ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಬಿ ಡಿಗೆ ಹೋಲಿಸಿದರೆ ಭಾರತ ಮಿ. 360 ಬ್ಯಾಟ್ಸ್ ಮನ್ ಯಾರು?

IPL 2020: Sanjay Bangar names Indias Mr 360

ಐಪಿಎಲ್ 2020ನಲ್ಲಿ ಬ್ಯಾಟ್ಸ್ ಮನ್ ಆಗಿ ಮಿಂಚಿದರೂ ನಾಯಕನಾಗಿ ಒಂದೆರಡು ಪಂದ್ಯ ಸೋಲುತ್ತಿದ್ದಂತೆ ಎಲ್ಲರೂ ಕೆಎಲ್ ರಾಹುಲ್ ಟೀಕಿಸಲು ಆರಂಭಿಸಿದ್ದಾರೆ. ಆದರೆ. ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು ಬೇರೆಯದ್ದೇ ಚರ್ಚೆ ಹುಟ್ಟು ಹಾಕಿದ್ದಾರೆ.

ದಕ್ಷಿಣ ಆಫ್ರಿಕಾದ ದೈತ್ಯ ಬ್ಯಾಟ್ಸ್ ಮನ್ ಎಬಿ ಡಿ ವಿಲಿಯರ್ಸ್ ಅಂತೆ ಮೈದಾನದ ಉದ್ದಗಲಕ್ಕೂ ಬೌಂಡರಿ, ಸಿಕ್ಸರ್ ಸಿಡಿಸಬಲ್ಲ ಸಮರ್ಥನೀಯ ಭಾರತೀಯ ಬ್ಯಾಟ್ಸ್ ಮನ್ ಯಾರು ಎಂಬ ಪ್ರಶ್ನೆಗೆ ಸಂಜಯ್ ಬಂಗಾರ್ ಉತ್ತರಿಸಿದ್ದಾರೆ. ಐಪಿಎಲ್ 2020ರಲ್ಲಿ ಇದೇ ಮೊದಲ ಬಾರಿಗೆ ನಾಯಕರಾಗಿರುವ ಪಂಜಾಬ್ ತಂಡದ ಕ್ಯಾಪ್ಟನ್ ಕೆಎಲ್ ರಾಹುಲ್ ಅವರನ್ನು ಭಾರತದ ಮಿಸ್ಟರ್ 360 ಎಂದು ಕರೆಯಬಹುದು. ಮೈದಾನ 360 ಕೋನಕ್ಕೂ ಚೆಂಡನ್ನು ಅಟ್ಟಬಲ್ಲ ಸಮರ್ಥ ರಾಹುಲ್ ಗಿದೆ ಎಂದಿದ್ದಾರೆ.

ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆ, ಬೆಂಬಲಕ್ಕೆ ನಿಂತ ಯುವರಾಜ್ಕೆಎಲ್ ರಾಹುಲ್ ನಾಯಕತ್ವದ ಬಗ್ಗೆ ಪ್ರಶ್ನೆ, ಬೆಂಬಲಕ್ಕೆ ನಿಂತ ಯುವರಾಜ್

''ಎಲ್ಲರೂ ಎಬಿ ಡಿ ವಿಲಿಯರ್ಸ್ ಅವರನ್ನು ಮಿ 360 ಎಂದು ಕರೆಯುತ್ತಾರೆ. ನಾನು ಕೆಎಲ್ ರಾಹುಲ್ ರನ್ನು ಭಾರತ 360 ಎಂದು ಕರೆಯುತ್ತೇನೆ'' ಎಂದು ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

IPL 2020: Sanjay Bangar names Indias Mr 360

ಐಪಿಎಲ್ 2020ರಲ್ಲಿ ರಾಹುಲ್ ಅವರು ಆರ್ ಸಿಬಿ ವಿರುದ್ಧ 132 ಅಜೇಯ ರನ್ ಬಾರಿಸಿದ್ದು, ಭಾರತೀಯ ಆಟಗಾರ, ಕ್ಯಾಪ್ಟನ್ ಬಾರಿಸಿದ ಅತ್ಯಧಿಕ ಮೊತ್ತವಾಗಿದೆ. ರಾಹುಲ್ ಹಾಗೂ ಮಯಾಂಕ್ ಇಬ್ಬರು ಅತ್ಯಧಿಕ ರನ್ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಾಹುಲ್ ಯಾವತ್ತಿಗೂ ಸಾಂಪ್ರದಾಯಿಕ ಹೊಡೆತಗಳ ಮೂಲಕವೇ ರನ್ ಗಳಿಸುತ್ತಾರೆ, ತಮ್ಮ ಬೇಸಿಕ್ ಮರೆಯದೆ ಪ್ರತಿ ಹೊಡೆತದಲ್ಲೂ ತಮ್ಮತನ ಉಳಿಸಿಕೊಂಡಿರುತ್ತಾರೆ ಎಂದು ಬಂಗಾರ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಐಪಿಎಲ್‌ನಲ್ಲಿ ಅತಿ ಕಡಿಮೆ ತಪ್ಪು ಹೊಡೆತ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ

ಮಯಾಂಕ್ 4 ಪಂದ್ಯಗಳಲ್ಲಿ 166.21 ಸ್ಟೈಕ್ ರೇಟ್ ನಂತೆ 61.50ರನ್ ಸರಾಸರಿಯಂತೆ 246ರನ್ ಗಳಿಸಿದ್ದಾರೆ. ರಾಹುಲ್ ಅವರು 148.44 ಸ್ಟೈಕ್ ರೇಟ್ ನಂತೆ 79.66 ರನ್ ಸರಾಸರಿಯಂತೆ 239 ರನ್ ಗಳಿಸಿದ್ದಾರೆ. ಇಬ್ಬರು ತಲಾ ಒಂದು ಶತಕ ಬಾರಿಸಿದ್ದಾರೆ.

Story first published: Saturday, October 3, 2020, 9:22 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X