ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜುಗೆ ಸಾಥ್ ನೀಡಲು ಪವರ್ ಹಿಟ್ಟರ್ ಸಿದ್ಧ: 'ಡಬಲ್ ಬ್ಯಾರೆಲ್' ಮೊರೆತದ ಎಚ್ಚರಿಕೆ ನೀಡಿದ ರಾಜಸ್ಥಾನ್ ನಾಯಕ

ipl 2020: Steve Smith On Jos Buttler And Sanju Samson Pair

ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಸ್ಪೋಟಕ ಪ್ರದರ್ಶನವನ್ನು ನೀಡಿದರು. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 37 ಎಸೆತಗಳನ್ನು ಎದುರಿಸಿ 74 ರನ್ ಚಚ್ಚಿದರು. ಈ ಮೂಲಕ ಚೆನ್ನೈ ವಿರುದ್ಧ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿದ್ದರು ಸಂಜು. ಈಗ ಆರ್‌ಆರ್‌ ನಾಯಕ ಸ್ಟೀವ್ ಸ್ಮಿತ್ ಎದುರಾಳಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸುವಂತಾ ಮತ್ತೊಂದು ಸುಳಿವು ನೀಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿರುವ ಸ್ಟೀವ್ ಸ್ಮಿತ್ ಕೂಡ ತಮ್ಮ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅರ್ಧ ಶತಕವನ್ನು ಸಿಡಿಸಿ ನಾಯಕನ ಆಟವನ್ನು ಪ್ರದರ್ಶಿಸಿದ್ದರು. ವಿದೇಶಿ ಆಟಗಾರರನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಆರ್‌ಆರ್‌ ತಂಡದಲ್ಲಿ ಮತ್ತೋರ್ವ ಆಟಗಾರ ಆಡಲು ಸಜ್ಜಾಗಿರುವ ವಿಚಾರವನ್ನು ಸ್ಮಿತ್ ಹಂಚಿಕೊಂಡಿದ್ದಾರೆ.

ಇದು ರಾಜಸ್ಥಾನ್ ರಾಯಲ್ಸ್ ತಂಡದ ಸುದ್ದಿಯಾಗಿ ಮಾತ್ರವೇ ಮಾಹಿತಿಯನ್ನು ಸ್ಮಿತ್ ನೀಡಿಲ್ಲ. ಎದುರಾಳಿ ತಂಡಗಳಿಗೆ ಎಚ್ಚರಿಕೆಯ ರೀತಿಯಲ್ಲಿ ಈ ಸಂದೇಶವನ್ನು ರವಾನಿಸಿದ್ದಾರೆ ಸ್ಟೀವ್ ಸ್ಮಿತ್. ಹಾಗಾದರೆ ಆ ಆಟಗಾರ ಯಾರು? ಸಂಪೂರ್ಣ ಮಾಹಿತಿ ಮುಂದಿದೆ ಓದಿ

ಮುಂದಿನ ಪಂದ್ಯದಲ್ಲಿ 'ಡಬಲ್ ಬ್ಯಾರೆಲ್' ಮೊರೆತ

ಮುಂದಿನ ಪಂದ್ಯದಲ್ಲಿ 'ಡಬಲ್ ಬ್ಯಾರೆಲ್' ಮೊರೆತ

ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸಿಡಿಸಿದ ಸ್ಪೋಟಕ ಆಟದ ಗುಂಗಿನಲ್ಲೇ ಇದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಮುಂದಿನ ಪಂದ್ಯದಲ್ಲಿ ಈ ಸ್ಪೋಟಕ ಆಟ ಹೆಚ್ಚಾಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ. ಕ್ವಾರಂಟೈನ್ ಮುಗಿಸಿರುವ ಆಟಗಾರ ಮುಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ ಸಾಥ್ ನೀಡಲಿದ್ದು ತಂಡದಲ್ಲಿ ಡಬಲ್ ಬ್ಯಾರೆಲ್ ಮೊರೆತ ಕೇಳಲಿದೆ ಎನ್ನುವ ಮೂಲಕ ಬಟ್ಲರ್ ಕಣಕ್ಕಿಳಿಯುವ ಬಗ್ಗೆ ಮಾಹಿತಿಯನ್ನು ಸೂಚ್ಯವಾಗಿ ರವಾನಿಸಿದ್ದಾರೆ ಸ್ಟೀವ್ ಸ್ಮಿತ್.

ಸ್ಮಿತ್ ಹೇಳಿದ ಆಟಗಾರ ಯಾರು?

ಸ್ಮಿತ್ ಹೇಳಿದ ಆಟಗಾರ ಯಾರು?

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಹೇಳಿದ ಆ ಆಟಗಾರ ಬೇರೆ ಯಾರೂ ಅಲ್ಲ. ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡದ ಆಟಗಾರರ ಜೊತೆಗೆ ಚಾರ್ಟೆಡ್ ವಿಮಾನದಲ್ಲಿ ಬಾರದ ಬಟ್ಲರ್ ಕುಟುಂಬದ ಜೊತೆಗೆ ಯುಎಇಗೆ ಹಾರಿದ್ದರು. ಹೀಗಾಗಿ ಇತರ ಆಸಿಸ್ ಇಂಗೀಷ್ ಆಟಗಾರರಿಗಿಂತ ಹೆಚ್ಚಿನ ಕಾಲದ ಕ್ವಾರಂಟೈನ್‌ಗೆ ಒಳಗಾಗಿದ್ದರು ಬಟ್ಲರ್. ಇದೀಗ ಈ ಅವಧಿಯನ್ನು ಪೂರೈಸಿದ್ದು ತಂಡವನ್ನು ಕೂಡಿಕೊಂಡಿದ್ದಾರೆ.

ಆರ್‌ಆರ್ ಪರ ಉತ್ತಮ ಪ್ರದರ್ಶನ

ಆರ್‌ಆರ್ ಪರ ಉತ್ತಮ ಪ್ರದರ್ಶನ

ಜೋಸ್ ಬಟ್ಲರ್ ಬಗ್ಗೆ ನಾಯಕ ಸ್ಟೀವ್ ಸ್ಮಿತ್ ಇಷ್ಟು ಆತ್ಮವಿಶ್ವಾಸದಿಂದ ಹೇಳಿಕೆಯನ್ನು ನೀಡಲು ಕಾರಣ ಬಟ್ಲರ್ ಹಿಂದಿನ ಆವೃತ್ತಿಯಲ್ಲಿ ನೀಡಿದ ಪ್ರದರ್ಶನ. 2018ರಿಂದ ಜೋಸ್ ಬಟ್ಲರ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾರೆ. 2018ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಬಟ್ಲರ್ ಅತಿ ಹೆಚ್ಚಿನ ಸ್ಕೋರರ್ ಆಗಿದ್ದರು. ಕಳೆದ ಬಾರಿಯೂ 8 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು 38.87 ಸರಾಸರಿಯಲ್ಲಿ 151ರ ಸ್ಟ್ರೈಕ್‌ರೇಟ್‌ನಲ್ಲಿ 311 ರನ್ ಸಿಡಿಸಿದ್ದರು.

ಸ್ಪಿನ್ ಬೌಲಿಂಗ್ ಎದುರಿಸಲು ಸಮರ್ಥ ಬಟ್ಲರ್

ಸ್ಪಿನ್ ಬೌಲಿಂಗ್ ಎದುರಿಸಲು ಸಮರ್ಥ ಬಟ್ಲರ್

ಯುಎಇ ಅಂಗಳದಲ್ಲಿ ನಿರೀಕ್ಷೆಯಂತೆಯೇ ಸ್ಪಿನ್ ಬೌಲಿಂಗ್ ಹೆಚ್ಚಿನ ಯಶಸ್ಸು ಪಡೆಯುತ್ತಿದೆ. ಸ್ಪಿನ್ ಬೌಲರ್‌ಅನ್ನು ಜೋಸ್ ಬಟ್ಲರ್ ಸುಲಲಿತವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸ್ಪಿನ್ ಬೌಲಿಂಗ್‌ನಲ್ಲಿ 120ಕ್ಕೂ ಅಧಿಕ ಸ್ಟ್ರೈಕ್‌ರೇಟ್ ಹೊಂದಿದ್ದಾರೆ ಬಟ್ಲರ್. ಇದು ತಂಡಕ್ಕೆ ದೊಡ್ಡ ಪ್ರಮಾಣದಲ್ಲಿ ನೆರವಾಗುವ ನಿರೀಕ್ಷೆಯಲ್ಲಿ ಇಡೀ ತಂಡವಿದೆ.

Story first published: Tuesday, October 6, 2020, 15:49 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X