ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಕಡ್ಡಾಯ ಕೋವಿಡ್ ಪರೀಕ್ಷೆಯನ್ನು ಪೂರ್ಣಗೊಳಿಸಿದ ಸ್ಟೀವ್ ಸ್ಮಿತ್, ಆರ್ಚರ್, ಬಟ್ಲರ್

Ipl 2020: Steve Smith, Archer, Buttler Clear Compulsory Covid-19 Tests

ಐಪಿಎಲ್ 2020 ಆವೃತ್ತಿಯ ಮೊದಲ ಪಂದ್ಯ ಶನಿವಾರ ನಡೆದಿದ್ದು ಭರ್ಜರಿ ಯಶಸ್ಸು ಕಂಡಿದೆ. ಭಾನುವಾರ ಮತ್ತೊಂದು ಪಂದ್ಯಕ್ಕೆ ಆಟಗಾರರು ಹಾಗೂ ಅಭಿಮಾನಿಗಳು ತಯಾರಾಗುತ್ತಿದ್ದಾರೆ. ಈ ಪಂದ್ಯದಲ್ಲಿ ಕಣಕ್ಕಿಳಿಯಲು ಎಲ್ಲಾ ಆಟಗಾರರು ಕೂಡ ಭರ್ಜರಿಯಾಗಿ ಸಿದ್ಧವಾಗುತ್ತಿದ್ದು ಕೆಲ ಕಡ್ಡಾಯ ನಿಯಮಗಳನ್ನು ಪೂರೈಸಿದ್ದಾರೆ.

ಐಪಿಎಲ್‌ನಲ್ಲಿ ಕೊನೆಯ ಹಂತದಲ್ಲಿ ದುಬೈಗೆ ತಲುಪಿದ್ದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು. ಏಕದಿನ ಸರಣಿಯಲ್ಲಿ ಪಾಲ್ಗೊಂಡಿದ್ದ ಈ ಎರಡು ದೇಶಗಳ ಆಟಗಾರರು ಐಪಿಎಲ್ ಆರಂಭಕ್ಕೆ ಎರಡು ದಿನಗಳಿರುವಾಗ ಯುಎಇಗೆ ಚಾರ್ಟೆಡ್ ವಿಮಾನದ ಮೂಲಕ ಬಂದಿಳಿದಿದ್ದರು.

ಸಿಎಸ್‌ಕೆ ನಾಯಕನಾಗಿ 100 ಗೆಲುವಿನ ದಾಖಲೆ ಬರೆದ ಎಂಎಸ್ ಧೋನಿಸಿಎಸ್‌ಕೆ ನಾಯಕನಾಗಿ 100 ಗೆಲುವಿನ ದಾಖಲೆ ಬರೆದ ಎಂಎಸ್ ಧೋನಿ

ರಾಜಸ್ಥಾನ ರಾಯಲ್ಸ್ ತನ್ನ ಮೊದಲ ಪಂದ್ಯವನ್ನು ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕು ಮುನ್ನ ಶನಿವಾರ ಕೊವಿಡ್ 19 ಪರೀಕ್ಷೆಗೆ ಆಟಗಾರರು ಒಳಗಾಗಿದ್ದಾರೆ. ಸ್ಟೀವ್ ಸ್ಮಿತ್, ಜೋಫ್ರಾ ಆರ್ಚರ್ ಹಾಗೂ ಜೋಸ್ ಬಟ್ಲರ್ ಈ ಪರೀಕ್ಷೆಯಲ್ಲಿ ನೆಗೆಟಿವ್ ವರದಿಯನ್ನು ಪಡೆದುಕೊಂಡಿದ್ದು ಮೊದಲ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕನಾಗಿರುವ ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆಸಿದ ಅಭ್ಯಾಸದ ವೇಳೆ ತಲೆಗೆ ಏಟು ಮಾಡಿಕೊಂಡಿದ್ದರು. ಹೀಗಾಗಿ ಏಕದಿನ ಸರಣಿಯ ಎಲ್ಲಾ ಪಂದ್ಯಗಳಿಂದಲೂ ಅವರು ಹೊರಗುಳಿದಿದ್ದರು. ಐಪಿಎಲ್‌ನಲ್ಲಿ ಮೊದಲ ಪಂದ್ಯದಲ್ಲಿ ಅವರು ಪಾಲ್ಗೊಳ್ಳಬೇಕಾದರೆ ಐಪಿಎಲ್ ಫ್ರಾಂಚೈಸಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ನಡೆಸುವ ವೈದ್ಯಕೀಯ ಪರೀಕ್ಷೆಯಲ್ಲಿ ಅನುಮತಿಯನ್ನು ಪಡೆದುಕೊಳ್ಳಬೇಕಿದೆ.

ಸಕತ್ ''ಸೌಂಡ್'' ಮಾಡುತ್ತಿದೆ ಐಪಿಎಲ್ 13 ಮೊದಲ ಪಂದ್ಯ!ಸಕತ್ ''ಸೌಂಡ್'' ಮಾಡುತ್ತಿದೆ ಐಪಿಎಲ್ 13 ಮೊದಲ ಪಂದ್ಯ!

ಮೊದಲ ಪಂದ್ಯವನ್ನು ಸ್ಟೀವ್ ಸ್ಮಿತ್ ಆಡಲು ಸಾಧ್ಯವಾಗದಿದ್ದರೆ ರಾಜಸ್ಥಾನ ರಾಯಲ್ಸ್ ತಂಡದ ಹಿರಿಯ ಆಟಗಾರನಾಗಿರುವ ಜೋಸ್ ಬಟ್ಲರ್ ಮುನ್ನಡೆಸುವ ಸಾಧ್ಯತೆಯಿದೆ. ಈವರೆಗೂ ಸ್ಟೀವ್ ಸ್ಮಿತ್ ಮೊದಲ ಪಂದ್ಯಕ್ಕೆ ಲಭ್ಯರಾಗುವ ವಿಶ್ವಾಸವನ್ನು ವ್ಯಕ್ತಪಡಿಸಿಸುತ್ತಿದೆ ರಾಜಸ್ಥಾನ ರಾಯಲ್ಸ್ ತಂಡ.

Story first published: Sunday, September 20, 2020, 8:34 [IST]
Other articles published on Sep 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X