ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಧೋನಿ ನೇತೃತ್ವದ ತಂಡಕ್ಕೆ ಕಠಿಣವೆನಿಸಬಲ್ಲ ಸಂಗತಿ ಹೇಳಿದ ಗವಾಸ್ಕರ್!

Ipl 2020: Sunil Gavaskar On Csk Title Chances Of This Season

ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚಿನ ಸುದ್ದಿ ಮಾಡಿದ ತಂಡ. ಸುರೇಶ್ ರೈನಾ ಹಠಾತ್ ನಿರ್ಗಮನ, ಕೊರೊನಾ ವೈರಸ್ ಕಾಟದಿಂದಾಗಿ ಬೇಡದ ಕಾರಣಕ್ಕಾಗಿಯೇ ಹೆಚ್ಚು ಸುದ್ದಿಯಾಗಿತ್ತು ಸಿಎಸ್‌ಕೆ. ಈಗ ಎಲ್ಲವೂ ಸುಗಮವಾಗಿ ಸಾಗುತ್ತಿದ್ದು ಎಲ್ಲಾ ಆಟಗಾರರು ಕೂಡ ಕಠಿಣ ಅಭ್ಯಾಸವನ್ನು ನಡೆಸುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಯಾವ ರೀತಿ ಪ್ರದರ್ಶನವನ್ನು ನೀಡಬಹುದು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿ ವ್ಯಕ್ತಪಡಿಸಿದ್ದಾರೆ. ಅನುಭವಿ ಹಾಗೂ ಯುವ ಆಟಗಾರರ ಸರಿಯಾದ ಸಮ್ಮಿಶ್ರಣ ಇಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ ಸುನಿಲ್ ಗವಾಸ್ಕರ್.

ಐಪಿಎಲ್‌ನಲ್ಲಿ ಕೊಹ್ಲಿ ಹಿನ್ನಡೆಗೆ 2 ಮುಖ್ಯ ಕಾರಣ ಹೇಳಿದ ಆರ್‌ಸಿಬಿ ಮಾಜಿ ಕೋಚ್ಐಪಿಎಲ್‌ನಲ್ಲಿ ಕೊಹ್ಲಿ ಹಿನ್ನಡೆಗೆ 2 ಮುಖ್ಯ ಕಾರಣ ಹೇಳಿದ ಆರ್‌ಸಿಬಿ ಮಾಜಿ ಕೋಚ್

'ಡ್ಯಾಡ್ಸ್ ಆರ್ಮಿ' ಟ್ಯಾಗ್ ಮುಂದುವರಿಸಿದ ಸಿಎಸ್‌ಕೆ

'ಡ್ಯಾಡ್ಸ್ ಆರ್ಮಿ' ಟ್ಯಾಗ್ ಮುಂದುವರಿಸಿದ ಸಿಎಸ್‌ಕೆ

ಕಳೆದ ವರ್ಷ ನಡೆದ ಬಿಟ್ಟಿಂಗ್‌ನಲ್ಲಿ ಸಿಎಸ್‌ಕೆ ತಂಡ ಬಹುತೇಕ ಆಟಗಾರರನ್ನು ಉಳಿಸಿಕೊಂಡು ಕೇವಲ 4 ಹೊಸಲ ಆಟಗಾರರನ್ನಷ್ಟೇ ಸೇರ್ಪಡೆಗೊಳಿಸಿಕೊಂಡು ಈ ಬಾರಿಯ ಆವೃತ್ತಿಗೆ ಕಣಕ್ಕಿಳಿಯುತ್ತಿದೆ. ಹೀಗಾಗಿ ಈ ಬಾರಿಯ ಟೂರ್ನಿಯಲ್ಲೂ ಸಿಎಸ್‌ಕೆ ತಂಡದ 'ಡ್ಯಾಡ್ಸ್ ಆರ್ಮಿ' ಟ್ಯಾಗ್ ಉಳಿದುಕೊಂಡಂತಾಗಿದೆ. ಅನುಭವ ಈ ಮಾದರಿಗೆ ಮುಖ್ಯ ಎಂದು ಸಾಧಿಸಿದ ನಂತರ ಆ ತಂತ್ರವನ್ನೇ ಮುಂದುವರಿಸಲು ಸಿಎಸ್‌ಕೆ ತೀರ್ಮಾನಿಸಿದೆ.

ಯುವ ಆಟಗಾರರ ಕೊರತೆ

ಯುವ ಆಟಗಾರರ ಕೊರತೆ

ಸಿಎಸ್‌ಕೆ ತಂಡದ ಅನುಭವಿ ಆಟಗಾರರು ತಂಡದ ಬಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಆದರೆ ಅದರ ಜೊತೆಗೆ ತಂಡದಲ್ಲಿ ಯುವ ಆಟಗಾರರ ಕೊರತೆ ಈ ಬಾರಿಯ ಟೂರ್ನಿಯಲ್ಲಿ ಚಾಂಪಿಯನ್ ಎನಿಸಲು ಕಠಿಣವಾಗಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಷ್ಟಕರ ಸನ್ನಿವೇಶ ಎದುರಿಸಬೇಕಾದಿತು

ಕಷ್ಟಕರ ಸನ್ನಿವೇಶ ಎದುರಿಸಬೇಕಾದಿತು

'ಯಾವುದೇ ಉತ್ತಮ ಐಪಿಎಲ್ ತಂಡ ಅನುಭವಿ ಹಾಗೂ ಯುವ ಆಟಗಾರರ ಸೂಕ್ತವಾದ ಸಮ್ಮಿಶ್ರಣದಂತಿರಬೇಕು. ಸಿಎಸ್‌ಕೆ ತಂಡವನ್ನು ಉನ್ನತ ಮಟ್ಟಕ್ಕೇರಿಸುವಂತಾ ಯುವಕರನ್ನು ಹೊಂದಿದೆಯೇ? ಈ ಪ್ರಶ್ನೆ ಸಿಎಸ್‌ಕೆಗೆ ಹೆಚ್ಚು ಕಾಡಲಿದೆ. ಈ ಕಾರಣದಿಂದಾಗಿ ಸಿಎಸ್‌ಕೆ ಈ ಬಾರಿ ಸ್ವಲ್ಪ ಕಷ್ಟಕರ ಸನ್ನಿವೇಶವನ್ನು ಎದುರಿಸಬೇಕಾಗಬಹುದು ಎಂಬುದು ನನ್ನ ಭಾವನೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ರೈನಾ-ಭಜ್ಜಿ ಅಲಭ್ಯತೆ ಕಾಡಲಿದೆ

ರೈನಾ-ಭಜ್ಜಿ ಅಲಭ್ಯತೆ ಕಾಡಲಿದೆ

ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅವರ ಅಲಭ್ಯತೆಯ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಈ ಇಬ್ಬರು ಆಟಗಾರರ ಅಲಭ್ಯತೆ ತಂಡಕ್ಕೆ ಸಹಜವಾಗಿಯೇ ಕಾಡಲಿದೆ. ಇಬ್ಬರು ಆಟಗಾರ ಸ್ಥಾನವನ್ನು ತುಂಬುವುದು ಕಷ್ಟಕರ. ಆದರೆ ಯುವಕರು ಆ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಳ್ಳಬೇಕಿದೆ ಎಂದಿದ್ದಾರೆ.

Story first published: Thursday, September 17, 2020, 15:35 [IST]
Other articles published on Sep 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X