ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್ ವೃತ್ತಿಯಲ್ಲಿ ಹೊಸ ಮೈಲಿಗಲ್ಲು ದಾಟಿದ ಧವನ್

IPL 2020: Shikhar Dhawan becomes completes 7500 runs in T20 cricket

ಯುಎಇಯಲ್ಲಿ ನಡೆದಿರುವ ಐಪಿಎಲ್ 2020ರಲ್ಲಿ ಕೊನೆಗೂ ''ಗಬ್ಬರ್ ಸಿಂಗ್'' ಶಿಖರ್ ಧವನ್ ಅಬ್ಬರಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಓಪನರ್ ಶಿಖರ್ ಧವನ್ ಹೊಸ ಮೈಲಿಗಲ್ಲು ದಾಟಿದ್ದಾರೆ. ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಧವನ್ ಟಿ 20 ಕ್ರಿಕೆಟ್‌ನಲ್ಲಿ 7500 ರನ್‌ಗಳ ಗಡಿ ದಾಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಹಾಗೂ ವಿಶ್ವದ 15ನೇ ಆಟಗಾರ ಎನಿಸಿಕೊಂಡಿದ್ದಾರೆ.

ಧವನ್ ಅವರಿಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಈ ಸಾಧನೆ ಮಾಡಿದ್ದಾರೆ. 288 ಪಂದ್ಯಗಳಲ್ಲಿ 41.61 ಮತ್ತು 5 ಶತಕಗಳ ಸರಾಸರಿಯಲ್ಲಿ 9156 ರನ್ ಗಳಿಸಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ 335 ಪಂದ್ಯಗಳಲ್ಲಿ 6 ಶತಕಗಳೊಂದಿಗೆ 8858 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ರೈನಾ 319 ಪಂದ್ಯಗಳಲ್ಲಿ 4 ಶತಕಗಳೊಂದಿಗೆ 8392 ರನ್ ಗಳಿಸಿದ್ದಾರೆ.

Video: ಪೃಥ್ವಿ ಶಾ ವಿಕೆಟ್ ಕಿತ್ತ ಖುಷಿಯಲ್ಲಿ ಜೋಫ್ರಾ ಆರ್ಚರ್ ಡ್ಯಾನ್ಸ್Video: ಪೃಥ್ವಿ ಶಾ ವಿಕೆಟ್ ಕಿತ್ತ ಖುಷಿಯಲ್ಲಿ ಜೋಫ್ರಾ ಆರ್ಚರ್ ಡ್ಯಾನ್ಸ್

267 ಪಂದ್ಯಗಳಲ್ಲಿ 264 ಇನ್ನಿಂಗ್ಸ್ ಆಡಿದ ಧವನ್, ಕೊಹ್ಲಿ ನಂತರ ಈ ಸಾಧನೆ ಮಾಡಿದ ಎರಡನೇ ಅತಿ ವೇಗದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಐಪಿಎಲ್ 30ನೇ ಪಂದ್ಯದ ಮೊದಲು ಈ ಮೈಲಿಗಲ್ಲು ದಾಟಲು ಕೇವಲ 5 ರನ್ ಬೇಕಾಗಿತ್ತು. ಐಪಿಎಲ್ 2020ರಲ್ಲಿ 5, 32, 26, 34, 35 ಹಾಗೂ 0 ಗಳಿಸಿದ್ದ ಧವನ್ ಇಂದು ಉತ್ತಮವಾಗಿ ಆಡಿದರು.

ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್ಈ 4 ಕ್ರಿಕೆಟರ್ ಅಚ್ಚರಿಯ ಕಮ್ ಬ್ಯಾಕ್ ಆಗ್ಲಿ ಎಂದ ಫ್ಯಾನ್ಸ್

ಕಾರ್ತಿಕ್ ತ್ಯಾಗಿ ಅವರ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಸಾಧನೆ ಮಾಡಿದರು. ಈ ಪಂದ್ಯದಲ್ಲಿ 33 ಎಸೆತಗಳಲ್ಲಿ 57ರನ್ ಗಳಿಸಿದರು. ಇದಲ್ಲದೆ ಶತಕ ಗಳಿಸದೆ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೋಯೆಬ್ ಮಲಿಕ್ ಕೂಡ ಈ ಮೈಲಿಗಲ್ಲನ್ನು ಒಂದು ಶತಕವಿಲ್ಲದೆ ದಾಟಿದ್ದಾರೆ. ಭಾರತ ಪರ 61 ಟಿ 20 ಪಂದ್ಯಗಳಲ್ಲಿ ಶಿಖರ್ 1588 ರನ್ ಗಳಿಸಿದ್ದಾರೆ. 166 ಐಪಿಎಲ್ ಪಂದ್ಯಗಳಲ್ಲಿ 4785 ರನ್ ಗಳಿಸಿದ್ದಾರೆ.

ಐಪಿಎಲ್ ನಲ್ಲಿ ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಪರ ಆಡಿರುವ ಧವನ್ ಅವರು ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಕೆ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ( 5688ರನ್), ರೈನಾ(5368), ರೋಹಿತ್ (5114) ಹಾಗೂ ಡೇವಿಡ್ ವಾರ್ನರ್ (4990) ಮೊದಲ ನಾಲ್ಕು ಸ್ಥಾನದಲ್ಲಿದ್ದಾರೆ.

Story first published: Thursday, October 15, 2020, 10:07 [IST]
Other articles published on Oct 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X