ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ವಿರಾಟ್ ಕೊಹ್ಲಿಗೆ ಬೌಲಿಂಗ್ : ರಶೀದ್ ಖಾನ್ 'ಹೆಮ್ಮೆ'ಯ ಹೇಳಿಕೆ

Ipl 2020, Srh Vs Rcb: Srh Spinner Rashid Khan Reaction Bowling To Virat Kohli Is Proud Moment

ಐಪಿಎಲ್‌ನ ಮೂರನೇ ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾದಲಿದೆ. ಈ ಮುಖಾಮುಖಿಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ರಶೀದ್ ಖಾನ್ ಎದುರಾಳಿ ತಂಡದ ನಾಯಕನ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

ರಶೀದ್ ಖಾನ್ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಮಿಂಚುವ ವಿಶ್ವಾಸದಲ್ಲಿದ್ದಾರೆ. ಆದರೆ ತಮ್ಮ ಮೊದಲ ಪಂದ್ಯದಲ್ಲಿ ವಿಶ್ವ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು ಹೆಮ್ಮೆಯ ಸಂಗತಿ ಎಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಚೆನ್ನೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನದ ಸ್ಟಾರ್ ಕ್ರಿಕೆಟರ್ ಅಲಭ್ಯ!ಚೆನ್ನೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನದ ಸ್ಟಾರ್ ಕ್ರಿಕೆಟರ್ ಅಲಭ್ಯ!

ಸೆಪ್ಟೆಂಬರ್ 21ರಂದು ನಡೆಯಲಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಮ್ಮ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಅದಕ್ಕೂ ಮುನ್ನ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ರಶೀದ್ ಖಾನ್ ಪಾಲ್ಗೊಂಡು ಪ್ರತಿಕ್ರಿಯೆಯನ್ನು ನೀಡಿದ್ದಾರೆ.

"ವಿರಾಟ್ ಎಲ್ಲಾ ಮೂರು ಸ್ವರೂಪಗಳಲ್ಲಿ ವಿಶ್ವ ದರ್ಜೆಯ ಆಟಗಾರ, ಅವರಂತಹ ಯಾವುದೇ ಆಟಗಾರ ನನ್ನ ವಿರುದ್ಧ ಬ್ಯಾಟಿಂಗ್ ಮಾಡುವುದನ್ನು ನಾನು ಇಷ್ಟಪಡುತ್ತೇನೆ. ಅದು ಅತ್ಯುತ್ತಮ ಸ್ಪರ್ಧೆಯಾಗಿರುತ್ತದೆ. ಬೌಲಿರ್ ಆಗಿ ಅದನ್ನು ಬಯಸುತ್ತೇನೆ. ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದನ್ನು ನಾನು ಆನಂದಿಸುತ್ತೇನೆ. ನನಗೆ ಅದು ಹೆಮ್ಮೆಯ ಕ್ಷಣವಾಗಿದೆ. ಬೌಲರ್ ಆಗಿ ನಾನು ಅತ್ಯುತ್ತಮ ಎಸೆತಗಳನ್ನು ಬೌಲ್ ಮಾಡಲು ಪ್ರಯತ್ನಿಸುತ್ತೇನೆ" ಎಂದು ರಶೀದ್ ಖಾನ್ ಹೇಳಿಕೆಯನ್ನು ನೀಡಿದ್ದಾರೆ.

ಗೆಲುವಿನ ಸಂತಸದ ಜೊತೆಗೆ ಕಹಿ ಸುದ್ದಿ ಕೊಟ್ಟ ಚೆನ್ನೈ ಕೋಚ್!ಗೆಲುವಿನ ಸಂತಸದ ಜೊತೆಗೆ ಕಹಿ ಸುದ್ದಿ ಕೊಟ್ಟ ಚೆನ್ನೈ ಕೋಚ್!

ಇನ್ನು ಇದೇ ಸಂದರ್ಭದಲ್ಲಿ ರಶೀದ್ ಖಾನ್ ತಾನು ಯಾವುದೇ ಹೊಸ ಎಸೆತಗಳನ್ನು ಎಸೆಯುವುದಿಲ್ಲ ಎಂದು ಹೇಳಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ನಾನು ಸ್ಥಿರವಾಗಿ ಪ್ರದರ್ಶನ ನೀಡುವುದು ನನ್ನ ಆದ್ಯತೆಯಾಗಿದೆ. ನನ್ನ ಪ್ರತಿ ಎಸೆತಗಳಿಗೂ ನಾನು ಸಾಕಷ್ಟು ಪರಿಶ್ರಮ ಪಡುತ್ತೇನೆ. ಹಿಂದಿನ ವರ್ಷಗಳಿಕೆ ಹೋಲಿಸಿದರೆ ನಾನು ಇನ್ನೂ ಜಾಣತನದಿಂದ ಪ್ರದರ್ಶನ ನೀಡಬೇಕು ಎಂದು ರಶೀದ್ ಖಾನ್ ಪ್ರತಿಕ್ರಿಯಿಸಿದ್ದಾರೆ.

Story first published: Monday, September 21, 2020, 11:19 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X