ಟೀಮ್ ಇಂಡಿಯಾದ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆತ ಸ್ಥಾನ ಪಡೆಯದಿರುವುದು ಅಚ್ಚರಿ: ಶೇನ್ ವಾರ್ನ್

ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಭಾರತೀಯ ಕ್ರಿಕೆಟ್‌ತಂಡದ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸ್‌ನ್ ಅವಕಾಶವನ್ನು ಪಡೆದುಕೊಳ್ಳದಿರುವ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಆತ ಟೀಮ್ ಇಂಡಿಯಾದ ಮೆಟೀರಿಯಲ್ ಎಂದು ಶೇನ್ ವಾರ್ನ್ ಬಣ್ಣಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 34 ಎಸೆತಗಳಲ್ಲಿ ಭರ್ಜರಿ 74 ರನ್ ಸಿಡಿಸಿದ್ದರು. ಈ ಮೂಲಕ ಸಿಎಸ್‌ಕೆ ವಿರುದ್ಧದ 16 ರನ್‌ಗಳ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಈ ಇನ್ನಿಂಗ್ಸ್‌ಅನ್ನು ದೃಷ್ಠಿಯಲ್ಲಿಟ್ಟುಕೊಂಡು ಶೇನ್ ವಾರ್ನ್ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ಅನ್ನು ಗುಣಗಾನ ಮಾಡಿದ್ದಾರೆ.

ಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆ

ಸಂಜು ಸ್ಯಾಮ್ಸನ್ ಎಂತಾ ಅದ್ಭುತ ಆಟಗಾರ. ನಾನು ಬಹು ಕಾಲದಿಂದ ಗಮನಿಸಿದ ರೋಚಕ ಆಟಗಾರರಲ್ಲಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು. ಆದರೆ ಆತ ಭಾರತಕ್ಕಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಡುತ್ತಿಲ್ಲ ಎಂಬುದು ನನಗೆ ಅಚ್ಚರಿಯನ್ನು ಮೂಡಿಸಿದೆ ಎಂದು ಶೇನ್ ವಾರ್ನ್ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ವಾರ್ನ್ ಮಾತನಾಡಿದರು,

ಆತನೋರ್ವ ಉತ್ತಮ ಆಟಗಾರ. ಸಂಪೂರ್ಣ ಚಾಂಪಿಯನ್ ಕ್ರಿಕೆಟಿಗನಾಗಿದ್ದು ಆತನ ಬತ್ತಳಿಕೆಯಲ್ಲಿ ಎಲ್ಲಾ ರೀತಿಯ ಹೊಡೆತಗಳೂ, ಕ್ವಾಲಿಟಿ ಹಾಗೂ ಕ್ಲಾಸ್ ಇದೆ. ಈ ಬಾರಿಯ ಟೂರ್ನಿಯಲ್ಲಿ ಆತ ಸ್ಥಿರ ಪ್ರದರ್ಶನವನ್ನು ನೀಡಲಿದ್ದು ರಾಜಸ್ಥಾನ್ ರಾಯಲ್ಸ್ ತಂಡ ಕಪ್ ಗೆಲ್ಲಲು ಸಹಾಯವಾಗಲಿದೆ. ಜೊತೆಗೆ ಆತನನ್ನು ಭಾರತೀಯ ಕ್ರಿಕೆಟ್‌ನ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಕಾಣುವ ಬಯಕೆಯನ್ನು ಹೊಂದಿದ್ದೇನೆ ಎಂದು ಶೇನ್ ವಾರ್ನ್ ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಅರ್ಧ ಶತಕವನ್ನು ಬಾರಿಸಿದ್ದರು. ಈ ಸ್ಫೊಟಕ ಆಟದ ನೆರವಿನಿಂದ ಆರ್‌ಆರ್ ತಂಡ ಸಿಎಸ್‌ಕೆ ವಿರುದ್ಧ 216 ಬೃಹತ್ ಮೊತ್ತವನ್ನು ದಾಖಲಿಸಿತು. 9 ಸಿಕ್ಸರ್‌ಗಳನ್ನು ಹೊಂದಿದ್ದ ಈ ಇನ್ನಿಂಗ್ಸ್‌ಗಾಗಿ ಸಂಜು ಸ್ಯಾಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, September 27, 2020, 11:50 [IST]
Other articles published on Sep 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X