತಿದೆ. ಆರ್‌ಸಿಬಿ ತಂಡದ ಮೊದಲ ಪಂದ್ಯ ಸೋಮವಾರ ನಡೆಯಲಿದ್ದು ಸನ್ ರೈಸರ್ಸ್ ಹೈದರಾಬಾದ್ ಆರ್‌ಸಿಬಿ ಗೆ ಮುಖಾಮುಣಿಯಾಗಲಿದೆ.

Story first published: Friday, September 18, 2020, 12:16 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X