ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ಧಾರಿಗೆ ರೋಹಿತ್ ಸೂಚಿಸಿದ್ದರು: ಸೂರ್ಯಕುಮಾರ್ ಯಾದವ್

IPL 2020: Rohit Sharma asked me to take more responsibility with the bat: Suryakumar Yadav

ರಾಯಲ್ ಚಾಲೆಂಜರ್ಸ್ ವಿರುದ್ದದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಗೆಲುವಿಗೆ ಕಾರಣರಾದ ಸೂರ್ಯ ಕುಮಾರ್ ಯಾದವ್ ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟ್‌ನಲ್ಲಿ ಹೆಚ್ಚಿ ಜವಾಬ್ಧಾರಿ ವಹಿಸಿಕೊಳ್ಳುವಂತೆ ತಿಳಿಸಿದ್ದರು ಎಂದು ಸೂರ್ಯ ಕುಮಾರ್ ಯಾದವ್ ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಪ್ರದರ್ಶನ ಹಿಂದಿನ ಆವೃತ್ತಿಗಿಂತಲೂ ಭಿನ್ನವಾಗಿದೆ. ಈ ಹಿಂದೆ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಯಾದವ್ ಈ ಬಾರಿ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಭಡ್ತಿ ಪಡೆದುಕೊಂಡಿದ್ದಾರೆ. ಜೊತೆಗೆ ಪ್ರದರ್ಶನದಲ್ಲೂ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ಐಪಿಎಲ್ ಅಂಕಪಟ್ಟಿ: RCB ಸೋಲಿಸಿ, ಟಾಪ್ ಸ್ಥಾನ, ಪ್ಲೇಆಫ್ ಸೇರಿದ ಮುಂಬೈಐಪಿಎಲ್ ಅಂಕಪಟ್ಟಿ: RCB ಸೋಲಿಸಿ, ಟಾಪ್ ಸ್ಥಾನ, ಪ್ಲೇಆಫ್ ಸೇರಿದ ಮುಂಬೈ

ಈ ಬದಲಾವಣೆಗೆ ಕಾರಣ ಏನೆಂಬುದನ್ನು ಸ್ವತಃ ಸೂರ್ಯಕುಮಾರ್ ಯಾದವ್ ಬಹಿರಂಗಪಡಿಸಿದ್ದಾರೆ. ಟೂರ್ನಿಯ ಆರಂಭಕ್ಕೂ ಮುನ್ನವೇ ಮುಂಬೈ ಮ್ಯಾನೇಜ್‌ಮೆಂಟ್ ಹಾಗೂ ರೋಹಿತ್ ಶರ್ಮಾ ತನ್ನ ಬಳಿ ಮಾತನಾಡಿದ್ದು ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾಯಿಸಿಕೊಳ್ಳುವುದರ ಜೊತೆಗೆ ಹೆಚ್ಚಿನ ಜವಾಬ್ಧಾರಿ ವಹಿಸಿಕೊಳ್ಳಬೇಕೆಂದು ತಿಳಿಸಿದ್ದರು. ಅದನ್ನು ಮಾಡಲು ಸಾಧ್ಯವಾಗಿರುವುದಕ್ಕೆ ಖುಷಿಯಿದೆ ಎಂದು ಪಂದ್ಯದ ಮುಕ್ತಾಯದ ಬಳಿಕ ಪ್ರತಿಕ್ರಿಯಿಸಿದರು.

ಇನ್ನು ಇದೇ ಸಂದರ್ಭದಲ್ಲಿ ಸೂರ್ಯ ಕುಮಾರ್ ಯಾದವ್ ಲಾಕ್‌ಡೌನ್ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ಈ ಹಿಂದೆ ನಾನು ಆನ್‌ಸೈಡ್‌ನಲ್ಲಿ ಆಡುವುದನ್ನು ಹೆಚ್ಚು ಇಷ್ಟಪಡುತ್ತಿದ್ದೆ ಎಂದಿದ್ದಾರೆ.

ಐಪಿಎಲ್ 2020: ಆರ್‌ಸಿಬಿ ವಿರುದ್ಧ ಜಯಭೇರಿ ಬಾರಿಸಿದ ಮುಂಬೈ ಇಂಡಿಯನ್ಸ್ಐಪಿಎಲ್ 2020: ಆರ್‌ಸಿಬಿ ವಿರುದ್ಧ ಜಯಭೇರಿ ಬಾರಿಸಿದ ಮುಂಬೈ ಇಂಡಿಯನ್ಸ್

ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಂದ್ಯದ ಕೊನೆಯವರೆಗೂ ಇದ್ದು ಗೆಲುವಿನ ರನ್ ಬಾರಿಸಿದರು. ಈ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

Story first published: Thursday, October 29, 2020, 9:40 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X