ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಯುವ ಬ್ಯಾಟ್ಸ್‌ಮನ್‌ಗಳ ಬೆನ್ನಿಗೆ ನಿಂತ ಡೇವಿಡ್ ವಾರ್ನರ್

IPL 2020: SRH skipper David Warner backs young Indian batsmen

ದುಬೈ: ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಭಾರತೀಯ ಇಬ್ಬರು ಯುವ ಬ್ಯಾಟ್ಸ್‌ಮನ್‌ಗಳ ಬೆನ್ನಿಗೆ ನಿಂತಿದ್ದಾರೆ. ಪ್ರಿಯಮ್ ಗರ್ಗ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಬೆಂಬಲಿಸಿ ಮಾತನಾಡಿರುವ ವಾರ್ನರ್, ಇಬ್ಬರೂ ಅವರ ನೈಸರ್ಗಿಕ ಆಟ ಆಡಲು ಬಿಡಬೇಕು ಎಂದಿದ್ದಾರೆ.

ಸಿಎಸ್‌ಕೆ vs ಆರ್‌ಆರ್ ಮುಖಾಮುಖಿಯಲ್ಲಿ ಹೆಚ್ಚು ಗೆದ್ದಿದ್ಯಾರು ಗೊತ್ತಾ?!ಸಿಎಸ್‌ಕೆ vs ಆರ್‌ಆರ್ ಮುಖಾಮುಖಿಯಲ್ಲಿ ಹೆಚ್ಚು ಗೆದ್ದಿದ್ಯಾರು ಗೊತ್ತಾ?!

ಇಂಡಿಯನ್ ಪ್ರೀಮಿಯರ್ ಲೀಗ್ 3ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸ್ಪರ್ಧಿಸಿದ್ದವು. ಇದರಲ್ಲಿ ಆರ್‌ಸಿಬಿ ತಂಡ 10 ರನ್‌ಗಳಿಂದ ಗೆದ್ದಿತ್ತು. ಪಂದ್ಯದ ವೇಳೆ ಗರ್ಗ್ ಮತ್ತು ಶರ್ಮಾ ಅನುಭವಿಲ್ಲದೆ ಪರದಾಡಿ ಟೀಕಿಸಲ್ಪಟ್ಟಿದ್ದರು. ಆದರೆ ಎಸ್‌ಆರ್‌ಎಚ್ ನಾಯಕ ವಾರ್ನರ್ ಯುವ ಬ್ಯಾಟ್ಸ್‌ಮನ್‌ಗಳ ಬೆಂಬಲಕ್ಕೆ ನಿಂತಿದ್ದಾರೆ.

ಐಪಿಎಲ್ 2020: ಸಮಗ್ರ ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳ್ಳುಳ್ಳ ವಿಶೇಷ ಪುಟ

ಪಂದ್ಯದ ಬಳಿಕ ಮಾತನಾಡಿದ ವಾರ್ನರ್, 'ಅವರಿಬ್ಬರು ಉತ್ತಮ ಸ್ಥಿತಿಯಲ್ಲಿಲ್ಲ ಅನ್ನಿಸಿದಾಗ ನಾವು ಅವರನ್ನು (ಗರ್ಗ್, ವರ್ಮಾ ಅವರನ್ನು) ಮಧ್ಯಮ ಓವರ್‌ನಲ್ಲಿ ಇಳಿಸಬಾರದು. ಮೂರು ಬ್ಯಾಟ್ಸ್‌ಮನ್‌ಗಳು ವಿಚಿತ್ರ ರೀತಿಯಲ್ಲಿ ಔಟಾಗಿದ್ದಕ್ಕೆ ಅವರನ್ನು ಟೀಕಿಸಿದ್ದು ಯಾರೇ ಇರಲಿ. ನಾನು ಇಬ್ಬರೂ ಯುವ ಆಟಗಾರರಿಗೂ ಪ್ರೋತ್ಸಾಹಿಸುತ್ತೇನೆ,' ಎಂದರು.

ಐಪಿಎಲ್ 2020: ಕ್ರೀಡಾಲೋಕದ ಇತಿಹಾಸದಲ್ಲಿ ದಾಖಲೆ ಬರೆದ ಐಪಿಎಲ್ ಉದ್ಘಾಟನಾ ಪಂದ್ಯಐಪಿಎಲ್ 2020: ಕ್ರೀಡಾಲೋಕದ ಇತಿಹಾಸದಲ್ಲಿ ದಾಖಲೆ ಬರೆದ ಐಪಿಎಲ್ ಉದ್ಘಾಟನಾ ಪಂದ್ಯ

ಮಾತು ಮುಂದುವರೆಸಿದ ವಾರ್ನರ್, 'ಇಲ್ಲಿ ನಡೆದ ಸನ್ನಿವೇಶ ಅಥವಾ ಪರಿಸ್ಥಿತಿ ಏನೇ ಇರಲಿ. ನಾನು ಇದರ ಬಗ್ಗೆ ಹೆಚ್ಚಿಗೆ ಯೋಚಿಸಲು ಹೋಗುವುದಿಲ್ಲ. ಅವರದ್ದೇ ಸ್ವಂತ ರೀತಿಯಲ್ಲಿ ಆಟ ಆಡಲು ನಾನು ಪ್ರೋತ್ಸಾಹಿಸುತ್ತೇನೆ. ನನ್ನ ಪ್ರಕಾರ ನೈಸರ್ಗಿಕ ಆಟ ಆಡೋದೇ ಕಲಿಕೆಯ ಉತ್ತಮ ದಾರಿ ಎಂದು ವಾರ್ನರ್ ಹೇಳಿದ್ದಾರೆ.

ಐಪಿಎಲ್ 2020: ಆರ್‌ಸಿಬಿ ಅಭಿಮಾನಿಗಳಿಗೆ ದೇವದತ್ ಪಡಿಕ್ಕಲ್ ಕನ್ನಡದಲ್ಲಿ ಮನವಿ: ವಿಡಿಯೋಐಪಿಎಲ್ 2020: ಆರ್‌ಸಿಬಿ ಅಭಿಮಾನಿಗಳಿಗೆ ದೇವದತ್ ಪಡಿಕ್ಕಲ್ ಕನ್ನಡದಲ್ಲಿ ಮನವಿ: ವಿಡಿಯೋ

ಸೋಮವಾರದ ಪಂದ್ಯದಲ್ಲಿ 19ರ ಹರೆಯದ ಪ್ರಿಯಮ್ ಗರ್ಗ್ ಮತ್ತು 20ರ ಹರೆಯದ ಅಭಿಷೇಕ್ ಶರ್ಮಾ ಕ್ರಮವಾಗಿ 12 ಮತ್ತು 7 ರನ್ ಬಾರಿಸಿದ್ದರು. ಅಲ್ಲದೆ ಆಟದ ಕೊನೇ ಕ್ಷಣದಲ್ಲಿ ರನ್‌ ನೋಡುವಾಗ ಸಹ ಆಟಗಾರ ರಶೀದ್ ಖಾನ್‌ಗೆ ಡಿಕ್ಕಿ ಹೊಡೆದು ಅಭಿಷೇಕ್ ರನ್ ಔಟ್ ಆಗಿದ್ದರು. ಹೀಗಾಗಿ ಎಸ್‌ಆರ್‌ಎಚ್ ಮಧ್ಯಮ ಕ್ರಮಾಂಕದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು.

Story first published: Tuesday, September 22, 2020, 17:38 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X