ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆ Vs ಸನ್ ರೈಸರ್ಸ್ ಪಂದ್ಯ: ಕೆಲವು ವಿಶಿಷ್ಟ ಸಂಗತಿಗಳು ಇಲ್ಲಿವೆ

ಹಿರಿಯ ಆಟಗಾರರೇ ತುಂಬಿದ್ದರೂ ಅತ್ಯಂತ ಪ್ರಬಲ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು, ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಅಂಕ ಹಾಗೂ ನೆಟ್ ರನ್ ರೇಟ್‌ನಲ್ಲಿ ಸಿಎಸ್‌ಕೆ ಇತರೆ ಎಲ್ಲ ತಂಡಗಳಿಗಿಂತ ಕಳಪೆ ಪ್ರದರ್ಶನ ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇತಿಹಾಸ ಗಮನಿಸಿದರೆ ಈ ಬಾರಿಯ ಅದರ ಪ್ರದರ್ಶನ ಅಚ್ಚರಿ ಮೂಡಿಸುವುದು ಸಹಜ. ಏಕೆಂದರೆ ಯಾವಾಗಲೂ ಪಟ್ಟಿಯ ನಾಲ್ಕರ ಹಂತದಲ್ಲಿಯೇ ಇರುತ್ತಿದ್ದ ತಂಡ, ಹೀಗೆ ಸತತ ವೈಫಲ್ಯ ಕಂಡಿರುವುದು ತೀರಾ ವಿರಳ. ಪ್ರಮುಖ ಆಟಗಾರರ ವೈಫಲ್ಯ, ಗೈರು ಹಾಜರಿಯಲ್ಲಿ ಚೆನ್ನೈ ತಂಡ ತನ್ನ ಪ್ರಾಬಲ್ಯ ಕಳೆದುಕೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮುಂದೆ ಓದಿ...

ಸತತ ಮೂರು ಸೋಲು

ಸತತ ಮೂರು ಸೋಲು

ಪ್ರಸಕ್ತ ಸಾಲಿನ ಐಪಿಎಲ್‌ನ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ್ದ ಸಿಎಸ್‌ಕೆ, ನಂತರದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿದೆ. 2014ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತವಾಗಿ ಮೂರು ಪಂದ್ಯಗಳನ್ನು ಸೋತಿರುವುದು ಇದೇ ಮೊದಲ ಸಲ.

ಚೆನ್ನೈ ವಿರುದ್ಧ ಅರ್ಧ ಶತಕ ಚಚ್ಚಿದ ಪ್ರಿಯಂ ಗರ್ಗ್, ಯಾರೀ ಟೀನೇಜರ್?

ಚೇಸಿಂಗ್‌ನಲ್ಲಿ ಧೋನಿ ಸೋಲು

ಚೇಸಿಂಗ್‌ನಲ್ಲಿ ಧೋನಿ ಸೋಲು

ರನ್ ಚೇಸಿಂಗ್ ವೇಳೆ ಧೋನಿ ಅನೇಕ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ್ದರು. ಆದರೆ ಕೆಲವು ಪಂದ್ಯಗಳಲ್ಲಿ ಅಜೇಯ ಪ್ರಯತ್ನ ನಡೆಸಿದ್ದರೂ ಅವರಿಗೆ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಅದರಲ್ಲಿ ಎರಡು ಪಂದ್ಯಗಳು ಈ ವರ್ಷವೇ ದಾಖಲಾಗಿವೆ. ಅಂತಹ ಕೆಲವು ಪ್ರಯತ್ನಗಳ ವಿವರ ಇಲ್ಲಿದೆ.

63* Vs ಮುಂಬೈ ಇಂಡಿಯನ್ಸ್ (2013)

42* Vs ಕಿಂಗ್ಸ್ ಇಲೆವೆನ್ ಪಂಜಾಬ್ (2014)

79* Vs ಕಿಂಗ್ಸ್ ಇಲೆವೆನ್ ಪಂಜಾಬ್ (2018)

84* Vs ಆರ್‌ಸಿಬಿ (2019)

29* Vs ರಾಜಸ್ಥಾನ ರಾಯಲ್ಸ್ (2020)

47* Vs ಸನ್ ರೈಸರ್ಸ್ ಹೈದರಾಬಾದ್ (2020)

20ನೇ ಓವರ್‌ನಲ್ಲಿ ಧೋನಿ

20ನೇ ಓವರ್‌ನಲ್ಲಿ ಧೋನಿ

ಐಪಿಎಲ್‌ನಲ್ಲಿ 2017ರಿಂದ ಇಲ್ಲಿಯವರೆಗೆ ಧೋನಿ 20ನೇ ಓವರ್‌ನಲ್ಲಿ ತಾವಾಡಿದ ಎಸೆತಗಳಲ್ಲಿ ಬಾರಿಸಿದ ರನ್ ಕೂಡ ಗಮನಾರ್ಹ. ಈ ನಾಲ್ಕು ಆವೃತ್ತಿಗಳಲ್ಲಿ 20ನೇ ಓವರ್‌ನಲ್ಲಿ ಒಟ್ಟು 92 ಎಸೆತಗಳನ್ನು ಎದುರಿಸಿದ್ದು, 272.8ರ ಸ್ಟ್ರೈಕ್‌ರೇಟ್‌ನಲ್ಲಿ 251 ರನ್ ಗಳಿಸಿದ್ದಾರೆ. ಇದರಲ್ಲಿ 24 ಸಿಕ್ಸರ್‌ಗಳಿವೆ.

ಅವಕಾಶ ಪಡೆಯದ ಕ್ರಿಸ್ ಗೇಲ್: ಸ್ಫೋಟಕ ಆಟಗಾರನ ಯುಗಾಂತ್ಯ?

ಜಡೇಜಾ ಮೊದಲ ಅರ್ಧಶತಕ

ಜಡೇಜಾ ಮೊದಲ ಅರ್ಧಶತಕ

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ, ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದರು. ವಿಶೇಷವೆಂದರೆ ಇದು ಇಡೀ ಟಿ20ಯಲ್ಲಿಯೇ ಅವರ ಮೊದಲ ಅರ್ಧ ಶತಕ. 174 ಐಪಿಎಲ್ ಪಂದ್ಯ ಸೇರಿದಂತೆ 241ನೇ ಪಂದ್ಯದಲ್ಲಿ ಅವರು ತಮ್ಮ ಮೊದಲ ಅರ್ಧ ಶತಕ ದಾಖಲಿಸಿದ್ದಾರೆ. ಐಪಿಎಲ್‌ನಲ್ಲಿ ಅರ್ಧ ಶತಕವಿಲ್ಲದೆಯೂ ಅತಿ ಹೆಚ್ಚು ರನ್ ಗಳಿಸಿದ ವಿಶಿಷ್ಟ ಸಾಧನೆ ಅವರ ಹೆಸರಿನಲ್ಲಿದೆ. ಇದುವರೆಗೂ 48 ರನ್ ಗಳಿಸಿದ್ದೇ ಅವರ ಗರಿಷ್ಠ ಸ್ಕೋರ್ ಆಗಿತ್ತು.

Story first published: Saturday, October 3, 2020, 15:18 [IST]
Other articles published on Oct 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X