ಐಪಿಎಲ್ 2020: ಧೋನಿ, ಗಂಭೀರ್, ಶರ್ಮಾ ಸಾಧನೆ ಪಟ್ಟಿಗೆ ಸೇರಲು ವಿರಾಟ್ ಕೊಹ್ಲಿ ಸಜ್ಜು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಮವಾರ ತನ್ನ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲು ಕೊಹ್ಲಿ ಬಳಗ ಉತ್ಸಾಹದಿಂದ ಕಾಯುತ್ತಿದೆ. ಅಭಿಮಾನಿಗಳು ಕೂಡ ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದ್ದಾರೆ.

ರಾಯಲ್ ವಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದ ಗೆಲುವಿನ ಮೂಲಕ ವಿಶೇಷ ಸಾಧನೆಯನ್ನು ಮಾಡಲಿದ್ದಾರೆ. ನಾಯಕನಾಗಿ ಎಂಎಸ್ ಧೋನಿ, ಮಾಜಿ ಆಟಗಾರ ಗೌತಮ್ ಗಂಭೀರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿಕೊಂಡಿರುವ ವಿಶೇಷ ಪಟ್ಟಿಗೆ ವಿರಾಟ್ ಕೊಹ್ಲಿ ಕೂಡ ಸೇರ್ಪಡೆಗೊಳ್ಳಲಿದ್ದಾರೆ.

ಆರ್‌ಸಿಬಿಯಿಂದ ಪದೇ ಪದೆ ಕನ್ನಡಿಗರಿಗೆ ಅನ್ಯಾಯ: ಈ ಬಾರಿಯಾದರೂ ಸಿಗುತ್ತಾ ನ್ಯಾಯ?

ಹೌದು ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ನಾಯಕಾಗಿ ಈವರೆಗೆ 49 ಗೆಲುವುಗಳನ್ನು ದಾಖಲಿಸಿದ್ದು. ಇಂದಿನ ಪಂದ್ಯದಲ್ಲಿ ಗೆದ್ದರೆ ಈ ಗೆಲುವಿನ ಸಂಖ್ಯೆ 50ಕ್ಕೇರಲಿದೆ. ಈ ಸಾಧನೆಯನ್ನು ಈವರೆಗೆ ಕೇವಲ 3 ನಾಯಕರಿಂದಷ್ಟೇ ಮಾಡಲು ಸಾಧ್ಯವಾಗಿದೆ. ವಿರಾಟ್ ಕೊಹ್ಲಿ ಈ ಸಾಧನೆಯನ್ನು ಮಾಡಿದರೆ ನಾಲ್ಕನೇ ಆಟಗಾರನಾಗಿ ವಿಶೇಷ ಪಟ್ಟಿಯನ್ನು ಸೇರಿಕೊಳ್ಳಲಿದ್ದಾರೆ.

ಕಳೆದ ಬಾರಿ ಆರ್‌ಸಿಬಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿತ್ತು. ಅಂಕಪಟ್ಟಿಯಲ್ಲಿ ಕೊಹ್ಲಿ ಪಡೆ ಕೊನೆಯಲ್ಲಿ ಸ್ಥಾನವನ್ನು ಪಡೆದುಕೊಂಡಿತ್ತು. ಹಾಗಾಗಿ ಈ ಬಾರಿಯ ಪ್ರತಿ ಪಂದ್ಯವನ್ನು ಆರ್‌ಸಿಬಿ ಮುಖ್ಯವೆಂದು ಪರಿಗಣಿಸುತ್ತಿದ್ದು ಮೊದಲ ಪಂದ್ಯದ ಗೆಲುವಿಗಾಗಿ ಹಾತೊರೆಯುತ್ತಿದ್ದಾರೆ.

ಅಂಪೈರ್ ಪ್ರಮಾದ: ಜಾವಗಲ್ ಶ್ರೀನಾಥ್ ಬಳಿ ದೂರು ನೀಡಿದ ಪಂಜಾಬ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ನಾಯಕನಾಗಿ 100 ಗೆಲುವು ದಾಖಲಿಸಿದ್ದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ 71 ಗೆಲುವು ದಾಖಲಿಸಿದ್ದಾರೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಸರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು 60 ಗೆಲುವುಗಳನ್ನು ನಾಯಕನಾಗಿ ಕಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, September 21, 2020, 15:22 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X