ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಮೊದಲ ಪಂದ್ಯಕ್ಕೆ ಆರ್‌ಸಿಬಿ ಸಿದ್ಧತೆ, ಹೈದರಾಬಾದ್‌ ವಿರುದ್ಧ ಹೇಗಿದೆ ದಾಖಲೆ?

Ipl 2020 Sunrisers Hyderabad Vs Royal Challengers Bangalore – Head-to-head Record And Last 2 Season Match Result

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಮವಾರ ತನ್ನ ಮೊದಲ ಪಂದ್ಯವನ್ನಾಡಲು ಕಣಕ್ಕಿಳಿಯಲಿದೆ. ಈ ಕಾದಾಟದಲ್ಲಿ ಆರ್‌ಸಿಬಿ ತಂಡಕ್ಕೆ ಮುಖಾಮುಖಿಯಾಗುತ್ತಿರುವುದು ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್. ಸ್ಪೋಟಕ ಆಟಗಾರರನ್ನು ಹೊಂದಿರುವ ಈ ಎರಡೂ ತಂಡಗಳ ನಡುವಿನ ಪಂದ್ಯ ಅಭಿಮಾನಿಗಳ ಪಾಲಿಗೆ ಸಾಕಷ್ಟು ರೋಚಕ ಅನುಭವ ನೀಡುವುದರಲ್ಲಿ ಅನುಮಾನವಿಲ್ಲ.

ಎರಡೂ ತಂಡಗಳ ನಾಯಕರು ಐಪಿಎಲ್‌ನಲ್ಲಿ ಕೆಲ ಪ್ರಮುಖ ದಾಖಲೆಗಳನ್ನು ಹೊಂದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ನಾಯಕ ವಾರ್ನರ್ ಮೂರು ಬಾರಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರೆ ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅತೀ ಹೆಚ್ಚಿನ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಹೀಗೇ ಇಬ್ಬರೂ ನಾಯಕರ ಐಪಿಎಲ್ ದಾಖಲೆ ಅತ್ಯುನ್ನತ ಮಟ್ಟದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ vs ಕಿಂಗ್ಸ್ XI ಪಂಜಾಬ್ : ಎರಡೂ ತಂಡಗಳ ಬಲಾಬಲ: ಸೋಲು ಗೆಲುವಿನ ಲೆಕ್ಕಾಚಾರ!ಡೆಲ್ಲಿ ಕ್ಯಾಪಿಟಲ್ಸ್ vs ಕಿಂಗ್ಸ್ XI ಪಂಜಾಬ್ : ಎರಡೂ ತಂಡಗಳ ಬಲಾಬಲ: ಸೋಲು ಗೆಲುವಿನ ಲೆಕ್ಕಾಚಾರ!

ಹಾಗಾದರೆ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಮುಖಾಮುಖಿ ಹೇಗಿತ್ತು? ಕಳೆದ ಎರಡು ಆವೃತ್ತಿಗಳ ಫಲಿತಾಂಶಗಳ ಏನಾಗಿತ್ತು? ಮುಂದೆ ಓದಿ

ಹೆಡ್ ಟು ಹೆಡ್

ಹೆಡ್ ಟು ಹೆಡ್

ರಾಯಲ್ ಚಾಲೆಂಜರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಈವರೆಗೆ ಒಟ್ಟು 13 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಆರ್‌ಸಿಬಿ ತಂಡ 6 ಪಂದ್ಯಗಳಲ್ಲಿ ಗೆದ್ದುಕೊಂಡಿದೆ. ಈ ಮೂಲಕ ಆರ್‌ಸಿಬಿಗೆ ಸಣ್ಣ ಹಿನ್ನೆಡೆಯನ್ನು ಕಂಡಿದೆ. ಆರ್‌ಸಿಬಿ ತಂಡ ಐಪಿಎಲ್ ಆರಂಭದ ಆವೃತ್ತಿಯಿಂದಲೂ ಇದ್ದ ಫ್ರಾಂಚೈಸಿಯಾಗಿದ್ದರೆ ಸನ್ ರೈಸರ್ಸ್ ಹೈದರಾಬಾದ್ 2013ರಲ್ಲಿ ಐಪಿಎಲ್‌ಗೆ ಸೇರ್ಪಡೆಗೊಂಡಿತ್ತು.

ಕಳೆದ ಆವೃತ್ತಿಯಲ್ಲಿ ಮಿಶ್ರ ಫಲಿತಾಂಶ

ಕಳೆದ ಆವೃತ್ತಿಯಲ್ಲಿ ಮಿಶ್ರ ಫಲಿತಾಂಶ

ಐಪಿಎಲ್‌ನ ಕಳೆದ ಬಾರಿಯ ಆವೃತ್ತಿಯಲ್ಲಿ ಮುಖಾಮುಖಿಯಾದ ಎರಡೂ ಪಂದ್ಯಗಳಲ್ಲಿ ಆರ್‌ಸಿಬು ಹಾಗೂ ಎಸ್‌ಆರ್‌ಹೆಚ್ ಎರಡೂ ತಂಡಗಳು ಕೂಡ ಸೋಲು ಗೆಲುವಿನ ರುಚಿಯನ್ನು ಕಂಡಿತ್ತು. ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭಿಕ ಆಟಗಾರರ ದಾಖಲೆಯ ಪ್ರದರ್ಶನದೊಂದೆಗೆ ಅಬ್ಬರದಾಟವನ್ನು ಪ್ರದರ್ಶಿಸಿತ್ತು.ಈ ಪಂದ್ಯದಲ್ಲಿ ಹೈದರಾಬಾದ್ ಭರ್ಜರಿ ಗೆಲುವನ್ನು ದಾಖಲಿಸಿತ್ತು.ಡೇವಿಡ್ ವಾರ್ನರ್ ಹಾಗೂ ಬೈರ್‌ಸ್ಟೋವ್ ಇಬ್ಬರೂ ಶತಕವನ್ನು ಸಿಡಿಸಿ 231/2 ರನ್ ಗಳಿಸಿತ್ತು. ಇದಕ್ಕೆ ಆರ್‌ಸಿಬಿ ಬಳಿ ಸೂಕ್ತ ಪ್ರತ್ಯುತ್ತರವೇ ಇಲ್ಲದೆ ಸೋಲು ಕಂಡಿತ್ತು.

ಎರಡನೇ ಮುಖಾಮುಖಿಯಲ್ಲಿ ತಿರುಗೇಟು

ಎರಡನೇ ಮುಖಾಮುಖಿಯಲ್ಲಿ ತಿರುಗೇಟು

ಕಳೆದ ಆವೃತ್ತಿಯ ಎರಡನೇ ಪಂದ್ಯದಲ್ಲಿ ಆರ್‌ಸಿಬಿ ಸನ್ ರೈಸರ್ಸ್‌ಗೆ ಸರಿಯಾಘಿಯೇ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿತ್ತು. ಕೇನ್ ವಿಲಿಯಮ್ಸನ್ ಸಿಡಿಸಿದ 70 ರನ್‌ಗಳ ಸಹಾಯದಿಂದ 175/7 ರನ್ ದಾಖಲಿಸಿತ್ತು ಹೈದರಾಬಾದ್. ಇದನ್ನು ಬೆನ್ನತ್ತಿದ ಆರ್‌ಸಿಬಿಗೆ ಹೇಟ್ಮೇರ್ ಹಾಗೂ ಗುರ್‌ಕೀರತ್ ಸಿಂಗ್ ಮಾನ್ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಗೆಲುವಿಗೆ ಕಾರಣರಾದರು. ನಾಲ್ಕು ವಿಕೆಟ್‌ಗಳ ಅಂತರದಿಂದ ಆರ್‌ಸಿಬಿ ಈ ಕಾದಾಟದಲ್ಲಿ ಗೆದ್ದು ಬೀಗಿತ್ತು.

2018ರ ಆವೃತ್ತಿಯಲ್ಲೂ ಮಿಶ್ರ ಫಲಿತಾಂಶ

2018ರ ಆವೃತ್ತಿಯಲ್ಲೂ ಮಿಶ್ರ ಫಲಿತಾಂಶ

ಇನ್ನು ಈ ಎರಡು ತಂಡಗಳು 2018ರ ಆವೃತ್ತಿಯಲ್ಲಿ ಮುಖಾಮುಖಿಯಾದ ಎರಡು ಪಂದ್ಯಗಳಲ್ಲೂ ಸೋಲು ಹಾಗೂ ಗೆಲುವಿನ ರುಚಿ ಕಂಡಿತ್ತು. ಆ ಟೂರ್ನಿಯ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 5 ರನ್‌ಗಳ ಅಂತರದ ಗೆಲುವನ್ನು ಕಂಡಿತ್ತು. ಎರಡನೇ ಮುಖಾಮುಖಿಯಲ್ಲಿ ಆರ್‌ಸಿಬಿ 14 ರನ್‌ಗಳ ಅಂತರದ ಗೆಲುವನ್ನು ಕಾಣುವ ಮೂಲಕ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

Story first published: Tuesday, October 6, 2020, 15:59 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X