ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆಂಗಳೂರು ಸೋಲಿನ ಹೊಣೆ ತಾನೇ ಹೊತ್ತುಕೊಂಡ ನಾಯಕ ವಿರಾಟ್ ಕೊಹ್ಲಿ

IPL 2020: RCB vs KXIP: Virat Kohli takes blame for RCBs defeat after dropping KL Rahul twice

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 6ನೇ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್ ಪಂಜಾಬ್ ವಿರುದ್ಧದ ಸೋಲಿನ ಹೊಣೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಾನೇ ಹೊತ್ತುಕೊಂಡಿದ್ದಾರೆ. ಪಂದ್ಯದ ವೇಳೆ ಕೊಹ್ಲಿ ಎದುರಾಳಿ ತಂಡದ ಕೆಎಲ್ ರಾಹುಲ್ ಅವರ ಕ್ಯಾಚ್‌ ಅನ್ನು ಕೈಚೆಲ್ಲಿ ಟೀಕೆಗೀಡಾಗಿದ್ದರು

'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ'ಕಾಮೆಂಟರಿಯಿಂದ ಕಿತ್ತಾಕಿ': ಸುನಿಲ್ ಗವಾಸ್ಕರ್ ವಿರುದ್ಧ ಅಭಿಮಾನಿಗಳು ಕಿಡಿ

ದುಬೈ ಇಂಟರ್‌ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದ ವೇಳೆ ಕೆXIಪಿ ಪರ ಸ್ಫೋಟಕ ಶತಕ ಸಿಡಿಸಿದ್ದ ರಾಹುಲ್ ಕ್ಯಾಚ್ ಪಡೆಯಲು ಕೊಹ್ಲಿ ಎರಡೆರಡು ಸಾರಿ ಸುಲಭದ ಅವಕಾಶವಿತ್ತು. ಆದರೆ ಕೊಹ್ಲಿ ಕ್ಯಾಚ್ ಡ್ರಾಪ್ ಮಾಡಿದ್ದರು. ಪರಿಣಾಮ ರಾಹುಲ್ ಇನ್ನೂ 30-40 ಹೆಚ್ಚುವರಿ ರನ್‌ ತಂಡಕ್ಕೆ ಸೇರಿಸಿದರು.

ಐಪಿಎಲ್ 2020: ಆರ್‌ಸಿಬಿ vs ಕೆXIಪಿ ಪಂದ್ಯ, ಸ್ಕೋರ್‌ಕಾರ್ಡ್

'ಸೋಲಿನ ಹೊಣೆಯನ್ನು ನಾನೇ ಮುಂದೆ ನಿಂತು ತೆಗೆದುಕೊಳ್ಳುತ್ತೇನೆ. ಇದು ನಮ್ಮ ಪಾಲಿನ ಒಳ್ಳೆಯ ದಿನ ಆಗಿರಲಿಲ್ಲ. ಕೆಎಲ್ ರಾಹುಲ್ ವಿಕೆಟ್ ಪಡೆಯಲು ಒಂದಿಷ್ಟು ಅವಕಾಶವಿದ್ದವು. ಆದರೆ ಇದೇ ಅವಕಾಶ ಕೈ ತಪ್ಪಿದ್ದರಿಂದ ಕೊನೇ ಘಳಿಗೆಯಲ್ಲಿ 35-40 ಹೆಚ್ಚುವರಿ ರನ್ ಬೆಲೆ ತೆರಬೇಕಾಯಿತು,' ಎಂದು ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಹೇಳಿದ್ದಾರೆ.

IPL 2020: ಕಿಂಗ್ಸ್ ಇಲೆವೆನ್ ವಿರುದ್ಧ ಆರ್‌ಸಿಬಿ ಸೋಲಿಗೆ 5 ಕಾರಣಗಳುIPL 2020: ಕಿಂಗ್ಸ್ ಇಲೆವೆನ್ ವಿರುದ್ಧ ಆರ್‌ಸಿಬಿ ಸೋಲಿಗೆ 5 ಕಾರಣಗಳು

'ಬಹುಶಃ ಒಂದು ವೇಳೆ ನಾವು ಅವರನ್ನು (ಪಂಜಾಬ್) 180 ರನ್‌ಗೆ ನಿರ್ಬಂಧಿಸಿದ್ದರೆ ಪಂದ್ಯದ ಆರಂಭಿಕ ಎಸೆದಿಂದಲೂ ನಮ್ಮ ಮೇಲೆ ಅಷ್ಟೊಂದು ಒತ್ತಡ ಇರುತ್ತಿರಲಿಲ್ಲ,' ಎಂದು ಕೊಹ್ಲಿ ವಿವರಿಸಿದ್ದಾರೆ. ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 206 ರನ್ ಬಾರಿಸಿತ್ತು. ಆರ್‌ಸಿಬಿ 109 ರನ್ ಪೇರಿಸಿ 97 ರನ್‌ಗಳ ಹೀನಾಯ ಸೋಲನುಭವಿಸಿತ್ತು.

Story first published: Friday, September 25, 2020, 15:06 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X