ಐಪಿಎಲ್ 2020: ನೀತಿಸಂಹಿತೆ ಉಲ್ಲಂಘನೆಗಾಗಿ ಖಂಡನೆಗೊಳಗಾದ ಹಾರ್ದಿಕ್ ಹಾಗೂ ಮೋರಿಸ್

IPL 2020: RCB vs MI, Hardik Pandya and Chris Morris reprimanded for Code of Conduct breach
Photo Credit: IPL

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕಾದಾಟ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೆ ಈ ಪಂದ್ಯದಲ್ಲಿ ಐಪಿಎಲ್‌ನ ನೀತಿಸಂಹಿತೆಯ ಉಲ್ಲಂಘನೆಯ ಕಾರಣಕ್ಕೆ ಇಬ್ಬರು ಆಟಗಾರರು ಮ್ಯಾಚ್ ರೆಫ್ರಿಯಿಂದ ಖಂಡನೆಗೆ ಒಳಗಾಗಿದ್ದಾರೆ.

ಆರ್‌ಸಿಬಿಯ ಅನುಭವಿ ಆಲ್‌ರೌಂಡರ್ ಕ್ರಿಸ್ ಮೋರಿಸ್ ಹಾಗೂ ಹಾರ್ದಿಕ್ ಪಾಂಡ್ಯನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಒಳಗಾದ ಆಟಗಾರರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿ ಹೊರ ನಡೆಯುವ ವೇಳೆ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆರ್‌ಸಿಬಿ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು.

ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ಧಾರಿಗೆ ರೋಹಿತ್ ಸೂಚಿಸಿದ್ದರು: ಸೂರ್ಯಕುಮಾರ್ ಯಾದವ್

ಈ ಘಟನೆ ನಡೆದಿದ್ದು 19ನೇ ಓವರ್‌ನ 5ನೇ ಎಸೆತದಲ್ಲಿ. ಕ್ರಿಸ್ ಮೋರಿಸ್ ಎಸೆತದಲ್ಲಿ ಬೀಸಿ ಹೊಡೆಯಲು ಯತ್ನಿಸಿ ವಿಫಲರಾದ ಹಾರ್ದಿಕ್ ಪಾಂಡ್ಯ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಕ್ರಿಸ್ ಮೋರಿಸ್ ಪಾಂಡ್ಯಗೆ ಆಕ್ರೋಶದಿಂದ ಸೆಂಡ್ ಆಫ್ ನೀಡಿದ್ದರು. ಇದ್ಯ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯರನ್ನು ಕೋಪಗೊಳ್ಳುವಂತೆ ಮಾಡಿತ್ತು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಬ್ಬರೂ ಆಟಗಾರರು ತಮ್ಮ ವಿರುದ್ಧದ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಕ್ರಿಸ್ ಮೋರಿಸ್ ಲೆವೆಲ್ 1 ಅಪರಾಧ ಐಪಿಎಲ್ ನೀತಿ ಸಂಹಿತೆಯ 2.5 ಹಾಗೂ ಹಾರ್ದಿಕ್ ಪಾಂಡ್ಯ ಲೆವೆಲ್ 1ರ ಅಪರಾಧ ನೀತಿ ಸಂಹಿತೆಯ 2.20 ನಿಯಮವನ್ನು ಉಲ್ಲಂಘಿಸಿದಂತಾಗಿದೆ.

ವಿಶಿಷ್ಟ ದಾಖಲೆ: ಬೂಮ್ರಾಗೆ ಮೊದಲ ಹಾಗೂ 100ನೇ ಬಲಿಯಾದ ಕೊಹ್ಲಿ

ಮುಂಬೈ ಇಂಡಿಯನ್ಸ್ ತಂಡ ಸದ್ಯ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಪ್ಲೇಆಫ್ ಹಂತಕ್ಕೇರಲು ಮತ್ತಷ್ಟು ಹತ್ತಿರವಾಗಿದೆ. ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ 14 ಅಂಕಗಳನ್ನು ಹೊಂದಿದೆ. ಎರಡು ತಂಡಗಳು ಲೀಗ್‌ ಹಂತದಲ್ಲಿ ಇನ್ನು ಎರಡು ಪಂದ್ಯಗಳನ್ನು ಹೊಂದಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, October 29, 2020, 10:30 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X