ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್ನಷ್ಟು ಕನ್ನಡ ಪದಗಳ ಸೇರಿಸಿ 2ನೇ ಬಾರಿಗೆ 'ಥೀಮ್ ಸಾಂಗ್' ಬಿಟ್ಟ ಆರ್‌ಸಿಬಿ!

IPL 2020: RCB releases second version of team official anthem with more Kannada lyrics

ಬೆಂಗಳೂರು: 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಥೀಮ್ ಸಾಂಗ್ ಬಿಡುಗಡೆ ಗೊಳಿಸಿದೆ. ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಗೀತೆಯಲ್ಲಿ ಹೆಚ್ಚು ಕನ್ನಡ ಪದಗಳೇ ಇಲ್ಲ ಎಂಬ ಆಕ್ರೋಶ ಕೇಳಿ ಬಂದಿತ್ತು. ಹೀಗಾಗಿ ಹೆಚ್ಚು ಕನ್ನಡ ಪದಗಳನ್ನು ಸೇರಿಸಿ ಆರ್‌ಸಿಬಿ ಎರಡನೇ ಬಾರಿಗೆ 'ಐಪಿಎಲ್ ಥೀಮ್‌ ಸಾಂಗ್' ಬಿಡುಗಡೆ ಮಾಡಿದೆ. ಎರಡನೇ ಬಾರಿ ಬಿಟ್ಟಿರುವ ಗೀತೆಯಲ್ಲಿ ಮೊದಲಿಗಿಂತ ಕೊಂಚ ಹೆಚ್ಚು ಕನ್ನಡ ಪದಗಳಿವೆ.

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

ಮೊದಲು ಪ್ರಕಟಿಸಲಾಗಿದ್ದ ಗೀತೆಯಲ್ಲಿ ಪಲ್ಲವಿ ಬಿಟ್ಟರೆ ಉಳಿದೆಲ್ಲ ಸಾಹಿತ್ಯ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಇತ್ತು. ಬಹುಶಃ ವಿದೇಶಿ ಆಟಗಾರರಿಗೂ ಗೀತೆಯ ಸಾಹಿತ್ಯ ಅರ್ಥವಾಗಲಿ ಎಂದು ಹೀಗೆ ಮಾಡಿರಬಹುದು.

ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!

ಆದರೆ ಬೆಂಗಳೂರು ತಂಡದ ಗೀತೆಯಲ್ಲಿ ಕನ್ನಡ ಪದಗಳೇ ಕಡಿಮೆಯಾದಾಗ ಸಹಜವಾಗೇ ಕನ್ನಡಿಗರಿಗೆ ಬೇಸರವಾಗಿತ್ತು.

ತಂಡದಲ್ಲಿ ಕನ್ನಡಿಗರೇ ಇಲ್ಲ

ಆರ್‌ಸಿಬಿ ಹೊರತಂದ ಮೊದಲ ಥೀಮ್ ಸಾಂಗ್‌ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಆರ್‌ಸಿಬಿಗೆ ಎಲ್ಲಾ ಕನ್ನಡಿಗರು ಬೆಂಬಲಿಸುತ್ತಿಲ್ಲ. ಕನ್ನಡದ ತಂಡದಲ್ಲಿ ಕನ್ನಡಿಗರೇ ಇಲ್ಲ. ಈಗ ಥೀಮ್ ಸಾಂಗ್‌ನಲ್ಲೂ ಕನ್ನಡ ಪದಗಳು ಕಾಣೆಯಾಗಿವೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದರು.

ಹೆಚ್ಚು ಕನ್ನಡ ಪದಗಳ ಸೇರ್ಪಡೆ

ಕನ್ನಡಿಗರ ಆಕ್ರೋಶ ಗಮನಿಸಿದ ಆರ್‌ಸಿಬಿ ಫ್ರಾಂಚೈಸಿ ಹಿಂದಿನ ಥೀಮ್ ಸಾಂಗ್‌ಗೆ ಇನ್ನಷ್ಟು ಕನ್ನಡ ಪದಗಳನ್ನು ಸೇರಿಸಿ ಎರಡನೇ ಥೀಮ್‌ ಸಾಂಗ್ ಬಿಡುಗಡೆ ಮಾಡಿದೆ. ಈ ಸಾಂಗ್ ಕೊಂಚ ಸಮಾಧಾನ ನೀಡುತ್ತದೆ. ಸಮತೋಲನ ಇದ್ದಂತಿದೆ(ಮೇಲಿನ ಟ್ವೀಟ್‌ನಲ್ಲಿ ಮೊದಲು ಬಿಡುಗಡೆ ಮಾಡಿದ್ದ ಥೀಮ್ ಸಾಂಗ್).

ಎರಡನೇ ಗೀತೆಗೆ ಏನು ವ್ಯತ್ಯಾಸ?

ಮೊದಲು ಬಿಡುಗಡೆ ಮಾಡಿದ್ದ ಥೀಮ್ ಸಾಂಗಿನಲ್ಲಿ ಪಲ್ಲವಿ ಬಿಟ್ಟರೆ ಬೇರೆ ಕಡೆ ಕನ್ನಡ ಪದಗಳಿರಲಿಲ್ಲ. ಈಗ ಬದಲಾವಣೆ ಮಾಡಲಾಗಿದೆ. ಮೊದಲ ಸಾಂಗಿನಲ್ಲಿ ಇಂಗ್ಲಿಷ್ ಲಿರಿಕ್ಸ್ ಇದ್ದ ಜಾಗದಲ್ಲಿ (ಗೀತೆಯ ಮಧ್ಯ ಭಾಗದಲ್ಲಿ) ಈಗ ಕನ್ನಡದ ಸಾಹಿತ್ಯ ಸೇರಿಸಲಾಗಿದೆ. ಇದೇ ಕಾರಣಕ್ಕೆ ಮೊದಲಿನ ಥೀಮ್ ಸಾಂಗಿಗಿಂತ ಈಗಿನ ಥೀಮ್ ಸಾಂಗ್ ಹೆಚ್ಚು ಇಷ್ಟವಾಗುತ್ತದೆ (ಮೇಲಿನ ಟ್ವೀಟ್‌ನಲ್ಲಿ ಬದಲಾದ ಥೀಮ್ ಸಾಂಗ್).

ಟ್ವೀಟಿನಲ್ಲೂ ಕನ್ನಡದ ಕಂಪು

ಟ್ವೀಟಿನಲ್ಲೂ ಕನ್ನಡದ ಕಂಪು

ಥೀಮ್ ಸಾಂಗ್ ಬಿಡುಗಡೆ ಮಾಡಿರುವುದಾಗಿ ಮಾಡಲಾಗಿದ್ದ ಟ್ವೀಟ್‌ನಲ್ಲಿ ಇಂಗ್ಲಿಷ್‌ನಲ್ಲಿ ಸಾಲುಗಳನ್ನು ಬರೆಯಲಾಗಿತ್ತು. ಕನ್ನಡಿಗರ ಆಕ್ರೋಶದ ಬಳಿಕ ಬದಲಾದ ಥೀಮ್ ಸಾಂಗ್ ಅನ್ನು ಮತ್ತೊಮ್ಮೆ ಟ್ವೀಟ್ ಮಾಡಿದಾಗ ಟ್ವೀಟಿನಲ್ಲಿ ಕನ್ನಡದ ಸಾಲುಗಳ ಕಂಪಿತ್ತು. ಏನೇ ಬರಲಿ... ಎಂತೇ ಇರಲಿ.. ಆರ್‌ಸಿಬಿ! ಎಂದು ಬರೆಯಲಾಗಿತ್ತು.

Story first published: Saturday, September 19, 2020, 2:17 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X