ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸತತ 2 ಶತಕದ ನಂತರ ಬೇಡದ ದಾಖಲೆ ಬರೆದ ಶಿಖರ್ ಧವನ್

IPL 2020: Shikhar Dhawan embarrasses himself with bad record

ಐಪಿಎಲ್ 13ನೇ ಆವೃತ್ತಿ ಸಾಕಷ್ಟು ಪೈಪೋಟಿಯಿಂದ ಕೂಡಿದೆ. ಯಾವೆಲ್ಲಾ ಟೀಮ್‌ಗಳು ಪ್ಲೇ ಆಫ್‌ಗೆ ಪ್ರವೇಶ್ ಗಿಟ್ಟಿಸಿಕೋಳ್ಳಲಿದ ಎಂಬುದನ್ನು ಊಹಿಸುವುದಕ್ಕೆ ಈ ಕ್ಷಣದವರೆಗೂ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಉತ್ತಮ ಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಸತತವಾಗಿ ಕಳಪೆ ಪ್ರದರ್ಶನವನ್ನು ನೀಡಿ ಕುಸಿತ ಕಾಣಲು ಆರಂಭಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಬ್ಯಾಟ್ಸ್‌ಮನ್ ಬೇಡದ ದಾಖಲೆಯೊಂದನ್ನು ಮಾಡಿದ್ದಾರೆ.

ಐಪಿಎಲ್‌ನ ಆರಂಭದಲ್ಲಿ ಅಷ್ಟೇನು ಉತ್ತಮ ಫಾರ್ಮ್‌ನಲ್ಲಿದ್ದದ ಧವನ್ ಬಳಿಕ ಅದ್ಭುತ ಲಯವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ಸತತ ಎರಡು ಶತಕವನ್ನು ದಾಖಲಿಸುವಲ್ಲೂ ಧವನ್ ಯಶಸ್ವಿಯಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಶತಕ ದಾಖಲಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.

ಐಪಿಎಲ್ 2020: ಮುಂಬೈ ಇಂಡಿಯನ್ಸ್ ಮುಡಿಗೆ ಅಪರೂಪದ ದಾಖಲೆಐಪಿಎಲ್ 2020: ಮುಂಬೈ ಇಂಡಿಯನ್ಸ್ ಮುಡಿಗೆ ಅಪರೂಪದ ದಾಖಲೆ

ಆದರೆ ಇದಾದ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಶಿಖರ್ ಧವನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಎರಡು ಪಂದ್ಯಗಳಲ್ಲೂ ಧವನ್ ಸೊನ್ನೆಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಒಂದೇ ಟೂರ್ನಿಯಲ್ಲಿ ಸತತ ಎರಡು ಶತಕ ಹಾಗೂ ಸತತ ಎರಡು ಡಕ್ ಔಟ್ ಆದ ಮೊದಲ ಆಟಗಾರ ಎಂಬ ಬೇಡದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಧವನ್ ಟ್ರೆಂಟ್ ಬೋಲ್ಡ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ನೀಡುವ ಮೂಲಕ ತಾನು ಎದುರಿಸಿದ ಎರಡನೇ ಎಸೆತದಲ್ಲೇ ಔಟ್ ಆಗಿದ್ದಾರೆ. ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧವನ್ ಗೋಲ್ಡನ್ ಡಕ್ ಆಗುವ ಮೂಲಕ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಡೆಲ್ಲಿ 88 ರನ್‌ಗಳ ಅಂತರದಿಂದ ಶರಣಾಗಿತ್ತು.

ರೋಹಿತ್ ಶರ್ಮಾ ಫಿಟ್‌ನೆಸ್: ನವೆಂಬರ್ 1ರಂದು ಸ್ಪಷ್ಟವಾಗಲಿದೆ ರೋಹಿತ್ ಆಸ್ಸ್ರೇಲಿಯಾ ಪ್ರವಾಸದ ಭವಿಷ್ಯರೋಹಿತ್ ಶರ್ಮಾ ಫಿಟ್‌ನೆಸ್: ನವೆಂಬರ್ 1ರಂದು ಸ್ಪಷ್ಟವಾಗಲಿದೆ ರೋಹಿತ್ ಆಸ್ಸ್ರೇಲಿಯಾ ಪ್ರವಾಸದ ಭವಿಷ್ಯ

ಐಪಿಎಲ್‌ನಲ್ಲಿ ಶಿಖರ್ ಧವನ್ ತಮ್ಮ ಚೊಚ್ಚಲ ಶತಕವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ್ದರು. ಈ ಪಂದ್ಯದಲ್ಲಿ 101 ರನ್ ಸಿಡಿಸಿ ಐಪಿಎಲ್‌ನಲ್ಲಿ 13 ವರ್ಷಗಳ ನಂತರ ಶತಕ ಸಿಡಿಸಿದ ಸಾಧನೆ ಮಾಡಿದ್ದರು. ಅದಾಮುಮದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಮತ್ತೊಂದು ಶತಕ ಸಿಡಿಸಿ ಮಿಂಚಿದ್ದರು ಧವನ್. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ ಆಸಿಸ್ ವಿರುದ್ಧದ ಟಿ20 ಸರಣಿಗೆ ಕಮ್‌ಬ್ಯಾಕ್ ಮಾಡಿದ ನಂತರ ನಡೆದ ಎರಡು ಪಂದ್ಯಗಳಲ್ಲಿ ಒಂದು ರನ್ ಗಳಿಸಲೂ ಧವನ್‌ಗೆ ಸಾಧ್ಯವಾಗಿಲ್ಲ.

Story first published: Saturday, October 31, 2020, 18:31 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X