ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯನ್ನು 7ನೇ ಬಾರಿಗೆ ಔಟ್ ಮಾಡಿ ವಿಶೇಷ ದಾಖಲೆ ಬರೆದ ಸಂದೀಪ್ ಶರ್ಮಾ

IPL 2020: Sandeep Sharma equals unique IPL record

ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಸಂದೀಪ್ ಶರ್ಮಾ ಶನಿವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಸರಿದೂಗಿಸಿದ್ದಾರೆ. ಅರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಸಂದೀಪ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಏಳನೇ ಬಾರಿಗೆ ಕೆಡವಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದರಲ್ಲಿ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.

ವಿರಾಟ್ ಕೊಹ್ಲಿಯನ್ನು ಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಔಟ್ ಮಾಡುವ ಮೂಲಕ ಐಪಿಎಲ್‌ನಲ್ಲಿ ವಿರಾಟ್ ವಿರುದ್ಧ ಯಾರೂ ಸಾಧಿಸದ ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಶಿಶ್ ನೆಹ್ರಾ ಕೊಹ್ಲಿಯನ್ನು ಆರು ಬಾರಿ ಔಟ್ ಮಾಡಿದ್ದು ಈ ಹಿಂದಿನ ಐಪಿಎಲ್ ದಾಖಲೆಯಾಗಿತ್ತು. ಸಂದೀಪ್ ಶರ್ಮಾ ಈ ಸಾಧನೆಯನ್ನು ಮೀರಿ ನಿಂತಿದ್ದಾರೆ.

 ಐಪಿಎಲ್ 2020: ಬೃಹತ್ ಸಿಕ್ಸರ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಇಶಾನ್ ಕಿಶನ್ ಐಪಿಎಲ್ 2020: ಬೃಹತ್ ಸಿಕ್ಸರ್ ಹಿಂದಿನ ರಹಸ್ಯ ಬಹಿರಂಗಪಡಿಸಿದ ಇಶಾನ್ ಕಿಶನ್

ಐಪಿಎಲ್‌ನಲ್ಲಿ ಸಂದೀಪ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 12 ಬಾರಿ ಮುಖಾಮುಖಿಯಾಗಿದ್ದು 69 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. 139ರಷ್ಟು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಹನ್ನೆರಡು ಇನ್ನಿಂಗ್ಸ್‌ನಲ್ಲಿ 7 ಬಾರಿ ಸಂದೀಪ್ ಶರ್ಮಾಗೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ.

ಇನ್ನು ಒಟ್ಟಾರೆಯಾಗಿ ಸಂದೀಪ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಓರ್ವ ಬ್ಯಾಟ್ಸ್‌ಮನ್‌ನನ್ನು ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ಸರಿದೂಗಿಸಿದ್ದಾರೆ. ಜಹೀರ್ ಖಾನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯನ್ನು 7 ಬಾರಿ ಔಟ್ ಮಾಡಿದ ದಾಖಲೆಯನ್ನು ಹೊಂದಿದ್ದರು. ಇಂದಿನ ಪಂದ್ಯದಲ್ಲಿ ಈ ದಾಖಲೆಯನ್ನು ಸಂದೀಪ್ ಶರ್ಮಾ ಸರಿದೂಗಿಸಿದ್ದಾರೆ.

ಐಪಿಎಲ್ 2020: ಸತತ 2 ಶತಕದ ನಂತರ ಬೇಡದ ದಾಖಲೆ ಬರೆದ ಶಿಖರ್ ಧವನ್ಐಪಿಎಲ್ 2020: ಸತತ 2 ಶತಕದ ನಂತರ ಬೇಡದ ದಾಖಲೆ ಬರೆದ ಶಿಖರ್ ಧವನ್

ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದು ಆರ್‌ಸಿಬಿಯನ್ನು 120 ರನ್‌ಗಳಿಸಿ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಜೇಸನ್ ಹೋಲ್ಡರ್ ಹಾಗು ಸಂದೀಪ್ ಶರ್ಮಾ ತಲಾ ಎರಡು ವಿಕೆಟ್ ಕಿತ್ತು ಮಿಂಚಿದ್ದಾರೆ. ಟಿ ನಟರಾಜನ್ ನಾಲ್ಕು ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ಒಮದು ವಿಕೆಟ್ ಪಡೆದಿದ್ದಾರೆ.

Story first published: Saturday, October 31, 2020, 21:20 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X