ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಅಲ್ಲ.. ಡಿವಿಲಿಯರ್ಸ್ ಅಲ್ಲ.. ಆರ್‌ಸಿಬಿ ಮ್ಯಾಚ್ ವಿನ್ನರ್ ಹೆಸರಿಸಿದ ಸುನಿಲ್ ಗವಾಸ್ಕರ್!

Ipl 2020: Sunil Gavaskar Picks Rcbs Potential Match Winner For This Season

ಐಪಿಎಲ್‌ನ ಬಲಿಷ್ಠ ತಂಡಗಳಲ್ಲಿ ಒಂದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕರೆಸಿಕೊಂಡರೂ ಕೊಹ್ಲಿ ಪಡೆಗೆ ಈವರೆಗೂ ಒಂದೂ ಟೂರ್ನಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರ ಹಿಂದೆಂದಿಗಿಂತಲೂ ಆರ್‌ಸಿಬಿ ಹೆಚ್ಚು ಸಮತೋಲಿತವಾಗಿರುವಂತೆ ಭಾಸವಾಗುತ್ತಿದೆ. ಈ ಮಾತನ್ನು ನಾಯಕ ವಿರಾಟ್ ಕೊಹ್ಲಿಯೂ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ತಂಡ ಬ್ಯಾಟಿಂಗ್‌ನಲ್ಲಿ ಈವರೆಗೆ ಹೆಚ್ಚಾಗಿ ನೆಚ್ಚಿಕೊಂಡಿರುವುದು ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್‌ಅನ್ನು. ತಂಡದ ಗೆಲುವಿನ ಹೆಚ್ಚಿನ ಪಂದ್ಯಗಳಲ್ಲಿ ಈ ಇಬ್ಬರು ಆಟಗಾರರ ಕೊಡುಗೆಯೇ ಪ್ರಮುಖವಾಗಿರುತ್ತದೆ. ಆದರೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಈ ಬಾರಿ ಆರ್‌ಸಿಬಿ ತಂಡದ ಮ್ಯಾಚ್ ವಿನ್ನರ್ ಆತನೇ ಎಂದು ಇನ್ನೋರ್ವ ಆಟಗಾರನ ಹೆಸರನ್ನು ಹೇಳಿದ್ದಾರೆ.

ಐಪಿಎಲ್ 2020: ಯುಎಇನಲ್ಲಿನ ಕೆಟ್ಟ ಇತಿಹಾಸವನ್ನು ಅಳಿಸಿ ಹಾಕುತ್ತಾ ರೋಹಿತ್ ಪಡೆಐಪಿಎಲ್ 2020: ಯುಎಇನಲ್ಲಿನ ಕೆಟ್ಟ ಇತಿಹಾಸವನ್ನು ಅಳಿಸಿ ಹಾಕುತ್ತಾ ರೋಹಿತ್ ಪಡೆ

ಹಾಗಾದರೆ ಸುನಿಲ್ ಗವಾಸ್ಕರ್ ಹೇಳಿದ ಆ ಆಟಗಾರ ಯಾರು? ಕೊಹ್ಲಿ ಡಿವಿಲಿಯರ್ಸ್‌ಗಿಂತ ಆತ ಈ ಬಾರಿ ಯಾವ ಕಾರಣಕ್ಕೆ ಆರ್‌ಸಿಬಿಗೆ ಮುಖ್ಯವಾಗುತ್ತಾನೆ ಎಂದು ತಿಳಿಯಲು ಮುಂದೆ ಓದಿ..

ಯುಎಇ ಪಿಚ್ ಹಾಗೂ ಆರ್‌ಸಿಬಿ

ಯುಎಇ ಪಿಚ್ ಹಾಗೂ ಆರ್‌ಸಿಬಿ

ಈ ಬಾರಿ ಯುಎಇನಲ್ಲಿ ಪಂದ್ಯ ನಡೆಯುತ್ತಿರುವುದು ಎಲ್ಲಾ ಲೆಕ್ಕಾಚಾರಗಳ ಹಿಂದೆ ಬಹಳ ಮುಖ್ಯವಾಗುವ ಅಂಶವಾಗಿದೆ. ಅಲ್ಲಿನ ಪಿಚ್ ಯಾವ ರೀತಿ ವರ್ತಿಸುತ್ತದೆ ಎಂಬುದರ ಆಧಾರದಲ್ಲೇ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಯುಎಇ ಪಿಚ್‌ನಲ್ಲಿ ಆಟಗಾರರು ಯಾವ ರೀತಿಯ ಪ್ರದರ್ಶನ್ನು ನೀಡಲಿದ್ದಾರೆ ಎಂಬ ಬಗ್ಗೆ ಗವಾಸ್ಕರ್ ಮಾತನಾಡಿದ್ದಾರೆ

ಹಿಂದಿನ ಪ್ರದರ್ಶನದ ಬಗ್ಗೆ ಗವಾಸ್ಕರ್ ಮಾತು

ಹಿಂದಿನ ಪ್ರದರ್ಶನದ ಬಗ್ಗೆ ಗವಾಸ್ಕರ್ ಮಾತು

ಸುನಿಲ್ ಗವಾಸ್ಕರ್ ಆರ್‌ಸಿಬಿ ತಂಡದ ಹಿಂದಿನ ಪ್ರಯಾಸದ ಪಯಣದ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆರ್‌ಸಿಬಿಯಂತಾ ಉತ್ತಮ ಆಟಗಾರರನ್ನು ಹೊಂದಿದ್ದ ತಂಡ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರಲು ಸಾಧ್ಯವಾಗದಿರುವ ಕಾರಣ ಬಿಡಿಸಲಾಗದ ಕಗ್ಗಂಟು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಈ ಬಾರಿ ಆರ್‌ಸಿಬಿ ಪರವಾಗಿರಬಹುದು

ಈ ಬಾರಿ ಆರ್‌ಸಿಬಿ ಪರವಾಗಿರಬಹುದು

ಆರ್‌ಸಿಬಿಯಂತಾ ತಂಡ ಇನ್ನೂ ಪ್ರಶಸ್ತಿಯನ್ನು ಏಕೆ ಗೆದ್ದಿಲ್ಲ ಎಂಬುದು ಒಂದು ದೊಡ್ಡ ಒಗಟಾಗಿದೆ. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಂತಾ ಆಟಗಾರರನ್ನು ಹೊಂದಿರುವ ಯಾವುದೇ ತಂಡವು ಎಂದಿಗೂ ರನ್‌ಗಳ ಕೊರತೆಯನ್ನು ಹೊಂದಿರಬಾರದು. ಆದರೆ ಅದೇ ತಂಡದ ಸಮಸ್ಯೆಯೂ ಆಗಿರಬಹುದು. ಮಾನವರು ಸಹಜವಾಗಿಯೇ ಎಡವುವಂತೆ ಈ ಇಬ್ಬರು ವಿಫಲರಾದಾಗ ಉಳಿದ ಆಟಗಾರರು ತಂಡಕ್ಕೆ ಆಧಾರವಾಗಲು ಸಾದ್ಯವಾಗುಲ್ಲ. ಆದರೆ ಈ ಬಾರಿ ಹೊಸ ಕೋಚ್ ತಂಡದಲ್ಲಿದ್ದಾರೆ. ಈ ಬಾರಿಯ ಆವೃತ್ತಿ ಆರ್‌ಸಿಬಿ ಪಾಲಿಗೆ ಪೂರಕವಾಗಿರಬಹುದು ಎಮದು ಆಶಿಸುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ.

ನಿಧಾನಗತಿಯ ಪಿಚ್

ನಿಧಾನಗತಿಯ ಪಿಚ್

ಯುಎಇ ಪಿಚ್ ನಿಧಾನಗತಿಯನ್ನು ಹೊಂದಿರುತ್ತದೆ. ಹೀಗಾಗಿ ಚೆಂದು ಹೊಸದಾಗಿ ಹಾಗೂ ಕಠಿನವಾಗಿದ್ದಾಗ ಚಾಂಪಿಯನ್ ಬ್ಯಾಟ್ಸ್‌ಮನ್‌ಗಳಾದ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಲ್ಲಿ ಇನ್ನಿಂಗ್ಸ್ ಆರಂಭಿಸುವುದು ಉತ್ತಮ ಯೋಚನೆಯಾಗಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.

ಆರ್‌ಸಿಬಿ ತಂಡದ ಮ್ಯಾಚ್ ವಿನ್ನರ್ ಆಗಲಿದ್ದಾರೆ ಚಾಹಲ್

ಆರ್‌ಸಿಬಿ ತಂಡದ ಮ್ಯಾಚ್ ವಿನ್ನರ್ ಆಗಲಿದ್ದಾರೆ ಚಾಹಲ್

ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಯುಎಇನಲ್ಲಿ ನಡೆಯುತ್ತಿರುವ ಈ ಬಾರಿಯ ಐಪಿಎಲ್ ಟೂರ್ನಿ ಸ್ಪಿನ್ ಬೌಲಿಂಗ್‌ಗೆ ಹೆಚ್ಚಿನ ಸಹಕಾರಿಯಾಗುವ ಕಾರಣ ಬೌಲರ್‌ ಓರ್ವ ಆರ್‌ಸಿಬಿಯ ಮ್ಯಾಚ್ ವಿನ್ನರ್ ಆಗಲಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ. ಸುನಿಲ್ ಗವಾಸ್ಕರ್ ಪ್ರಕಾರ ಆರ್‌ಸಿಬಿಯ ಪ್ರಮುಖ ಲೆಗ್ ಸ್ಪಿನ್ನರ್ ಆಗಿರುವ ಯುಜುವೇಂದ್ರ ಚಾಹಲ್ ಈ ಬಾರಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಕಾರಣವಾಗಲಿದ್ದು ಅವರೇ ಮ್ಯಾಚ್ ವಿನ್ನರ್ ಆಗಿರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Story first published: Sunday, September 20, 2020, 22:21 [IST]
Other articles published on Sep 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X