ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕಪ್‌ ಗೆಲ್ಲೋದಕ್ಕೆ ಯುಎಇಗೆ ಹಾರಲು ಸಜ್ಜಾಗಿದೆ ಆರ್‌ಸಿಬಿ

IPL 2020: Royal Challengers Bangalore to depart for UAE in last week of August

ಬೆಂಗಳೂರು, ಆಗಸ್ಟ್ 10: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಗಸ್ಟ್ ತಿಂಗಳ ಕೊನೇ ವಾರದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಪ್ರಯಾಣ ಹೊರಡಲಿದೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಆರಂಭಗೊಳ್ಳಲಿದೆ.

ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ ಜೇಮ್ಸ್ 'ಕಮಲ' ಹ್ಯಾರಿಸ್ ನಿಧನಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ ಜೇಮ್ಸ್ 'ಕಮಲ' ಹ್ಯಾರಿಸ್ ನಿಧನ

13ನೇ ಆವೃತ್ತಿಯ ನಗದು ಶ್ರೀಮಂತ ಐಪಿಎಲ್ ಟೂರ್ನಿಗಾಗಿ ಆರ್‌ಸಿಬಿ ಮತ್ತು ಇನ್ನಿತರ ತಂಡಗಳು ತಯಾರಿ ನಡೆಸುತ್ತಿವೆ. ಯುಎಇಗೆ ಹೊರಡುವ ಮುನ್ನ ಎಲ್ಲಾ ತಂಡಗಳು ಕಡ್ಡಾಯವಾಗಿ ಕೋವಿಡ್ 19 ಪರೀಕ್ಷೆಗೆ ಒಳಗಾಗಬೇಕಿರುತ್ತದೆ, ಗೊತ್ತುಪಡಿಸಿದ ಹೋಟೆಲ್‌ನಲ್ಲಿ ಕ್ವಾರಂಟೈನ್ ಪಾಲಿಸಬೇಕಾಗುತ್ತದೆ.

ಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳುಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳು

ಐಪಿಎಲ್ 2020ಗಾಗಿ ಆಕರ್ಷಣೀಯ ತಂಡ ಆರ್‌ಸಿಬಿಯ ಕ್ಷಣಗಣನೆ ಶುರುವಾಗಿದೆ. ಭಾನುವಾರ (ಆಗಸ್ಟ್ 9) ತಂಡ, ವಿರಾಟ್ ಕೊಹ್ಲಿ ಮತ್ತು ಯುಜುವೇಂದ್ರ ಚಾಹಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿತ್ತು. ಈ ಚಿತ್ರದ ಜೊತೆಗೆ 'ಐಪಿಎಲ್‌ಗಿನ್ನು 41 ದಿನಗಳು ಬಾಕಿ' ಎಂದು ಬರೆಯಲಾಗಿತ್ತು.

'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!

ವರದಿಯೊಂದರ ಪ್ರಕಾರ, ಆರ್‌ಸಿಬಿ ತಂಡ ಕ್ವಾರಂಟೈನ್‌ಗಾಗಿ ಈ ವಾರ ಬೆಂಗಳೂರಿನ ಹೋಟೆಲೊಂದರಲ್ಲಿ ಒಟ್ಟು ಸೇರಲಿದೆ. ಆಟಗಾರರಿಗೆ ಅಭ್ಯಾಸಕ್ಕೆ ಸಾಕಷ್ಟು ಸಮಯ ಲಭಿಸಲಿದೆ ಎಂದು ಖಾತರಿಪಡಿಸಿದ ಬಳಿಕವೇ ವಿಮಾನಯಾನ ವೇಳಾಪಟ್ಟಿಯನ್ನು ರೂಪಿಸಲಾಗುತ್ತದೆ ಎಂದು ಆರ್‌ಸಿಬಿ ಅಧ್ಯಕ್ಷ ಸಂಜೀವ್ ಚೂರಿವಾಲ ಹೇಳಿದ್ದಾರೆ.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

'ಎಲ್ಲಾ ಭಾರತದ ಆಟಗಾರರು ಮತ್ತು ಬೆಂಬಲ ಸಿಬ್ಬಂದಿ ಬೆಂಗಳೂರಿನಲ್ಲಿ ಜೊತೆ ಸೇರಲಿದ್ದಾರೆ. ಆಗಸ್ಟ್ ತಿಂಗಳ ಕೊನೇ ವಾರದಲ್ಲಿ ಯುಎಇಗೆ ಪ್ರಯಾಣಿಸುವ ಮುನ್ನ ಕೆಲ ದಿನಗಳ ಕಾಲ ಅವರು ಬೆಂಗಳೂರಿನಲ್ಲೇ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಪಾಲಿಸಲಿದ್ದಾರೆ,' ಎಂದು ಸಂಜೀವ್ ಹೇಳಿರುವುದಾಗಿ ದ ಹಿಂದೂ ವರದಿ ಮಾಡಿದೆ.

Story first published: Monday, August 10, 2020, 15:56 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X