ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೆಲುವಿನ ಬಗ್ಗೆ ಒಂದು ದಿನ ಮೊದಲೇ ಶೇನ್ ವಾಟ್ಸನ್ ''Viral" ಟ್ವೀಟ್

IPL 2020: Shane Watsons prediction tweet posted 1 day before CSKs 10-wicket win goes viral

ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸತತ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆ ಸ್ಥಾನಕ್ಕೆ ಕುಸಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈಗ ಜಯದ ಹಾದಿ ಹಿಡಿದಿದೆ. ಐಪಿಎಲ್ ನಲ್ಲಿ 2ನೇ ಬಾರಿಗೆ ತಂಡವೊಂದರ ಮೇಲೆ 10 ವಿಕೆಟ್ ಗೆಲುವು ಸಾಧಿಸಿದೆ. ಆದರೆ, ಈ ಗೆಲುವಿನ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಒಂದು ದಿನಕ್ಕೂ ಮೊದಲೇ ಟ್ವೀಟ್ ಮಾಡಿದ್ದು ಈಗ ಚರ್ಚೆಯ ವಿಷಯವಾಗಿದೆ.

ಶೇನ್ ವಾಟ್ಸನ್ ಅವರು ತಮ್ಮ ಪಂದ್ಯದ ಬಗ್ಗೆ ತಮ್ಮದೇ ವಿಡಿಯೋ ವಿಶ್ಲೇಷಣೆ ನೀಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಅತ್ಯಧಿಕ ಜೊತೆಯಾಟ: ಶೇನ್ ವಾಟ್ಸನ್-ಫಾಫ್ ಡು ಪ್ಲೆಸಿಸ್ ಹೊಸ ದಾಖಲೆ!ಅತ್ಯಧಿಕ ಜೊತೆಯಾಟ: ಶೇನ್ ವಾಟ್ಸನ್-ಫಾಫ್ ಡು ಪ್ಲೆಸಿಸ್ ಹೊಸ ದಾಖಲೆ!

ಕಿಂಗ್ಸ್ ಎಲೆವನ್ ಪಂದ್ಯಕ್ಕೂ ಮುನ್ನ ನೀಡಿದ್ದ ವಿಶ್ಲೇಷಣೆಯನ್ನು ಟ್ವೀಟ್ ಮಾಡಿ, The perfect game for CSK is coming ಎಂದಿದ್ದರು. ಪಂದ್ಯದ ನಂತರ ಇದಕ್ಕೆ ಐಪಿಎಲ್ ಅಧಿಕೃತ ಟ್ವೀಟ್ ಖಾತೆ ಪ್ರತಿಕ್ರಿಯಿಸಿ, ನೀವು ಊಹಿಸಿದ್ರಿ, ನೀವು ಕಾರ್ಯಗತ ಮಾಡಿದ್ರಿ, ನೀವು ಸರಿಯಾಗಿ ಆಡಿ ಸಾಬೀತು ಮಾಡಿದ್ರಿ ಎಂಬರ್ಥ ದಲ್ಲಿ ಶುಭಹಾರೈಸಲಾಗಿದೆ.

ಪಂದ್ಯದ ಸಂಕ್ಷಿಪ್ತ ವರದಿ:
ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್, ಕೆಎಲ್ ರಾಹುಲ್ 63, ಮಯಾಂಕ್ ಅಗರ್ವಾಲ್ 26, ಮನ್‌ದೀಪ್ ಸಿಂಗ್ 27, ನಿಕೋಲಸ್ ಪೂರನ್ 33ರನ್‌ನೊಂದಿಗೆ ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್, ಶೇನ್ ವಾಟ್ಸನ್ 83 (53 ಎಸೆತ), ಫಾಫ್ ಡು ಪ್ಲೆಸಿಸ್ 87 (53 ಎಸೆತ) ಜೊತೆಯಾಟದಿಂದ17.4ನೇ ಓವರ್‌ಗೆ ವಿಕೆಟ್ ನಷ್ಟವಿಲ್ಲದೆ 181 ರನ್ ಗುರಿ ತಲುಪಿ ದಾಖಲೆ ಜಯ ದಾಖಲಿಸಿತು.

ವಾಟ್ಸನ್ ಮತ್ತು ಡು ಪ್ಲೆಸಿಸ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನೀಡಿರುವ ಜೊತೆಯಾಟ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಜೊತೆಯಾಟದ ರನ್ ಆಗಿದೆ. ಇಬ್ಬರೂ ಸೇರಿ ಅಜೇಯ 181 ರನ್ ಜೊತೆಯಾಟ ನೀಡಿದ್ದರು. ಇದಕ್ಕೂ ಮೊದಲು 2017ರಲ್ಲಿ ರಾಜ್‌ಕೋಟ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಗೌತಮ್ ಗಂಭೀರ್ ಮತ್ತು ಕ್ರಿಸ್ ಲಿನ್ ಅವರು ಗುಜರಾತ್ ಲಯನ್ಸ್ ವಿರುದ್ಧ ನೀಡಿದ್ದ 184 ರನ್ ಜೊತೆಯಾಟ ಅತ್ಯಧಿಕ ಜೊತೆಯಾಟವಾಗಿ ಗುರುತಿಸಿಕೊಂಡಿದೆ.

Story first published: Tuesday, October 6, 2020, 17:15 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X