ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸನ್‌ರೈಸರ್ಸ್ ವಿರುದ್ದದ ಗೆಲುವು ಕೊಹ್ಲಿಗೆ ತುಂಬಾ ವಿಶೇಷ ಯಾಕೆ?

 Ipl 2020, Srh Vs Rcb: Virat Kohli Joined Three Captains In Elite Ipl List

ಐಪಿಎಲ್‌ನ ಮೊದಲ ಅಗ್ನಿಪರೀಕ್ಷೆಯನ್ನು ಕೊಹ್ಲಿ ಪಡೆ ಯಶಸ್ವಿಯಾಗಿ ಎದುರಿಸಿ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ ಟೂರ್ನಿಯ ಕಹಿ ನೆನಪನ್ನು ಮರೆತು ಮುನ್ನುಗ್ಗಲು ಆರ್‌ಸಿಬಿ ತಂಡ ಸಿದ್ಧವಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವು ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಸಾಕಷ್ಟು ಉತ್ಸಾಹವನ್ನು ತುಂಬಿಸಿದೆ. ಆದರೆ ನಾಯಕ ವಿರಾಟ್ ಕೊಹ್ಲಿಗೆ ಈ ಗೆಲುವು ಮತ್ತಷ್ಟು ವಿಶೇಷವಾಗಿದೆ.

ಹೌದು, ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಗೆಲುವಿನ ಮೂಲಕ ಮಹತ್ವದ ಮೈಲಿಗಲ್ಲೊಂದನ್ನು ನೆಟ್ಟಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ವಿರಾಟ್ ಕೊಹ್ಲಿ 50ನೇ ಗೆಲುವನ್ನು ಆಚರಿಸಿಕೊಂಡಿದ್ದಾರೆ. ಈ ಮೂಲಕ ವಿಶೇಷ ಸಾಧಕರ ಪಟ್ಟಿಗೆ ಕೊಹ್ಲಿ ಸೇರ್ಪಡೆಗೊಂಡಿದ್ದಾರೆ.

ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್

50+ ಗೆಲುವುಗಳ ದಾಖಲೆ

50+ ಗೆಲುವುಗಳ ದಾಖಲೆ

ಐಪಿಎಲ್‌ನಲ್ಲಿ ಚೆನ್ನೈ ನಾಯಕ ಧೋನಿ, ಕೆಕೆಆರ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಹಾಗೂ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಮಾತ್ರವೇ ನಾಯಕರಾಗಿ 50+ ಗೆಲುವುಗಳ ದಾಖಲೆಯನ್ನು ಹೊಂದಿದ್ದರು. ಈ ಪಟ್ಟಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೂಡ ಸೇರ್ಪಡೆಗೊಂಡಿದ್ದಾರೆ.

ಮೊದಲ ಸ್ಥಾನದಲ್ಲಿ ಧೋನಿ

ಮೊದಲ ಸ್ಥಾನದಲ್ಲಿ ಧೋನಿ

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ 105 ಗೆಲುವುಗಳೊಂದಿಗೆ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಗೌತಮ್ ಗಂಭೀರ್ 71 ಗೆಲುವುಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. 60 ಪಂದ್ಯಗಳನ್ನು ನಾಯಕನಾಗಿ ಗೆದ್ದಿರುವ ಮುಂಬೈ ನಾಯಕ ರೋಹಿತ್ ಶರ್ಮಾ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಿಂಗ್ಸ್ ವಿರುದ್ಧ ಮುಂದಿನ ಪಂದ್ಯ

ಕಿಂಗ್ಸ್ ವಿರುದ್ಧ ಮುಂದಿನ ಪಂದ್ಯ

ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವವವನ್ನು 2011ರಿಂದ ವಹಿಸಿಕೊಂಡಿದ್ದಾರೆ. ಈವರೆಗೆ 101 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧ ಗುರುವಾರ ಆಡಲಿದೆ.

ಮೊದಲ ಪಂದ್ಯದ ಪ್ರದರ್ಶನ

ಮೊದಲ ಪಂದ್ಯದ ಪ್ರದರ್ಶನ

ಬ್ಯಾಟಿಂಗ್‌ನಲ್ಲಿ ಪಡಿಕ್ಕಲ್ ಹಾಗೂ ಡಿವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಯುಜುವೇಂದ್ರ ಚಾಹಲ್ ಅದ್ಭುತ ದಾಳಿಯಿಂದ ಮೊದಲ ಪಂದ್ಯವನ್ನು ಆರ್‌ಸಿಬಿ ಅದ್ಭುತವಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ

Story first published: Tuesday, September 22, 2020, 17:37 [IST]
Other articles published on Sep 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X