ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೇಕೆಂದೇ ಮಾಡಿದ್ದು: ಆರ್‌ಸಿಬಿ ಬೌಲರ್ ವಿರುದ್ಧ ಕಿಡಿಕಾರಿದ ಸುನಿಲ್ ಗವಾಸ್ಕರ್

ಐಪಿಎಲ್ ಆವೃತ್ತಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಆಸೆಯಲ್ಲಿದ್ದ ಆರ್‌ಸಿಬಿ ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳಪೆ ಪ್ರದರ್ಶನ ನೀಡಿ ಸೋಲು ಅನುಭವಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತ್ತು. ಈ ಬಾರಿಯ ಏಕಪಕ್ಷೀಯ ಪಂದ್ಯಗಳಲ್ಲಿ ಇದೂ ಒಂದು. ಮೊದಲ ಆರು ಓವರ್‌ಗಳಲ್ಲಿ 11ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದ ಆರ್‌ಸಿಬಿ, ಕೊನೆಯಲ್ಲಿಯೂ ಅದೇ ಧಾರಾಳತನ ಪ್ರದರ್ಶಿಸಿತ್ತು.

ಆರ್‌ಸಿಬಿ ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಎಸಗಿದ ಪ್ರಮಾದಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡ 196 ರನ್‌ಗಳ ದೊಡ್ಡ ಮೊತ್ತ ಪೇರಿಸಲು ನೆರವಾಗಿತ್ತು. ಮಾರ್ಕಸ್ ಸ್ಟೋನಿಸ್ ಕೇವಲ 26 ಎಸೆತಗಳಲ್ಲಿ 53 ರನ್ ಬಾರಿಸಿ ಔಟಾಗದೆ ಉಳಿದರು. ಆರ್‌ಸಿಬಿ ಬೌಲರ್‌ಗಳಾದ ನವದೀಪ್ ಸೈನಿ ಮತ್ತು ಮೊಹಮ್ಮದ್ ಸಿರಾಜ್ ಇಬ್ಬರೂ ತಲಾ ಒಂದು ನೋಬಾಲ್‌ಗಳನ್ನು ಎಸೆದಿದ್ದರು. ಈ ಎರಡೂ ನೋಬಾಲ್‌ಗಳು ಬೀಮರ್ ಆಗಿದ್ದವು.

ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಆಂಧ್ರದ ಎಡಗೈ ವೇಗಿ ಸೇರ್ಪಡೆಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಆಂಧ್ರದ ಎಡಗೈ ವೇಗಿ ಸೇರ್ಪಡೆ

ನವದೀಪ್ ಸೈನಿ ಎಸೆದ 15ನೇ ಓವರ್‌ನಲ್ಲಿ ಸ್ಟೋನಿಸ್ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿಯನ್ನು ಬಾರಿಸಿದ್ದರು. ಐದನೇ ಎಸೆತವನ್ನು ಯಾರ್ಕರ್ ಹಾಕಲು ಬಯಸಿದ್ದ ಸೈನಿ, ನಿಯಂತ್ರಣ ತಪ್ಪಿದ್ದರು. ಮಾರ್ಕಸ್ ಸ್ಟೋನಿಸ್ ಅವರ ಎದೆಯ ಮಟ್ಟಕ್ಕೆ ಬೀಮರ್ ಎಸೆದಿದ್ದರು. ಮುಂದೆ ಓದಿ.

ಅಪಾಯದಿಂದ ತಪ್ಪಿಸಿಕೊಂಡ ಸ್ಟೋನಿಸ್

ಅಪಾಯದಿಂದ ತಪ್ಪಿಸಿಕೊಂಡ ಸ್ಟೋನಿಸ್

ಬೀಮರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಮಾರ್ಕಸ್ ಸ್ಟೋನಿಸ್ ಅವರ ಗ್ಲೌಸ್‌ಗೆ ಚೆಂಡು ತಗುಲಿತ್ತು. ಅವರ ಬೆರಳುಗಳಿಗೆ ಪೆಟ್ಟಾಯಿತು. ಆದರೆ ಅದೃಷ್ಟವಶಾತ್ 144 ಕಿ.ಮೀ. ವೇಗದಲ್ಲಿ ಬಂದಿದ್ದ ಚೆಂಡು ಅವರ ಎದೆಗೆ ತಗುಲಿರಲಿಲ್ಲ. ರಾಜಸ್ಥಾನ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾಗೆ ಇದೇ ರೀತಿ ಬೀಮರ್ ಹೊಡೆತ ಬಿದ್ದಿತ್ತು.

ಕ್ಷಮೆ ಕೋರದ ಸೈನಿ

ಕ್ಷಮೆ ಕೋರದ ಸೈನಿ

ಈ ಎಸೆತದ ಬಗ್ಗೆ ಸ್ಟೋನಿಸ್ ಬಹಳ ಅಸಮಾಧಾನಗೊಂಡಿದ್ದರು. ಸೈನಿ ವಿರುದ್ಧ ಕೋಪದಿಂದ ದೃಷ್ಟಿಹಾಯಿಸಿದ್ದರು. ಆದರೆ ಸೈನಿ ತಮ್ಮ ತಪ್ಪಿಗೆ ಕ್ಷಮೆ ಕೇಳಲು ಸಹ ಮುಂದಾಗಿರಲಿಲ್ಲ. ಸಾಮಾನ್ಯವಾಗಿ ನಿಯಂತ್ರಣ ತಪ್ಪಿ ಬೀಮರ್ ಆದಾಗ ಬೌಲರ್‌ಗಳು ಬ್ಯಾಟ್ಸ್‌ಮನ್ ಕ್ಷಮೆ ಕೇಳುತ್ತಾರೆ. ಆದರೆ ಸೈನಿ ಆ ಮಾನವೀಯತೆ ತೋರಿಸಿರಲಿಲ್ಲ.

ಉದ್ದೇಶಪೂರ್ವಕವಾಗಿ ಎಸೆದಿದ್ದಾರೆ

ಉದ್ದೇಶಪೂರ್ವಕವಾಗಿ ಎಸೆದಿದ್ದಾರೆ

ಇದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ವೀಕ್ಷಕ ವಿವರಣೆ ನೀಡುತ್ತಿದ್ದ ಗವಾಸ್ಕರ್, ಸೈನಿಯ ಬೀಮರ್ ಅನ್ನು ಪ್ರಶ್ನಿಸಿದ್ದಾರೆ. ಮಾರ್ಕಸ್ ಸ್ಟೋನಿಸ್ ಅವರ ಕ್ಷಮೆ ಕೇಳದ ಬೌಲರ್ ಉದ್ದೇಶಪೂರ್ವಕವಾಗಿಯೇ ಅದನ್ನು ಎಸೆದಿರಬಹುದು ಎಂದಿದ್ದಾರೆ. 'ಅದು ವೇಗವಾಗಿತ್ತು. ಅದರತ್ತ ನೋಡಿ. ನೀವು ಏನೇ ಹೇಳಬಹುದು. ಆದರೆ ಯಾರ್ಕರ್ ಅಷ್ಟು ಎತ್ತರಕ್ಕೆ ಬರಲು ಸಾಧ್ಯವೇ ಇಲ್ಲ' ಎಂದು ಗವಾಸ್ಕರ್ ಹೇಳಿದ್ದಾರೆ.

ಅದು ಕೈ ಜಾರಿದ್ದಲ್ಲ

ಅದು ಕೈ ಜಾರಿದ್ದಲ್ಲ

'ನೀವು ಫುಲ್ಲರ್ ಯಾರ್ಕರ್ ಎಸೆದರೆ ಅದು ಮೊಣಕಾಲಿನ ಬಳಿ ಹೋಗಬಹುದು. ಇನ್ನೂ ಹೆಚ್ಚೆಂದರೆ ನಡುವಿನ ಭಾಗಕ್ಕೆ ಹೋಗಬಹುದು. ಆದರೆ ಅದಕ್ಕೂ ಮೇಲೆ ಸಾಧ್ಯವೇ ಇಲ್ಲ. ಅದು ಕೈ ಜಾರಿದ್ದು ಎಂದು ಹೇಳಬೇಡಿ' ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದುಬಾರಿಯಾದ ಸೈನಿ

ದುಬಾರಿಯಾದ ಸೈನಿ

ನವದೀಪ್ ಸೈನಿ ಎಸೆದ ಬೀಮರ್ ಅನ್ನು ನೋಬಾಲ್ ಎಂದು ಅಂಪೈರ್ ಪ್ರಕಟಿಸಿದ್ದರು. ನಂತರದ ಫ್ರೀ ಹಿಟ್ ಅನ್ನು ಸ್ಟೋನಿಸ್ ಬೌಂಡರಿಗೆ ಅಟ್ಟಿದ್ದರು. ನಂತರ ಸೈನಿ ಕೈ ಎತ್ತಿ ಕ್ಷಮೆ ಕೋರಿದ್ದರು. ಆದರೆ ಅದು ತಡವಾಗಿತ್ತು. ಸೈನಿ ಕೇವಲ ಮೂರು ಓವರ್‌ಗಳಲ್ಲಿ 48 ರನ್ ನೀಡಿದ್ದರು.

Story first published: Wednesday, October 7, 2020, 10:04 [IST]
Other articles published on Oct 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X