ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾರ್ಚ್ 21ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತರಬೇತಿ ಶುರು

IPL 2020: RCB to begin training camp on March 21

ಬೆಂಗಳೂರು, ಫೆಬ್ರವರಿ 25: ಮಾರ್ಚ್ 29ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ, ಟೂರ್ನಿಯ ಆಕರ್ಷಣೀಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರ್ಚ್ 21ರಿಂದ ತರಬೇತಿ ಆರಂಭಿಸಲಿದೆ.

ಭಾರತ-ಪಾಕಿಸ್ತಾನ ವೈಷಮ್ಯಕ್ಕೆ 'ಆತನೇ ಕಾರಣ' ಎಂದ ಶಾಹಿದ್ ಅಫ್ರಿದಿ!ಭಾರತ-ಪಾಕಿಸ್ತಾನ ವೈಷಮ್ಯಕ್ಕೆ 'ಆತನೇ ಕಾರಣ' ಎಂದ ಶಾಹಿದ್ ಅಫ್ರಿದಿ!

ಆರ್‌ಸಿಬಿ ಟ್ರೇನಿಂಗ್‌ ಕ್ಯಾಂಪ್‌ ಮಾರ್ಚ್ 21ರಿಂದ ಆರಂಭವಾಗಲಿದೆ ಎಂದು ಆರ್‌ಸಿಬಿ ಕ್ರಿಕೆಟ್‌ನ ನಿರ್ದೇಶಕ ಮೈಕ್ ಹೆಸನ್ ಸೋಮವಾರ (ಫೆಬ್ರವರಿ 24) ಖಾತರಿಪಡಿಸಿದ್ದಾರೆ. ಮೈಕ್ ಹೆಸನ್ ಇದನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ.

ಕೆ.ಎಲ್ ರಾಹುಲ್ ಟೆಸ್ಟ್‌ಗೆ ಕಡೆಗಣನೆ: ಆಯ್ಕೆಯ ಪ್ರಕ್ರಿಯೆ ಬಗ್ಗೆ ಕಪಿಲ್‌ದೇವ್ ಕೆಂಡಕೆ.ಎಲ್ ರಾಹುಲ್ ಟೆಸ್ಟ್‌ಗೆ ಕಡೆಗಣನೆ: ಆಯ್ಕೆಯ ಪ್ರಕ್ರಿಯೆ ಬಗ್ಗೆ ಕಪಿಲ್‌ದೇವ್ ಕೆಂಡ

ಮಾರ್ಚ್ 29ರಿಂದ ಆರಂಭಗೊಳ್ಳುವ ಐಪಿಎಲ್, ಮೇ 24ರಂದು ಕೊನೆಗೊಳ್ಳಲಿದೆ. ಆರಂಭಿಕ ಪಂದ್ಯ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್‌ ನಡುವೆ ನಡೆಯಲಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸವಾಲು ಸ್ವೀಕರಿಸಲಿದೆ. ಈ ಪಂದ್ಯ ಮಾರ್ಚ್ 31ರಂದು ನಡೆಯಲಿದೆ.

2020ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಪ್ರಮುಖ ಆಟಗಾರರನ್ನು ತನ್ನ ತೆಕ್ಕೆಗೆ ತಂದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕ್ರಿಸ್ ಮೋರಿಸ್ (ದಕ್ಷಿಣ ಆಫ್ರಿಕಾ), ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), ಕೇನ್ ರಿಚರ್ಡ್ಸನ್ (ಆಸ್ಟ್ರೇಲಿಯಾ), ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ) ಇಸುರು ಉದಾನಾ (ಶ್ರೀಲಂಕಾ), ಜೋಶುವಾ ಫಿಲಿಪ್ (ಆಸೀಸ್) ಮುಂತಾದ ಪ್ರಮುಖ ಆಟಗಾರರನ್ನು ಖರೀದಿಸಿತ್ತು.

ಪಾದಾರ್ಪಣೆ ವೇಳೆ ಧೋನಿಯಾಡಿದ ಮಾತು ನೆನೆದ ಜಸ್‌ಪ್ರೀತ್ ಬೂಮ್ರಾಪಾದಾರ್ಪಣೆ ವೇಳೆ ಧೋನಿಯಾಡಿದ ಮಾತು ನೆನೆದ ಜಸ್‌ಪ್ರೀತ್ ಬೂಮ್ರಾ

ಒಂದು ಬಾರಿಯೂ ಕಪ್‌ ಗೆಲ್ಲದ ತಂಡವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಆರ್‌ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. 2017 ಮತ್ತು 2019ರ ಸೀಸನ್‌ನಲ್ಲಿ ಆರ್‌ಸಿಬಿ ಅಂಕಪಟ್ಟಿಯ ಕೊನೇ ಸ್ಥಾನದಲ್ಲಿ ಆಟ ಮುಗಿಸಿತ್ತು. ಆದರೆ 2009, 2011, 2016ರ ಸೀಸನ್‌ನಲ್ಲಿ ರನ್ನರ್ಸ್ ಪ್ರಶಸ್ತಿ ಗೆದ್ದಿದ್ದು ಆರ್‌ಸಿಬಿಯ ಗಮನಾರ್ಹ ಸಾಧನೆ.

Story first published: Tuesday, February 25, 2020, 15:07 [IST]
Other articles published on Feb 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X