ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕೊಹ್ಲಿ ಕ್ರಮಾಂಕದಲ್ಲಿ ಗುರ್‌ಕೀರತ್ ಬ್ಯಾಟಿಂಗ್‌ಗೆ ಇಳಿದ ಕಾರಣ ಬಹಿರಂಗ

IPL 2020: RCB’s Mike Hesson explains why Gurkeerat was promoted against KKR

ಕೊಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯವನ್ನು ಆರ್‌ಸಿಬಿ ಭರ್ಜರಿಯಾಗಿ ಗೆದ್ದುಕೊಂಡಿದೆ. ಆರ್‌ಸಿಬಿಯ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಅದರಲ್ಲೂ ಸಿರಾಜ್ ಪ್ರದರ್ಶನವಂತೂ ಅಮೋಘವಾಗಿತ್ತು. ಈ ಅಲ್ಪ ಮೊತ್ತದ ಹೋರಾಟದಲ್ಲಿ ಆರ್‌ಸಿಬಿ ತಂಡದ ಮೂರನೇ ಕ್ರಮಾಂಕದಲ್ಲಿ ಎಮದಿನಂತೆ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿದಿರಲಿಲ್ಲ. ಅದಲಾಗಿ ಯುವ ಆಟಗಾರ ಗುರ್‌ಕೀರತ್ ಸಿಂಗ್ ಮನ್ ಬ್ಯಾಟಿಂಗ್‌ಗೆ ಇಳಿದಿದ್ದರು.

ಆರ್‌ಸಿಬಿ ತಂಡದ ಈ ನಡೆ ಹಲವು ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವನ್ನು ಹುಟ್ಟಿಸಿತ್ತು. ಆದರೆ ಈ ಕ್ರಮಾಂಕದ ಬದಲಾವಣೆಯ ಬಗ್ಗೆ ಆರ್‌ಸಿಬಿಯ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ಮೈಕ್ ಹಸ್ಸನ್ ಸ್ಪಷ್ಟನೆಯನ್ನು ನೀಡಿದ್ದಾರೆ. ಯಾವ ಕಾರಣಕ್ಕಾಗಿ ಗುರ್‌ಕೀರತ್ ಸಿಂಗ್‌ ಮೂರಮೇ ಕ್ರಮಾಂಕದಲ್ಲಿ ಕಣಕ್ಕಿಳಿದರು ಎಂದು ತಿಳಿಸಿದ್ದಾರೆ.

KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?KKR ಬ್ಯಾಟ್ಸ್‌ಮನ್‌ಗಳನ್ನ ಪೆವಿಲಿಯನ್‌ಗೆ ಅಟ್ಟಿದ ನಂತರ ಸಿರಾಜ್ ಹೇಳಿದ್ದೇನು?

"ಗುರ್‌ಕೀರತ್‌ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಕೊನೆಯ ಪಂದ್ಯವನ್ನು ಹೊರತುಪಡಿಸಿದರೆ ಟಾಪ್ 5 ಆಟಗಾರರ ಪೈಕಿ ಈತನಿಗೆ ಮಾತ್ರ ಬ್ಯಾಟಿಂಗ್‌ಗೆ ಅವಕಾಶ ದೊರೆತಿರಲಿಲ್ಲ. ವರುಣ್ ಚಕ್ರವರ್ತಿ ಬೌಲಿಂಗ್‌ನಲ್ಲಿ ದಾಳಿಗಿಳಿದರೆ ಸ್ಪಿನ್ ಎದುರಿಸಲು ಗುರ್‌ಕೀರತ್ ಸಶಕ್ತನಾಗಿದ್ದಾನೆ ಎಂದು ತೀರ್ಮಾನಿಸಿ ಈ ಬದಲಾವಣೆಯನ್ನು ಮಾಡಿಕೊಂಡೆವು" ಎಂದು ಮೈಕ್ ಹಸ್ಸನ್ ತಿಳಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಗುರ್‌ಕೀರತ್ ಸಿಂಗ್ ಕೂಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. "ಕೊನೆಯ ಪಂದ್ಯದಲ್ಲಿ ಎಬಿ ಸರ್ ಜೊತೆಗೆ ಹಾಗೂ ಈ ಬಾರಿ ವಿರಾಟ್ ಭಾಯ್ ಜೊತೆಗೆ ಬ್ಯಾಟಿಂಗ್ ನಡೆಸಿದ್ದೆ. ಅವರೊಂದಿಗೆ ಕಲಿತುಕೊಳ್ಳಲು ಸಾಕಷ್ಟಿದೆ. ಅವರ ಜೊತೆಯಲ್ಲಿ ಬ್ಯಾಟಿಂಗ್ ನಡೆಸುವುದು ತುಂಬ ಉತ್ತಮ ಸಂಗತಿ. ಮುಂದೆ ಈ ರೀತಿಯ ಹಲವು ಗೆಲುವಿನ ಕ್ಷಣಗಳು ಬರುವ ನಿರೀಕ್ಷೆಯಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

KKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿKKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿ

ಕೆಕೆಆರ್ ವಿರುದ್ದದ ಪಂದ್ಯದಲ್ಲಿ ಆರಂಭಿಕ ಆಟಗಾರ ಫಿಂಚ್ ವಿಕೆಟ್ ಕಳೆದುಕೊಂಡ ಬಳಿಕ ಗುರ್‌ಕೀರತ್ ಬ್ಯಾಟಿಂಗ್‌ಗೆ ಇಳಿದಿದ್ದರು. ಬಳಿಕ ಇನ್ನೋರ್ಬ ಆರಂಭಿಕ ಆಟಗಾರ ಪಡಿಕ್ಕಲ್ ಕೂಡ ವಿಕೆಟ್ ಕಳೆದುಕೊಂಡಾಗ ವಿರಾಟ್ ಕೊಹ್ಲಿ ಗುರ್‌ಕೀರತ್‌ಗೆ ಜೊತೆಯಾದರು. ಬಳಿಕ ಕೊಹ್ಲಿ ಜೊತೆಗೆ 39 ರನ್‌ಗಳ ಜೊತೆಯಾಟವನ್ನು ಆಡಿದ ಗುರ್‌ಕೀರತ್ 21 ರನ್‌ಗಳಿಸಿ ಅಜೆಯವಾಗುಳಿದಿದ್ದರು.

Story first published: Thursday, October 22, 2020, 16:27 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X