ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್

Ipl 2020: Rcb Won The Match Against Srh

ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಭರ್ಜರಿ ಗೆಲುವಿನ ಮೂಲಕ ಟೂರ್ನಿಗೆ ಶುಭಾರಂಭ ಮಾಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಬೌಲಿಂಗ್‌ನಲ್ಲಿ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದ ಆರ್‌ಸಿಬಿ 10 ರನ್‌ಗಳ ಗೆಲುವಿನ ಮೂಲಕ ಅಭಿಯಾನ ಆರಂಭಿಸಿದೆ.

2016 ಬಳಿಕ ಆರ್‌ಸಿಬಿ ಎಲ್ಲಾ ಆವೃತ್ತಿಯ ಮೊದಲ ಪಂದ್ಯವನ್ನು ಸೋಲಿನೊಂದಿಗೇ ಆರಂಭಿಸಿತ್ತು. ಆದರೆ ಈ ಬಾರಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ದೇವದತ್ ಪಡಿಕ್ಕಲ್ ಹಾಗೂ ಎಬಿ ಡಿವಿಲಿಯರ್ಸ್ ಅರ್ಧ ಶತಕದ ನೆರವಿನಿಂದ 163/5 ಗಳಿಸಿತ್ತು. ಇದನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 153 ರನ್ ಗಳಿಗೆ ಆಲ್‌ಔಟ್ ಆಗುವ ಮೂಲಕ ಸೋಲು ಒಪ್ಪಿಕೊಂಡಿತು.

ಸವಾಲಿನ ಗುರಿ ನೀಡಿದ ಆರ್‌ಸಿಬಿ

ಸವಾಲಿನ ಗುರಿ ನೀಡಿದ ಆರ್‌ಸಿಬಿ

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಆರೋನ್ ಫಿಂಚ್ ಮೊದಲ ವಿಕೆಟ್‌ಗೆ 90 ರನ್‌ಗಳ ಜೊತೆಯಾಟವನ್ನು ನೀಡಿದರು. ದೇವದತ್ ಪಡಿಕ್ಕಲ್ ತಮ್ಮ ಪದಾರ್ಪಣಾ ಪಂದ್ಯದಲ್ಲಿ 56 ರನ್ ಸಿಡಿಸಿ ಮಿಂಚಿದರು. ಬಳಿಕ ಬಂದ ಎಬಿ ಡಿವಿಲಿಯರ್ಸ್ 30 ಎಸೆತಗಳಲ್ಲಿ 51 ರನ್ ಸಿಡಿಸಿ ರನ್ ಹೆಚ್ಚುವಂತೆ ಮಾಡಿದರು. ಅಂತಿಮವಾಗಿ ಆರ್‌ಸಿಬಿ 163ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು.

ಹೈದರಾಬಾದ್ ಉತ್ತಮ ಆರಂಭ

ಹೈದರಾಬಾದ್ ಉತ್ತಮ ಆರಂಭ

ಈ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ವಿಕೆಟ್ ಬೇಗನೆ ಕಳೆದುಕೊಂಡರೂ ಮನೀಶ್ ಪಾಂಡೆ ಹಾಗೂ ಬೈರ್‌ಸ್ಟೋವ್ ಉತ್ತಮ ಜೊತೆಯಾಟ ನೀಡಿದರು. ಈ ಜೋಡಿ ಬೇರ್ಪಡುವವರೆಗೂ ಪಂದ್ಯ ಎಸ್‌ಆರ್‌ಹೆಚ್ ಕೈಯ್ಯಲ್ಲೇ ಇತ್ತು. ಆದರೆ ಬಳಿಕ ಇದ್ದಕ್ಕಿಂತೆ ಕುಸಿತ ಕಾಣಲು ಆರಂಭಿಸಿತು. ಬೈರ್‌ಸ್ಟೋವ್(61ರನ್) ಏಕಾಂಗಿಯಾಗಿ ಹೋರಾಡುವ ಪ್ರಯತ್ನ ನಡೆಸಿದರಾದರೂ ಯಶಸ್ವಿಯಾಗಲಿಲ್ಲ.

ಮ್ಯಾಚ್ ವಿನ್ನರ್ ಆದ ಚಾಹಲ್

ಮ್ಯಾಚ್ ವಿನ್ನರ್ ಆದ ಚಾಹಲ್

ಸನ್ ರೈಸರ್ಸ್ ಹೈದರಾಬಾದ್‌ ಕಡೆಗೆ ವಾಲಿದ್ದ ಪಂದ್ಯವನ್ನು ಮತ್ತೆ ಆರ್‌ಸಿಬಿಯತ್ತ ತರುವಲ್ಲಿ ಚಾಹಲ್ ಪ್ರಮುಖ ಪಾತ್ರವಹಿಸಿದರು. ನೆಲೆಯೂರಿದ್ದ ಬ್ಯಾಟ್ಸ್‌ಮನ್‌ಗಳಾದ ಬೈರ್‌ಸ್ಟೋವ್ ಮತ್ತು ಮನೀಶ್ ಪಾಂಡೆ ವಿಕೆಟ್ ಪಡೆಯುವುದರ ಜೊತೆಗೆ ವಿಜಯ್ ಶಂಕರ್ ವಿಕೆಟ್ ಕೂಡ ಕೆಡವಿದರು ಯುಜುವೇಂದ್ರ ಚಾಹಲ್. ಈ ಮೂಲಕ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಿಹಿಸಿದರು. ಈ ಸಾಧನೆಗೆ ಚಾಹಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿದರು.

ಎಡವಟ್ಟುಗಳ ಮಧ್ಯೆಯೂ ಆರ್‌ಸಿಬಿಗೆ ಗೆಲುವು

ಎಡವಟ್ಟುಗಳ ಮಧ್ಯೆಯೂ ಆರ್‌ಸಿಬಿಗೆ ಗೆಲುವು

ಪಂದ್ಯದಲ್ಲಿ ಆರ್‌ಸಿಬಿ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡಿತು. ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನಕ್ಕೆ ಕಾರಣವಾದ ಕಳಪೆ ಫೀಲ್ಡಿಂಗ್ ಇಲ್ಲೂ ಮುಂದುವರಿದಿತ್ತು. ಅನಗತ್ಯ ರನ್, ಕ್ಯಾಚ್‌ಗಳನ್ನು ಬಿಡುವ ಅಭ್ಯಾಸ ಈ ಪಂದ್ಯದಲ್ಲೂ ಮುಂದುವರಿದಿರುವುದು ಆರ್‌ಸಿಬಿ ಪಾಲಿಗೆ ಉತ್ತಮ ಬೆಳವಣಿಗೆಯಲ್ಲ. ಡೆತ್ ಓವರ್‌ನಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದು ಆರ್‌ಸಿಬಿ ಪಾಲಿಗೆ ಸಮಾಧಾನ ನೀಡುವ ಸಂಗತಿಯಾದರೂ ಪ್ರಮುಖ ಬೌಲರ್ ಉಮೇಶ್ ಯಾದವ್ ಕಳಪೆ ಬೌಲಿಂಗ್ ಪ್ರದರ್ಶನ ಅರ್‌ಸಿಬಿ ಪಾಲಿಗೆ ತಲೆನೋವಾಗಿದೆ. ಆದರೆ ಈ

Story first published: Tuesday, September 22, 2020, 10:03 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X