ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್ ಗೇಲ್ ಕಣಕ್ಕಿಳಿಯದ ಬಗ್ಗೆ ಪಂಜಾಬ್ ತಂಡಕ್ಕೆ ಎಚ್ಚರಿಕೆ ನೀಡಿದ ಸುನಿಲ್ ಗವಾಸ್ಕರ್

IPL 2020: Sunil Gavaskar warning to KXIP about Chris Gayle exclusion

ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ ಈ ಬಾರಿಯ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿರುವ ಗೇಲ್ ಚುಟುಕು ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಾದರೂ ಗೇಲ್ ಕಣಕ್ಕಿಳಿಯಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ಈ ಬಾರಿಯೂ ಕಿಂಗ್ಸ್ ತಂಡ ನಿರಾಸೆಯನ್ನುಂಟು ಮಾಡಿದೆ.

ಕ್ರಿಸ್ ಗೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕಣಕ್ಕಿಳಿಯದ ಬಗ್ಗೆ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಎಚ್ಚರಿಕೆಯನ್ನು ನೀಡಿದ್ದಾರೆ. ಸತತ ಪಂದ್ಯಗಳಲ್ಲಿ ಸೋಲು ಅನುಭವಿಸುತ್ತಿರುವ ಪಂಜಾಬ್ ಕ್ರಿಸ್ ಗೇಲ್ ಅವರನ್ನು ಬಳಸಿಕೊಳ್ಳದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತೀಕ್ಷ್ಣ ಮಾತುಗಳಲ್ಲಿ ಸುನಿಲ್ ಗವಾಸ್ಕರ್ ಕಿಂಗ್ಸ್ ಇಲೆವೆನ್ ತಂಡಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ಐಪಿಎಲ್ 2020: ಟೂರ್ನಿಯ ದ್ವಿತೀಯಾರ್ಧ ಇನ್ನಷ್ಟು ಕಠಿಣವಾಗಿರಲಿದೆ ಎಂದ ಡೆಲ್ಲಿ ಬೌಲರ್ಐಪಿಎಲ್ 2020: ಟೂರ್ನಿಯ ದ್ವಿತೀಯಾರ್ಧ ಇನ್ನಷ್ಟು ಕಠಿಣವಾಗಿರಲಿದೆ ಎಂದ ಡೆಲ್ಲಿ ಬೌಲರ್

ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕ್ರಿಸ್ ಗೇಲ್ ಯಾವ ಕಾರಣಕ್ಕೆ ಆಡಲು ಇಳಿದಿಲ್ಲ ಎಂಬ ಬಗ್ಗೆ ಕೋಚ್ ಅನಿಲ್ ಕುಂಬ್ಳೆ ಪ್ರತಿಕ್ರಿಯಿಸಿದ್ದಾರೆ.

ಗೈಲ್ ಅಲಭ್ಯತೆಗೆ ಕೋಚ್ ಕುಂಬ್ಳೆ ನೀಡಿದ್ರು ಕಾರಣ

ಗೈಲ್ ಅಲಭ್ಯತೆಗೆ ಕೋಚ್ ಕುಂಬ್ಳೆ ನೀಡಿದ್ರು ಕಾರಣ

"ಕ್ರಿಸ್ ಗೇಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯ ಬೇಕಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಗೇಲ್‌ಗೆ ಫುಡ್ ಪಾಯ್ಸನ್ ಅಗಿರುವ ಕಾರಣ ಅವರು ತುಂಬಾ ಬಳಲಿದ್ದಾರೆ" ಎಂದು ಕಿಂಗ್ಸ್ ಇಲೆವೆನ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಕ್ರಿಸ್ ಗೇಲ್ ಅಲಭ್ಯತೆಯ ಬಗ್ಗೆ ಕಾರಣವನ್ನು ನೀಡಿದ್ದಾರೆ.

ಎಚ್ಚರಿಕೆ ನೀಡಿದ ಗವಾಸ್ಕರ್

ಎಚ್ಚರಿಕೆ ನೀಡಿದ ಗವಾಸ್ಕರ್

ಕ್ರಿಸ್ ಗೇಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಈ ಬಾರಿಯ ಆಡುವ ಬಳಗದಲ್ಲಿ ಒಂದು ಬಾರಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ತುಂಬಾ ತಡವಾಗಿ ನಿರ್ಧಾರವನ್ನು ತೆಗೆದುಕೊಂಡು ಅವಕಾಶ ಕೈಮೀರಿ ಹೋಗುವ ಮುನ್ನ ತಂಡ ಎಚ್ಚೆತ್ತುಕೊಳ್ಳಬೇಕು. ಅನುಭವಿ ಆಟಗಾರನನ್ನು ಶೀಘ್ರವಾಗಿ ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಬೇಕು ಎಂದು ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

ಗೇಲ್ ಆಗಮನ ಕಿಂಗ್ಸ್‌ಗೆ ಬಲ

ಗೇಲ್ ಆಗಮನ ಕಿಂಗ್ಸ್‌ಗೆ ಬಲ

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದ ಕ್ರಿಸ್ ಗೇಲ್ ಸತತ 6 ಪಂದ್ಯಗಳಿಂದ ಹೊರಗುಳಿದಂತಾಗಿದೆ. ಐಪಿಎಲ್‌ನಲ್ಲಿ ಕ್ರಿಸ್ ಗೇಲ್ ಸಾಕಷ್ಟು ದಾಖಲೆಗಳನ್ನು ಹೊಂದಿದ್ದು ಐಪಿಎಲ್‌ನ ಟಾಪ್ 10 ರನ್‌ ಗಳಿಸಿದವರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಗೇಲ್ ಹೆಸರಿನಲ್ಲಿ 6 ಶತಕಗಳು ಸಿಡಿದಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ಪಡೆಗೆ ಗೇಲ್ ಆಗಮನ ಬಲ ನೀಡಬಹುದು ಎಂಬುದು ಕ್ರಿಕೆಟ್ ಪಂಡಿತರ ಹಾಗೂ ಅಭಿಮಾನಿಗಳ ನಿರೀಕ್ಷೆ.

ಗೇಲ್ ಆಗಮನಕ್ಕೆ ಇದು ಸರಿಯಾದ ಸಮಯ

ಗೇಲ್ ಆಗಮನಕ್ಕೆ ಇದು ಸರಿಯಾದ ಸಮಯ

ಗೇಲ್ ಕಣಕ್ಕಿಳಿಯದ ಬಗ್ಗೆ ಮಾತನಾಡಿದ ಸುನಿಲ್ ಗವಾಸ್ಕರ್ "ಗೇಲ್ ತಂಡಕ್ಕೆ ಸೇರಿಕೊಳ್ಲುವುದನ್ನು ನಾನು ಖಂಡಿತಾ ಬಯಸುತ್ತೇನೆ. ಎಡಗೈ ಆಟಗಾರನ ಸ್ಥಾನವನ್ನು ಅವರು ತುಂಬ ಬಲ್ಲರು. ಗ್ಲೆನ್ ಮ್ಯಾಕ್ಸ್‌ವೆಲ್ ಉತ್ತಮ ಲಯದಲ್ಲಿಲ್ಲ. ಗೇಲ್ ಸೇರ್ಪಡೆಗೆ ಇದು ಸರಿಯಾದ ಸಮಯ. ಮುಂದಿನ ಒಂದೆರಡು ಪಂದ್ಯಗಳ ಒಳಗೆ ಗೇಲ್ ಆಡುವ ಬಳಗದಲ್ಲಿ ಸೇರಿಕೊಳ್ಳಲೇ ಬೇಕು" ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Friday, October 9, 2020, 10:13 [IST]
Other articles published on Oct 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X