ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದು ಹಂತದಲ್ಲಿ 250 ರನ್ ಗುರಿ ನೀಡಿದ್ದರು ಬೆನ್ನಟ್ಟಬಹುದು ಎನಿಸಿತ್ತು: ಸ್ಟೀವ್ ಸ್ಮಿತ್

Ipl 2020: Rr Vs Kxip: Steve Smith Said Looked Like We Could Be Chasing 250 At One Point

ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧದ ದಾಖಲೆಯ ಜಯದ ನಂತರ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ನೀಡಿದ್ದ ಬೃಹತ್ ಗುರಿಯನ್ನು ಚೇಸ್ ಮಾಡುವ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಹಾಗೂ ರಾಹುಲ್ ತಿವಾಟಿಯಾ ಅವರ ಬ್ಯಾಟಿಂಗ್‌ನ ಪ್ರಯತ್ನವನ್ನು ಸ್ಟೀವ್ ಸ್ಮಿತ್ ಕೊಂಡಾಡಿದ್ದಾರೆ. ಒಂದು ಹಂತದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡ 250 ರನ್‌ಗಳ ಗುರಿಯನ್ನು ನೀಡಿದ್ದರೂ ಬೆನ್ನಟ್ಟಬಹುದೇನೋ ಎನಿಸಿತ್ತು ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಐಪಿಎಲ್ 2020: ಬೃಹತ್ ಗುರಿಯನ್ನು ರೋಚಕವಾಗಿ ಬೆನ್ನತ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್ಐಪಿಎಲ್ 2020: ಬೃಹತ್ ಗುರಿಯನ್ನು ರೋಚಕವಾಗಿ ಬೆನ್ನತ್ತಿ ಗೆದ್ದ ರಾಜಸ್ಥಾನ್ ರಾಯಲ್ಸ್

ಇದೊಂದು ಭಿನ್ನವಾದ ಚೇಸಿಂಗ್ ಆಗಿತ್ತು. ಶೆಲ್ಡನ್ ಕಾಟ್ರೆಲ್ ವಿರುದ್ಧ ತಿವಾಟಿಯಾ ತೋರಿದ ಪ್ರದರ್ಶನ ನಿಜಕ್ಕೂ ವಿಭಿನ್ನವಾಗಿತ್ತು. ಈ ಹಿಂದಿನ ಪಂದ್ಯದಲ್ಲೇ ನಾವು ಮೈದಾನ ಹಾಗೂ ಪಿಚ್‌ನ ಪರಿಸ್ಥಿತಿಯ ಬಗ್ಗೆ ತಿಳಿಸುಕೊಂಡಿದ್ದೆವು. ಇದು ಸಣ್ಣ ಕ್ರೀಡಾಂಗಣವಾಗಿದ್ದು ವಿಕೆಟ್ ಉಳಿಸಿಕೊಂಡಿದ್ದರೆ ಯಾವಾಗಲೂ ನಮಗೆ ಅವಕಾಶ ಇದ್ದೇ ಇರುತ್ತದೆ ಎಂದು ಭಾವಿಸಿಕೊಂಡಿದ್ದೆ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಸ್ಯಾಮ್ಸನ್ ತಮಗಿಷ್ಟವಾದ ರೀತಿಯಲ್ಲಿ ಸಿಕ್ಸರ್ ಬಾರಿಸಲು ಆರಂಭಿಸಿದ್ದರು. ಆತ ನೆಟ್‌ನಲ್ಲಿ ಸಿಕ್ಸರ್ ಬಾರಿಸುತ್ತಿದ್ದ ರೀತಿಯಲ್ಲೇ ಕಾಟ್ರೆಲ್ ಎಸೆತಕ್ಕೂ ಬಾರಿಸುತ್ತಿದ್ದರು. ಕಾಟ್ರೆಲ್ ಓವರ್‌ನಲ್ಲಿ ಬಾರಿಸಿದ ಮೂರು ಸಿಕ್ಸರ್‌ಗಳು ಪಂದ್ಯಕ್ಕೆ ನಾವು ಮತ್ತೆ ಮರಳಲು ಸಾಧ್ಯವಾಯಿತು. ಈ ಹಂತದಲ್ಲಿ ನಾವು 250 ರನ್‌ ಗುರಿ ನೀಡಿದ್ದರೂ ತಲುಪಬಹುದು ಎನಿಸಿತ್ತು ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಐಪಿಎಲ್ 2020: ನಿಕೋಲಸ್ ಪೂರನ್ ಸೂಪರ್‌ಮ್ಯಾನ್ ಫೀಲ್ಡಿಂಗ್‌ಗೆ ಕ್ರಿಕೆಟ್ ಜಗತ್ತು ಬೆರಗುಐಪಿಎಲ್ 2020: ನಿಕೋಲಸ್ ಪೂರನ್ ಸೂಪರ್‌ಮ್ಯಾನ್ ಫೀಲ್ಡಿಂಗ್‌ಗೆ ಕ್ರಿಕೆಟ್ ಜಗತ್ತು ಬೆರಗು

ಸಂಜು ಸ್ಯಾಮ್ಸನ್ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಸತತ ಎರಡು ಪಂದ್ಯಗಳಲ್ಲಿ ಅರ್ಧ ಶತಕವನ್ನು ಗಳಿಸಿದ ಸಾಧನೆಯನ್ನು ಮಾಡಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಮೊದಲ ಪಂದ್ಯದಲ್ಲಿ ಸಂಜು 9 ಸಿಕ್ಸರ್ ಬಾರಿಸಿದರೆ ಕೇವಲ 1 ಬೌಂಡರಿ ಚಚ್ಚಿದ್ದರು. ಆ ಪಂದ್ಯದಲ್ಲಿ 32 ಎಸೆತಗಳಲ್ಲಿ ಸಂಜು 74 ರನ್ ಬಾರಿಸಿದ್ದರು

Story first published: Tuesday, October 6, 2020, 15:23 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X