ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯಲ್ ಚಾಲೆಂಜರ್ಸ್ ಬೆಂಗಳೂರು ದಶಕದ ತಂಡ ಹೇಗಿದೆ ಗೊತ್ತಾ!?

ರಾಯಲ್ ಚಾಲೆಂಜರ್ಸ್‌ ಬೆಂಗಳೂರು. ಅಭಿಮಾನಿಗಳ ನೆಚ್ಚಿನ ಆರ್‌ಸಿಬಿ. ಐಪಿಎಲ್‌ನ ಕಳೆದ 12 ಆವೃತ್ತಿಯಲ್ಲೂ ಪಾಲ್ಗೊಂಡಿರುವ ಈ ತಂಡ ಎಷ್ಟೇ ಉತ್ತಮ ಆಟಗಾರರನ್ನು ಹೊಂದಿದ್ದರೂ ಟೂರ್ನಿಯನ್ನು ಗೆಲ್ಲಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಐಪಿಎಲ್‌ನ ಅತ್ಯಂತ ದುರದೃಷ್ಟದ ತಂಡ ಎಂದು ಕರೆಯಲಾಗುತ್ತದೆ. ಹಾಗಿದ್ದರೂ ಸೋಲು ಗೆಲುವನ್ನು ಮೀರಿ ಅಭಿಮಾನಿಗಳ ಹೃದಯದಲ್ಲಿ ಸ್ಥಾನವನ್ನು ಪಡೆದಿದೆ.

ಮುಂಬರುವ 13ನೇ ಆವೃತ್ತಿಗೆ ಈಗಾಗಲೇ ಹರಾಜು ಪ್ರಕ್ರಿಯೆ ನಡೆದಿದ್ದು ತಂಡವನ್ನು ಅಂತಿಮಗೊಳಿಸಲಾಗಿದ್ದು ಮುಂಬರುವ ಟೂರ್ನಿಗೆ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಈ ಬಾರಿಯೂ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯ ನಾಯಕತ್ವ ಆರ್‌ಸಿಬಿ ತಂಡಕ್ಕಿದೆ.

ಹರಾಜಿನ ನಂತರ ಆರ್ ಸಿಬಿ ತಂಡ: ಕೇನ್, ಫಿಂಚ್, ಮೋರಿಸ್ ಬಲ ಹರಾಜಿನ ನಂತರ ಆರ್ ಸಿಬಿ ತಂಡ: ಕೇನ್, ಫಿಂಚ್, ಮೋರಿಸ್ ಬಲ

ಕಳೆದ ಒಂದು ದಶಕದಲ್ಲಿ ಹಲವಾರು ಆಟಗಾರರು ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ತಂಡದಿಂದ ಅನೇಕ ಆಟಗಾರರು ಬೇರೆ ತಂಡದ ಪಾಲಾಗಿದ್ದಾರೆ. ಹಾಗಿದ್ದರೂ ಕಳೆದ ಒಂದು ದಶಕದ ಪ್ರದರ್ಶನದ ಆಧಾರದಲ್ಲಿ ಆರ್‌ಸಿಬಿ ತಂಡದ ದಶಕದ ತಂಡವನ್ನು ಸಿದ್ಧಪಡಿಸಲಾಗಿದೆ. ಯಾರೆಲ್ಲಾ ದಶಕದ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿದ್ದಾರೆ ಎಂಬುದನ್ನು ಬನ್ನಿ ನೋಡೋಣ

ಆರಂಭಿಕ ಆಟಗಾರರು;

ಆರಂಭಿಕ ಆಟಗಾರರು;

ಕ್ರಿಸ್‌ಗೇಲ್-ಪಾರ್ಥೀವ್ ಪಟೇಲ್ (ವಿಕೆಟ್ ಕೀಪರ್)

ಕಳೆದ ಕೆಲ ವರ್ಷಗಳಲ್ಲಿ ಆರ್‌ಸಿಬಿ ತಂಡ ಹಲವು ಆರಂಭಿಕ ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ನಡಸಿದೆ. ಆದರೆ ಈ ಒಂದು ಹೆಸರು ಮಾತ್ರ ಅಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ. ಅದುವೇ ಕ್ರಿಸ್ ಗೇಲ್. ಹೀಗಾಗಿ ದಶಕದ ತಂಡದಲ್ಲಿ ಆರಂಭಿಕರಾಗಿ ಕ್ರಿಸ್‌ ಗೇಲ್ ಹೊರತು ಪಡಿಸಿ ತಂಡ ಸಿದ್ದಪಡಿಸಲು ಸಾಧ್ಯವೇ ಇಲ್ಲ. ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದ ಗೇಲ್ ಕಳೆದ ಆವೃತ್ತಿಯಿಂದ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮತ್ತೋರ್ವ ಆರಂಭಿಕ ಆಟಗಾರ ಸ್ಥಾನ ಪಾರ್ಥೀವ್ ಪಟೇಲ್ ಸೂಕ್ತವೆನಿಸುತ್ತಾರೆ. ಕಳೆದ ಆವೃತ್ತಿಯಲ್ಲಿ ಪಾರ್ಥೀವ್ ಪಟೇಲ್ ಉತ್ತಮ ಆಟವನ್ನು ಪ್ರದರ್ಶಿಸಿದ್ದರು. ಕಳೆದ ಆವೃತ್ತಿಯಲ್ಲಿ ಪಾರ್ಥೀವ್ ಪಟೇಲ್ 14 ಪಂದ್ಯಗಳನ್ನಾಡಿದ್ದು, 139.17 ಸ್ಟ್ರೈಕ್ ರೇಟ್‌ನಲ್ಲಿ 373 ರನ್ ಬಾರಿಸಿದ್ದಾರೆ.

ಮತ್ತೊಂದೆಡೆ ವೆಸ್ಟ್‌ ಇಂಡೀಸ್‌ನ ದೈತ್ಯ ಆಟಗಾರ 2011ರಿಂದ 2017ರ ವರೆಗೆ 7 ಆವೃತ್ತಿಯಲ್ಲಿ ಆರ್ಸಿಬಿ ತಂಡವನ್ನು ಪ್ರತಿನಿಧಿಸಿದ್ದಾರೆ. ಬರೊಬ್ಬರಿ 3163ರನ್‌ಗಳನ್ನು ಬಾರಿಸಿದ್ದರು.

ಮಧ್ಯಮ ಕ್ರಮಾಂಕದ ಜವಾಬ್ಧಾರಿ ಯಾರಿಗೆ!

ಮಧ್ಯಮ ಕ್ರಮಾಂಕದ ಜವಾಬ್ಧಾರಿ ಯಾರಿಗೆ!

ವಿರಾಟ್ ಕೊಹ್ಲಿ-ಎಬಿ ಡಿವಿಲ್ಲಿಯರ್ಸ್,-ಕೆಎಲ್ ರಾಹುಲ್

ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದಲ್ಲಿ ಆರಂಭದ ಆವೃತ್ತಿಯಿಂದಲೂ ಆಡುತ್ತಿದ್ದಾರೆ. ಇಲ್ಲಿಯ ವರೆಗಿ ಆವೃತ್ತಿಯಲ್ಲಿ ತಂಡವನ್ನು ಬದಲಾಯಿಸದ ಏಕೈಕ ಆಟಗಾರ ಎಂಬ ಕೀರ್ತಿಯೂ ಕೊಹ್ಲಿ ಪಾಲಿಗಿದೆ. ಎರಡು ಬಾರಿ ಫೈನಲ್‌ಗೆ ಏರಿರುವ ಆರ್‌ಸಿಬಿಗೆ ಕೊಹ್ಲಿಯೇ ಆಧಾರ ಸ್ಥಂಭ.ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಹೆಗ್ಗಳಿಕೆಯೂ ಕೊಹ್ಲಿಯದ್ದೇ. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಸೂಕ್ತ ಆಟಗಾರ. ನಾಲ್ಕನೇ ಕ್ರಮಾಂಕಕ್ಕೆ ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಡಿವಿಲಿಯರ್ಸ್ ಅತ್ಯಂತ ಸೂಕ್ತವೆನಿಸುವ ಆಟಗಾರ. ಮಾತ್ರವಲ್ಲ ಕೊಹ್ಲಿ-ಎಬಿಡಿ ಜೋಡಿ ಐಪಿಎಲ್ ಇತಿಹಾಸದ ಯಶಸ್ವಿ ಜೋಡಿಗಳಲ್ಲಿ ಒಂದು. 2011ರಿಂದ ಆರ್‌ಬಿಯ ಮಧ್ಯಮ ಕ್ರಮಾಂಕದ ಆಧಾರವಾಗಿದ್ದಾರೆ ಎಬಿಡಿ. ಮತ್ತೋರ್ವ ಮಧ್ಯಮ ಕ್ರಮಾಂಕದ ಆಟಗಾರ ಅಂದರೆ ಅದು ಕೆಲ್‌ ರಾಹುಲ್. 2013 ಮತ್ತು 2016ರ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. 2013ರ ಆವೃತ್ತಿಯಲ್ಲಿ ಕೇವಲ ಐದು ಪಂದ್ಯಗಳನ್ನು ಆಡಿದ ರಾಹುಲ್ ಅಷ್ಟೇನು ಪರಿಣಾಮ ಬೀರಿರಲಿಲ್ಲ. ಆದರೆ 2016ರ ಆವೃತ್ತಿಯಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ್ದರು.

ಆಲ್‌ರೌಂಡರ್;

ಆಲ್‌ರೌಂಡರ್;

ಯುವರಾಜ್ ಸಿಂಗ್- ಮೊಯೀನ್ ಅಲಿ

ಆರ್‌ಸಿಬಿ ಅಂತಾ ಅಮೋಘ ಆಲ್‌ರೌಂಡರ್‌ಗಳನ್ನು ಹೊಂದಿರಲಿಲ್ಲ. ಆದರೆ ಈ ಸ್ಥಾನವನ್ನು ಆರ್‌ಸಿಬಿ ಅಭಿಮಾನಿಗಳು ಟೀಮ್ ಇಂಡಿಯಾ ಮಾಜಿ ಸ್ಪೋಟಕ ಆಟಗಾರ ಯುವರಾಜ್ ಸಿಂಗ್ ಮತ್ತು ಇಂಗ್ಲೀಷ್ ಕ್ರಿಕೆಟಿಗ ಮೊಯೀನ್ ಅಲಿ ಆರ್‌ಸಿಬಿ ತಂಡದ ಉತ್ತಮ ಆಲ್‌ರೌಂಡರ್‌ಗಳು ಎಂಬುದನ್ನು ಒಪ್ಪಿಕೊಳ್ಳುತ್ತಾರೆ. 2014ರಲ್ಲಿ ಆರ್‌ಸಿಬಿ ತಂಡ 14 ಕೊಟಿಗೆ ಯುವರಾಜ್ ಸಿಂಗ್ ಅವರನ ್ನು ಖರೀದಿಸಿತ್ತು ಈ ಟೂರ್ನಿಯಲ್ಲಿ ತನ್ನ ಮೌಲ್ಯಕ್ಕೆ ತಕ್ಕನಾದ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದರು. 14 ಪಂದ್ಯಗಳಿಂದ 376 ರನ್ ಗಳಿಸಿದ್ದರು ಯುವರಾಜ್. 135.25 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದರು. ಇನ್ನು ಬೌಲಿಂಗ್‌ನಲ್ಲೂ ಕೂಡ ಯುವರಾಜ್‌ ಸಿಂಗ್ ತಂಡಕ್ಕೆ ಕೊಡುಗೆ ನೀಡಿದ್ದರು. ಐದು ವಿಕೆಟ್‌ಗಳನ್ನು ಸಂಪಾದಿಸಿದ್ದ ಯುವರಾಜ್ ಒಂದೇ ಪಂದ್ಯದಲ್ಲಿ 35 ರನ್ ನೀಡಿ 4 ವಿಕೆಟ್‌ ಕಬಳಿಸಿದ್ದರು. ಇನ್ನು ಮೊಯೀನ್ ಅಲಿ ಕಳೆದ ಎರಡು ಆವೃತ್ತಿಯಲ್ಲಿ ಆರ್‌ಸಿಬಿ ತಮಡವನ್ನು ಪ್ರನಿಧಿಸುತ್ತಿದ್ದಾರೆ. ಅತ್ಯುತ್ತಮ ಆಟವನ್ನು ಪ್ರದರ್ಶಿಸಿ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?

ಬೌಲಿಂಗ್ ಪಡೆ:

ಬೌಲಿಂಗ್ ಪಡೆ:

ಯುಜುವೇಂದ್ರ ಚಾಹಲ್-ಮಿಚೆಲ್ ಸ್ಟಾರ್ಕ್-ಜಹೀರ್ ಖಾನ್- ವಿನಯ್ ಕುಮಾರ್

ಉತ್ತಮ ತಂಡದ ಹೊರತಾಗಿಯೂ ತಂಡ ಪ್ರಮುಖ ಪಂದ್ಯಗಳಲ್ಲಿ ಸೋಲಲು ಕಾರಣ ಆರ್‌ಸಿಬಿ ತಂಡದ ಬೌಲಿಂಗ್ ವಿಭಾಗದ ವೈಫಲ್ಯ. ಆದರೆ ಆರ್‌ಸಿಬಿ ತಂಡದಲ್ಲಿ ಉತ್ತಮ ಬೌಲರ್‌ಗಳು ಇರಲಿಲ್ಲ ಎಂದಲ್ಲ. ಆದರೆ ತಂಡವಾಗಿ ಪ್ರದರ್ಶನ ನಿಡುವಲ್ಲಿ ಆರ್‌ಸಿಬಿ ಬೌಲರ್‌ಗಳು ವಿಫಲರಾಗಿದ್ದಾರೆ. 2014ರಲ್ಲಿ ಆರ್‌ಸಿಬಿ ತಂಡವನ್ನು ಕೂಡಿಕೊಂಡಿರುವ ಯುಜುವೇಂದ್ರ ಚಾಹಲ್ ತಂಡದ ಪ್ರಮುಖ ಬೌಲರ್‌ ಆಗಿದ್ದಾರೆ. ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಜಹೀರ್ ಖಾನ್ ಮತ್ತು ವಿನಯ್ ಕುಮಾರ್ ಹಲವು ವರ್ಷ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮಿಚೆಲ್ ಸ್ಟಾರ್ಕ್ ಎರಡು ಸೀಸನ್‌ಗಳಲ್ಲಷ್ಟೇ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದರೂ ಕೂಡ 34 ವಿಕೆಟ್‌ ಪಡೆದು ಮಿಂಚಿದ್ದಾರೆ. ಜಹೀರ್ ಖಾನ್ ನಾಲ್ಕು ಸೀಸನ್‌ಗಳಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದು 49 ವಿಕೆಟ್‌ಗಳನ್ನು ತೆಕ್ಕೆಗೆ ಹಾಕಿಕೊಂಡಿದ್ದಾರೆ. ವಿನಯ್ ಕುಮಾರ್ ಒಟ್ಟಾರೆ 5 ಆವೃತ್ತಿಯಲ್ಲಿ ಆರ್ಸಿಬಿಯನ್ನು ಪ್ರತಿನಿಧಿಸಿದ್ದು ಅದರಲ್ಲಿ 3 ಕಳೆದ ದಶಕದಲ್ಲಿ ಆಡಿದ್ದು ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ.

Story first published: Thursday, January 2, 2020, 17:55 [IST]
Other articles published on Jan 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X