ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಕೊಹ್ಲಿ ದಾಖಲೆ ಮುರಿಯುವ ಅವಕಾಶ ತಪ್ಪಿಸಿಕೊಂಡ ರೋಹಿತ್

IPL 2020: Rohit Sharma miss the chance to breaks Virat Kohlis record

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಮೊದಲನೇ ಪಂದ್ಯದಲ್ಲಿ ಭಾರತದ ನಿಯಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ವಿಶಿಷ್ಠ ದಾಖಲೆ ನಿರ್ಮಿಸುವ ಅವಕಾಶ ಕೈ ತಪ್ಪಿಸಿಕೊಂಡಿದ್ದಾರೆ.

ಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿಐಪಿಎಲ್ 2020: ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರ ಸಂಪೂರ್ಣ ಪಟ್ಟಿ

ಸೆಪ್ಟೆಂಬರ್ 19ರಂದು ನಡೆದ ಐಪಿಎಲ್ ಮೊದಲನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಮುರಿಯುವ ಅವಕಾಶ ರೋಹಿತ್ ಶರ್ಮಾ ಅವರಿಗಿತ್ತು. ಆದರೆ ರೋಹಿತ್ ಉತ್ತಮ ಪ್ರದರ್ಶನವೇನೂ ನೀಡಲಿಲ್ಲ. ಆದ್ದರಿಂದ ದಾಖಲೆ ತಪ್ಪಿದೆ.

ಅಝಾಮ್, ಅಫ್ರಿದೀನ ಐಪಿಎಲ್‌ನಲ್ಲಿ ನೋಡೋ ಆಸೆ: ಭಾರತೀಯ ಅಧಿಕಾರಿಅಝಾಮ್, ಅಫ್ರಿದೀನ ಐಪಿಎಲ್‌ನಲ್ಲಿ ನೋಡೋ ಆಸೆ: ಭಾರತೀಯ ಅಧಿಕಾರಿ

ಪೀಯೂಷ್ ಚಾವ್ಲಾ ಅವರ 4.4ನೇ ಓವರ್‌ನಲ್ಲಿ 9 ಎಸೆತಗಳಿಗೆ ಕೇವಲ 12 ರನ್‌ ಬಾರಿಸಿ ರೋಹಿತ್, ಸ್ಯಾಮ್ ಕರನ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಪಂದ್ಯದಲ್ಲೇನಾದರೂ ರೋಹಿತ್ 43 ರನ್ ಬಾರಿಸಿದ್ದರೆ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಬದಿಗೆ ಹೋಗುತ್ತಿತ್ತು.

ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ಸಿಕ್ಸ್ ಸಿಕ್ಸ್ ಚಚ್ಚಿದ್ದು ಇದೇ ದಿನಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್ ಸಿಕ್ಸ್ ಸಿಕ್ಸ್ ಚಚ್ಚಿದ್ದು ಇದೇ ದಿನ

ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಅತೀ ಹೆಚ್ಚು ರನ್ ಬಾರಿಸಿದ ದಾಖಲೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ ಸಿಎಸ್‌ಕೆ ವಿರುದ್ಧ 747 ರನ್ ಗಳಿಸಿದ್ದಾರೆ. ರೋಹಿತ್ ಈಗ ಒಟ್ಟು 717 ರನ್ ಬಾರಿಸಿದಂತಾಗಿದೆ. ಇದೇ ಪಂದ್ಯಲ್ಲಿ ರೋಹಿತ್ ಇನ್ನು ಕೇವಲ 31 ರನ್ ಬಾರಿಸಿದ್ದರೂ ಕೊಹ್ಲಿ ದಾಖಲೆ ಬದಿಗೆ ಸರಿಯುತ್ತಿತ್ತು.

Story first published: Saturday, September 19, 2020, 20:54 [IST]
Other articles published on Sep 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X