ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮುಂಬೈ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಬೆಂಗಳೂರು

IPL 2020: RCB vs MI, 10 match, super over, highlights in kannada

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಸೋಮವಾರ (ಸೆಪ್ಟೆಂಬರ್ 28) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಸೂಪರ್ ಓವರ್‌ನತ್ತ ಸಾಗಿತ್ತು. ಆದರೆ ಸೂಪರ್‌ ಓವರ್‌ನಲ್ಲಿ ಆರ್‌ಸಿಬಿ ವಿಜಯದ ನಗೆ ಬೀರಿತು.

ಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿಐಪಿಎಲ್ ಇತಿಹಾಸದ ಸೂಪರ್ ಓವರ್ ಪಂದ್ಯಗಳಲ್ಲಿ ಸೋತು-ಗೆದ್ದವರ ಪಟ್ಟಿ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೇವದತ್ ಪಡಿಕ್ಕಲ್ 54 (40 ಎಸೆತ), ಆ್ಯರನ್ ಫಿಂಚ್ 52 (35 ಎಸೆತ), ಎಬಿ ಡಿವಿಲಿಯರ್ಸ್ 55 (24 ಎಸೆತ), ಶಿವಂ ದೂಬೆ 27 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 201 ರನ್ ಗಳಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ವೆಬ್ ತಾಣದಿಂದ ರೈನಾ ಔಟ್!ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ವೆಬ್ ತಾಣದಿಂದ ರೈನಾ ಔಟ್!

ಗುರಿ ಬೆನ್ನಟ್ಟಿದ ಮುಂಬೈನಿಂದ ರೋಹಿತ್ ಶರ್ಮಾ 8, ಹಾರ್ದಿಕ್ ಪಾಂಡ್ಯ 15, ಇಶಾನ್ ಕಿಶನ್ 99, ಕೀರನ್ ಪೊಲಾರ್ಡ್ 60 ರನ್ ಸೇರಿಸಿದರು. ಮುಂಬೈ ತಂಡ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸಿತು.

 ಐಪಿಎಲ್ 2020: ಮುಂಬೈ ವಿರುದ್ಧವೂ ಮುಂದುವರಿದ ವಿರಾಟ್ ಕೊಹ್ಲಿ ಫ್ಲಾಪ್ ಶೋ ಐಪಿಎಲ್ 2020: ಮುಂಬೈ ವಿರುದ್ಧವೂ ಮುಂದುವರಿದ ವಿರಾಟ್ ಕೊಹ್ಲಿ ಫ್ಲಾಪ್ ಶೋ

ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದು 7 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ರನ್ ಗಳಿಸಿತು.ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ 1 ವಿಕೆಟ್ ಕಳೆದು 7 ರನ್ ಗಳಿಸಿತು.

 ಐಪಿಎಲ್ 2020ಗಾಗಿ ''ಹಿಟ್ ಮ್ಯಾನ್'' ರೋಹಿತ್ ತಂದಿರುವ ಬ್ಯಾಟುಗಳೆಷ್ಟು? ಐಪಿಎಲ್ 2020ಗಾಗಿ ''ಹಿಟ್ ಮ್ಯಾನ್'' ರೋಹಿತ್ ತಂದಿರುವ ಬ್ಯಾಟುಗಳೆಷ್ಟು?

ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿತು. ಅಂದ್ಹಾಗೆ ಇದು ಐಪಿಎಲ್ ಇತಿಹಾಸದಲ್ಲಿ ನಡೆದ 11ನೇ ಸೂಪರ್ ಓವರ್‌ ಮತ್ತು ಈ ಸೀಸನ್‌ನ 2ನೇ ಸೂಪರ್ ಓವರ್ ಪಂದ್ಯ.

ಐಪಿಎಲ್‌ನಲ್ಲಿ 99 ರನ್ ಗಳಿಸಿ ಶತಕ ವಂಚಿತರು: ರೈನಾರಿಂದ ಇಶಾನ್ ಕಿಶಾನ್ ತನಕಐಪಿಎಲ್‌ನಲ್ಲಿ 99 ರನ್ ಗಳಿಸಿ ಶತಕ ವಂಚಿತರು: ರೈನಾರಿಂದ ಇಶಾನ್ ಕಿಶಾನ್ ತನಕ

ಆರ್‌ಸಿಬಿ ಇನ್ನಿಂಗ್ಸ್‌ನಲ್ಲಿ ಮುಂಬೈಯ ಟ್ರೆಂಟ್ ಬೌಲ್ಟ್ 2, ರಾಹುಲ್ ಚಹಾರ್ 1 ವಿಕೆಟ್ ಪಡೆದರೆ, ಎಂಐ ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿಯ ಇಸುರು ಉದಾನ 2, ವಾಷಿಂಗ್ಟನ್ ಸುಂದರ್ 1, ಯುಜುವೇಂದ್ರ ಚಾಹಲ್ 1, ಆ್ಯಂಡಂ ಜಂಪಾ 1 ವಿಕೆಟ್ ಪಡೆದರು. ಎಬಿ ಡಿ ವಿಲಿಯರ್ಸ್ ಪಂದ್ಯಶ್ರೇಷ್ಠರೆನಿಸಿದರು.

Story first published: Tuesday, September 29, 2020, 10:10 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X