ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಾಖಲೆ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕ್ವಿಂಟನ್ ಡಿ ಕಾಕ್

IPL 2020: Rohit Sharma, Virat Kohli, Quinton de Kock chase personal milestones

ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ 10ನೇ ಪಂದ್ಯದಲ್ಲಿ ಕಾದಾಡುತ್ತಿವೆ. ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 97 ರನ್ ಸೋಲನುಭವಿಸಿತ್ತು. ಹೀಗಾಗಿ ಮುಂಬೈ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿ ಬೆಂಗಳೂರು ಇದೆ.

ಬೆಂಗಳೂರು-ಮುಂಬೈ ಮುಖಾಮುಖಿಯ ಸೋಲು-ಗೆಲುವಿನ ಅಂಕಿ-ಅಂಶಗಳುಬೆಂಗಳೂರು-ಮುಂಬೈ ಮುಖಾಮುಖಿಯ ಸೋಲು-ಗೆಲುವಿನ ಅಂಕಿ-ಅಂಶಗಳು

ಸೋಮವಾರ (ಸೆಪ್ಟೆಂಬರ್ 28) ನಡೆಯುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳ ಆಟಗಾರರು ಒಂದಿಷ್ಟು ದಾಖಲೆಗಳನ್ನು ನಿರ್ಮಿಸಲು ಅವಕಾಶವಿದೆ. ಯಾರಿಗೆಲ್ಲ ವಿಶೇಷ ಮೈಲಿಗಲ್ಲು ಸ್ಥಾಪಿಸಲು ಅವಕಾಶವಿದೆ ಎನ್ನುವ ಮಾಹಿತಿ ಕೆಳಗಿದೆ ನೋಡಿ.

ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದಾಖಲೆ ಸಮೀಪದಲ್ಲಿದ್ದಾರೆ. ಇನ್ನು ರೋಹಿತ್ 10 ರನ್ ಬಾರಿಸಿದರೆ ಐಪಿಎಲ್‌ನಲ್ಲಿ 5000 ರನ್ ಬಾರಿಸಿದ ಆಟಗಾರನಾಗಿ ಗುರುತಿಸಿಕೊಳ್ಳಲಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸುರೇಶ್ ರೈನಾ ಈಗ ಇದ್ದಾರೆ.

IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್

ವಿರಾಟ್ ಕೊಹ್ಲಿ: ಆರಂಭಿಕ ಎರಡು ಪಂದ್ಯಗಳಲ್ಲಿ ಕ್ರಮವಾಗಿ 14, 1 ರನ್ ಬಾರಿಸಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮುಂಬೈ ವಿರುದ್ಧ 58 ರನ್ ಬಾರಿಸಿದರೆ ಐಪಿಎಲ್‌ನಲ್ಲಿ 5500 ರನ್ ಬಾರಿಸಿದ ಮೊದಲ ಆಟಗಾರನಾಗಿ ಗುರುತಿಸಿಕೊಳ್ಳಲಿದ್ದರು. ಆದರೆ ಕೊಹ್ಲಿ ಎಂಐ ವಿರುದ್ಧ ಕೇವಲ 3 ರನ್ ಬಾರಿಸಿ ನಿರಾಸೆ ಮೂಡಿಸಿದ್ದಾರೆ.

ಡೇಲ್ ಸ್ಟೇನ್: ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕಿಳಿದಿಲ್ಲ. ಒಂದು ವೇಳೆ ಡೇಲ್ ಸ್ಟೇನ್ ಮುಂದಿನ ಪಂದ್ಯದಲ್ಲಾದರೂ ಆಡಿ 3 ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ 100 ವಿಕೆಟ್‌ಗಳ ದಾಖಲೆ ನಿರ್ಮಿಸಲಿದ್ದಾರೆ.

ಕ್ವಿಂಟನ್ ಡಿ ಕಾಕ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ನಿಯಮಿತ ಕ್ರಿಕೆಟ್‌ನ ನಾಯಕ ಕ್ವಿಂಟನ್‌ ಡಿ ಕಾಕ್ ಮುಂಬೈ ಇಂಡಿಯನ್ಸ್‌ನಲ್ಲಿ ಆಡುತ್ತಿದ್ದಾರೆ. ಡಿ ಕಾಕ್ ಇನ್ನು 10 ರನ್ ಬಾರಿಸಿದರೆ ಐಪಿಎಲ್‌ನಲ್ಲಿ 1500 ರನ್ ಮೈಲಿಗಲ್ಲು ಸ್ಥಾಪಿಸಲಿದ್ದಾರೆ.

Story first published: Monday, September 28, 2020, 20:58 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X