ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಸ್ಪಷ್ಟನೆ ನೀಡಿದ ರೋಹಿತ್: ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಮುಂಬೈ ನಾಯಕ?

Ipl 2020: Rohit Sharma Confirms Opening The Innings This Season

ಐಪಿಎಲ್ ಆರಂಭಿಕ ಪಂದ್ಯದಲ್ಲಿ ಆಡಲು ಮುಂಬೈ ಇಂಡಿಯನ್ಸ್ ತಂಡ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ತಾನು ಆರಂಭಿಕ ಆಟಗಾರನಾಗಿಯೇ ಕಣಕ್ಕಿಳಿಯುತ್ತೇನೆ ಎಂದು ತಿಳಿಸಿದ್ದಾರೆ.

ರೋಹಿತ್ ಶರ್ಮಾ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕಳೆದ ಒಂದೆರಡು ಆವೃತ್ತಿಗಳಿಂದ ಸಾಕಷ್ಟು ಚರ್ಚೆಗಳು ನಡೆದಿದೆ. 2019ರ ಆವೃತ್ತಿಯಲ್ಲಿ ರೋಹಿತ್ ಶರ್ಮಾ ಸಂಪೂರ್ಣವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದರು. ಅದೇ ರೀತಿಯಾಗಿ ಈ ಬಾರಿಯ ಆವೃತ್ತಿಯಲ್ಲೂ ಮುಂದುವರಿಯಲಿದ್ದೇನೆ ಎಂದಿದ್ದಾರೆ.

ತಂಡದ ಅವಶ್ಯಕತೆಯೆ ಸಾಧ್ಯತೆಗಳು ಮುಕ್ತ

ತಂಡದ ಅವಶ್ಯಕತೆಯೆ ಸಾಧ್ಯತೆಗಳು ಮುಕ್ತ

ಆದರೆ ಈ ಉತ್ತರದ ಜೊತೆಗೆ ಮತ್ತೊಂದು ಪ್ರಮುಖ ಸಂಗತಿಯನ್ನು ಕೂಡ ರೋಹಿತ್ ಶರ್ಮಾ ಹೇಳಿದ್ದಾರೆ. ಕಳೆದ ಬಾರಿಯಂತೆಯೇ ಈ ಬಾರಿಯೂ ತಾನು ಆರಂಭಿಕಾಗಿ ಕಣಕ್ಕಿಳಿಯಲಿದ್ದೇನೆ. ಆದರೆ ತಂಡದ ಅವಶ್ಯಕತೆಗೆ ಅನುಗುಣವಾಗಿ ಎಲ್ಲಾ ಸಾಧ್ಯತೆಗಳನ್ನೂ ಮುಕ್ತವಾಗಿರಿಸಲಾಗಿದೆ ಎಂದು ಮುಂಬೈ ನಾಯಕ ಹೇಳಿದ್ದಾರೆ.

ರೋಹಿತ್ ಕ್ರಮಾಂಕ ಬದಲಾವಣೆ ಚರ್ಚೆ

ರೋಹಿತ್ ಕ್ರಮಾಂಕ ಬದಲಾವಣೆ ಚರ್ಚೆ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಆರಂಭಿಕ ಸ್ಥಾನದಲ್ಲಿ ಕಣಕ್ಕಿಳಿಯಲು ಕೆಲ ಉತ್ತಮ ಆಯ್ಕೆಗಳು ಇದೆ. ಜೊತೆಗೆ ಹಲವು ವಿಶ್ಲೇಷಕರು ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ರೋಹಿತ್ ಕಣಕ್ಕಳಿಯುವುದು ಸೂಕ್ತ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಈ ಎಲ್ಲಾ ಚರ್ಚೆಗಳಿಗೂ ಶರ್ಮಾ ಉತ್ತರವನ್ನು ನೀಡಿದ್ದಾರೆ.

ಬೇರೆ ಆಯ್ಕೆಗಳ ಸಾಧ್ಯತೆ?

ಬೇರೆ ಆಯ್ಕೆಗಳ ಸಾಧ್ಯತೆ?

ಮುಂಬೈ ಇಂಡಿಯನ್ಸ್ ತಂಡದಲ್ಲಿ ಆರಂಭಿಕನಾಗಿ ಒಂದು ಕಡೆ ಕ್ವಿಂಟನ್ ಡಿಕಾಕ್ ಕಣಕ್ಕಿಳಿಯುವುದರಲ್ಲಿ ಅನುಮಾನವಿಲ್ಲ. ಮತ್ತೊಂದು ತುದಿಯಲ್ಲಿ ಯಾರು ಎಂಬ ಚರ್ಚೆಗೆ ರೋಹಿತ್ ಶರ್ಮಾ ತಾನೇ ಕಣಕ್ಕಿಳಿಯಲಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದರಾದರೂ ಬೇರೆ ಸಾಧ್ಯತೆಯತ್ತ ದೃಷ್ಟಿ ಹರಿಸಿದರೆ ಕೆಲ ಪ್ರಮುಖ ಆಟಗಾರರು ಆರಂಭಿಕ ಸ್ಥಾನಕ್ಕೆ ಸೂಕ್ತವಾಗಲಿದ್ದಾರೆ.

ಮುಂಬೈನಲ್ಲಿದೆ ಹಲವು ಆಯ್ಕೆ

ಮುಂಬೈನಲ್ಲಿದೆ ಹಲವು ಆಯ್ಕೆ

ಆಸ್ಟ್ರೇಲಿಯಾದ ಕ್ರಿಸ್ ಲಿನ್ ಆರಂಭಿಕನಾಗಿ ಮಿಂಚಬಲ್ಲ ಸ್ಪೋಟಕ ಬ್ಯಾಟ್ಸ್‌ಮನ್ ಆಗಿದ್ದರೆ ಯುವ ಆಟಗಾರ ಇಶಾನ್ ಕಿಶನ್ ಕೂಡ ಅವಕಾಶ ಸಿಕ್ಕರೆ ಉತ್ತಮ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ 2018ರ ಐಪಿಎಲ್ ಆವೃತ್ತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ಇಂಡಿಯನ್ಸ್ ಆರಂಭಿಕನಾಗಿ ಕಣಕ್ಕಿಳಿಯಲ ಸೂಕ್ತ ಆಟಗಾರ. ಕಳೆದ ಆವೃತ್ತಿಯಲ್ಲಿ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸುರ್ಯಕುಮಾರ್ ಯಾದವ್ ಈ ಬಾರಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ದೊರೆಯಲಿದೆಯಾ ಎಂದು ಎದುರು ನೋಡುತ್ತಿದ್ದಾರೆ.

Story first published: Friday, September 18, 2020, 10:03 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X