ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಡಿಕ್ಕಲ್ ಪದಾರ್ಪಣೆಗೆ ಅರ್ಧ ಶತಕದ ಮೆರುಗು: ಐಪಿಎಲ್‌ನಲ್ಲೂ ಸಂಪ್ರದಾಯ ಮುಂದುವರಿಸಿದ ಕನ್ನಡಿಗ!

Ipl 2020: Srh Vs Rcb, Devdutt Padikkal Debut Half Century

ಕರ್ನಾಟಕದ ಕ್ರಿಕೆಟಿಗ ದೇವದತ್ ಪಡಿಕ್ಕಲ್ ಐಪಿಎಲ್‌ನಲ್ಲೂ ಭರ್ಜರಿ ಪದಾರ್ಪಣೆಯ ಮೂಲಕ ತನ್ನ ಪ್ರತಿಭೆಯನ್ನು ಸಾಭೀತು ಪಡಿಸಿದ್ದಾರೆ. ಪದಾರ್ಪಣಾ ಪಂದ್ಯದಲ್ಲಿ ಅದ್ಭುತ ಅರ್ಧ ಶತಕವನ್ನು ದಾಖಲಿಸಿದ ಪಡಿಕ್ಕಲ್ ತನ್ನ ಆಯ್ಕೆಯನ್ನು ಭರ್ಜರಿಯಾಗಿ ಸಮರ್ಥಿಸಿಕೊಂಡಿದ್ದಾರೆ.

ದೇಶಿಯ ಕ್ರಿಕೆಟ್‌ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ದೇವ್‌ದತ್ ಪಡಿಕ್ಕಲ್ ಈ ಬಾರಿ ಐಪಿಎಲ್‌ನಲ್ಲಿ ನೀಡುವ ಪ್ರದರ್ಶನದ ಮೇಲೆ ಎಲ್ಲರ ದೃಷ್ಟಿಯಿತ್ತು. ಆ ನಿರೀಕ್ಷೆಗೆ ತಕ್ಕ ಪ್ರದರ್ಶನವನ್ನು ಮೊದಲ ಪಂದ್ಯದಲ್ಲೇ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ದೇವ್‌ದತ್ ಪಡಿಕ್ಕಲ್.

ಐಪಿಎಲ್‌ನಲ್ಲಿ ಪದಾರ್ಪಣಾ ಪಂದ್ಯದಲ್ಲಿ ಅರ್ಧ ಶತಕವನ್ನು ಗಳಿಸುವ ವಿಸೇಷ ಸಾಧನೆಯನ್ನು ಮಾಡಿದ್ದಾರೆ. ಆ ಸಾಧನೆಯೇನು, ಪಡಿಕ್ಕಲ್ ಆಟದ ಸೊಬಗು ಹೇಗಿತ್ತು ಮುಂದೆ ಓದಿ

ಪಡಿಕ್ಕಲ್ ಮುಂದೆ ಫಿಂಚ್ ಮಂಕು

ಪಡಿಕ್ಕಲ್ ಮುಂದೆ ಫಿಂಚ್ ಮಂಕು

ಇಂದಿನ ಪಂದ್ಯದ ಮೂಲಕ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಕೂಡ ಆರ್‌ಸಿಬಿ ತಂಡಕ್ಕೆ ಪದಾರ್ಪಣೆಯನ್ನು ಮಾಡಿದದರು. ಫಿಂಚ್‌ಗೆ ಆರಂಭಿಕನಾಗಿ ನಿರೀಕ್ಷೆಯಂತೆಯೇ ಪಡಿಕ್ಕಲ್ ಸಾಥ್ ನೀಡಿದ್ದರು. ಆದರೆ ಪಡಿಕ್ಕಲ್ ಕೌಶಲ್ಯಯುತ ಆಟಕ್ಕೆ ಅನುಭವಿ ಫಿಂಚ್ ಆಟವೇ ನೀರಸವೆನಿಸಿತ್ತು. ದೇವದತ್ ಪಡಿಕ್ಕಲ್ ಮುಂದೆ ಫಿಂಚ್ ಅಕ್ಷರಶಃ ಮಂಕಾಗಿದ್ದರು. 42 ಎಸೆತ ಎದುರಿಸಿದ ಪಡಿಕ್ಕಲ್ ಭರ್ಜರಿ 56 ರನ್ ಗಳಿಸಿ ಔಟಾದರು.

ಪಡಿಕ್ಕಲ್ ಪದಾರ್ಪಣೆ ಹಾಗೂ ಅರ್ಧ ಶತಕ

ಪಡಿಕ್ಕಲ್ ಪದಾರ್ಪಣೆ ಹಾಗೂ ಅರ್ಧ ಶತಕ

ದೇವದತ್ ಪಡಿಕ್ಕಲ್ ಪದಾರ್ಪಣಾ ಪಂದ್ಯದಲ್ಲಿ ಅರ್ಧ ಶತಕವನ್ನು ಬಾರಿಸುವ ಸಂಪ್ರದಾಯವನ್ನೇ ಹೊಂದಿದ್ದಾರೆ. 2018ರಲ್ಲಿ ಮಹಾರಾಷ್ಟ್ರದ ವಿರುದ್ಧ ರಣಜಿ ಪಂದ್ಯದ ಪದಾರ್ಪಣಾ ಪಂದ್ಯವನ್ನಾಡಿದ ಪಡಿಕ್ಕಲ್ ಎರಡನೇ ಇನ್ನಿಂಗ್ಸ್‌ನಲ್ಲಿ 77 ರನ್‌ಗಳಿಸಿದ್ದರು. ಜಾರ್ಖಂಡ್ ತಂಡದ ವಿರುದ್ಧ 2019ರಲ್ಲಿ ವಿಜಯ್ ಹಝಾರೆ ಟೂರ್ನಿಯಲ್ಲಿ ಲಿಸ್ಟ್ 'ಎ'ಗೆ ಪದಾರ್ಪಣೆ ಮಾಡಿದ ದೇವದತ್ ಪಡಿಕ್ಕಲ್ 58 ರನ್ ಬಾರಿಸಿದ್ದರು. ಉತ್ತರಾಖಂಡ್ ವಿರುದ್ಧ 2019ರಲ್ಲಿ ಟಿ20 ಪಂದ್ಯಕ್ಕೆ ಪದಾರ್ಪಣೆ ಮಾಡಿ ಅಲ್ಲಿ 53 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈಗ ಐಪಿಎಲ್‌ನಲ್ಲೂ ಅರ್ಧ ಶತಕದ ಮೂಲಕವೇ ಪದಾರ್ಪಣೆಯನ್ನು ಮಾಡಿದ್ದಾರೆ.

ಅರ್ಧ ಶತಕ ಗಳಿಸಿದ 3ನೇ ಕಿರಿಯ ಆಟಗಾರ

ಅರ್ಧ ಶತಕ ಗಳಿಸಿದ 3ನೇ ಕಿರಿಯ ಆಟಗಾರ

20 ವರ್ಷ 76 ದಿನ ವಯಸ್ಸಿನ ಪಡಿಕ್ಕಲ್ ಐಪಿಎಲ್‌ನಲ್ಲಿ ಅರ್ಧ ಶತಕವನ್ನು ಗಳಿಸಿದ 3ನೇ ಕಿರಿಯ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಶ್ರೀವತ್ಸ ಗೋದ್ವಾಮಿ(52ರನ್) ಹಾಗೂ ಮನೀಷ್ ಪಾಂಡೆ (119ರನ್) ಗಳಿಸಿ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದಾರೆ. ಈ ಇಬ್ಬರೂ ಹದಿಹರೆಯಲ್ಲೇ ಈ ಸಾಧನೆಯನ್ನು ಮಾಡಿದ್ದರು.

Story first published: Tuesday, September 22, 2020, 10:05 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X