ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಪಡಿಕ್ಕಲ್ ಆಟಕ್ಕೆ ತಲೆದೂಗಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Ipl 2020: Sourav Ganguly Praised Devdutt Padikkal Batting

ಕರ್ನಾಟಕದ ಯುವ ಆಟಗಾರ ದೇವದತ್ತ ಪಡಿಕ್ಕಲ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿಯಾಗಿ ಪದಾರ್ಪಣೆ ಮಾಡಿದ್ದಾರೆ. ಐಪಿಎಲ್‌ನ ಮೊದಲ ಪಂದ್ಯದಲ್ಲೇ ಅರ್ಧ ಶತಕವನ್ನು ಸಿಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ದೇವದತ್ ಮೊದಲ ಪಂದ್ಯದಲ್ಲಿ ಯಾವುದೇ ರೀತಿಯ ಅಂಜಿಕೆಯಿಲ್ಲದೆ ಮುನ್ನಗ್ಗಿ ಬಾರಿಸಿದ ರೀತಿಗೆ ಅನುಭವಿ ಆಟಗಾರರು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.ಟೀಮ್ ಇಂಡಿಯಾದ ಮಾಜಿ ನಾಯಕ ಬಿಸಿಸಿಐ ಅದ್ಯಕ್ಷ ಸೌರವ್ ಗಂಗೂಲಿ ದೇವದತ್ ಪಡಿಕ್ಕಲ್ ಪ್ರದರ್ಶನಕ್ಕೆ ಟ್ವೀಟ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್

ಗಂಗೂಲಿ ಟ್ವೀಟ್ ಮೂಲಕ ಪ್ರಶಂಸೆ

ಗಂಗೂಲಿ ಟ್ವೀಟ್ ಮೂಲಕ ಪ್ರಶಂಸೆ

ಇನ್ನು ದೇವದತ್ ಪಡಿಕ್ಕಲ್ ಪ್ರದರ್ಶನದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. "ದೇವದತ್ ಪಡಿಕ್ಕಲ್ ಆಟವನ್ನು ನಾನು ತುಂಬಾ ಆನಂದಿಸಿದ್ದೇನೆ. ಎಡಗೈ ಆಟಗಾರನ ಸುಲಲಿತ ಬ್ಯಾಟಿಂಗ್ ನೋಡುವುದು ಆಕರ್ಷಕ" ಎಂದಿದ್ದಾರೆ.

ಭರ್ಜರಿ ಆಟ ಪ್ರದರ್ಶನ

ಭರ್ಜರಿ ಆಟ ಪ್ರದರ್ಶನ

ಅನುಭವಿ ಆಟಗಾರ ಆರೋನ್ ಫಿಂಚ್‌ ಜೊತೆಗೆ ಬ್ಯಾಟಿಂಗ್ ಮಾಡಲಿಳಿದ ದೇವದತ್ ಪಡಿಕ್ಕಲ್ ಭರ್ಜರಿ ಆರಂಭವನ್ನು ನೀಡಿದರು. ಮೊದಲ ವಿಕೆಟ್‌ಗೆ 90 ರನ್ ಒಟ್ಟುಗೂಡಿಸಿದ ಈ ಆಟಗಾರರು 11 ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಿದರು. ಇದರಲ್ಲಿ ಪಡಿಕ್ಕಲ್ 42 ಎಸೆತಗಳನ್ನು ಎದುರಿಸಿ 56 ರನ್ ಸಿಡಿಸಿದರು. ಪಡಿಕ್ಕಲ್ ವಿಕೆಟ್ ಕಳೆದುಕೊಂಡ ಬೆನ್ನಿಗೆ ಫಿಂಚ್ ಕೂಡ ಔಟಾಗಿ ಫೆವಿಲಿಯನ್ ಸೇರಿದ್ದರು.

ಮುಂದಿನ ಪಂದ್ಯಗಳಲ್ಲೂ ಮಿಂಚುವ ಭರವಸೆ

ಮುಂದಿನ ಪಂದ್ಯಗಳಲ್ಲೂ ಮಿಂಚುವ ಭರವಸೆ

ಆರಂಭದಿಂದಲೇ ಪಡಿಕ್ಕಲ್ ನಿರ್ಭೀತಿಯ ಆಟವನ್ನು ಪ್ರದರ್ಶಿಸಿದರು. ಹೊಡೆತದ ಆಯ್ಕೆ, ಪಾದದ ಚಲನೆ, ನಿಖರತೆ ಎಲ್ಲವೂ ಅದ್ಭುತವಾಗಿದ್ದ ಪಡಿಕ್ಕಲ್ ಇನ್ನಿಂಗ್ಸ್‌ನಲ್ಲಿ 8 ಬೌಂಡರಿಗಳು ಒಳಗೊಂಡಿತ್ತು. ಈ ಆತ್ಮವಿಶ್ವಾಸದ ಆಟದಿಂದಾಗಿ ಮುಂದಿನ ಪಂದ್ಯಗಳಲ್ಲೂ ಪಡಿಕ್ಕಲ್ ಮಿಂಚುವ ಭರವಸೆಯನ್ನು ಮೂಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆಲುವು

ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆಲುವು

ಬ್ಯಾಟಿಂಗ್‌ನ್ಲಲಿ ಪಡಿಕ್ಕಲ್ ಹಾಗೂ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಯುಜುವೇಂದ್ರ ಚಾಹಲ್ ಅದ್ಭುತ ದಾಳಿಯಿಂದ ಮೊದಲ ಪಂದ್ಯವನ್ನು ಆರ್‌ಸಿಬಿ ಅದ್ಭುತವಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ

Story first published: Tuesday, September 22, 2020, 15:31 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X