ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ದಾಖಲೆ ಸನಿಹದಲ್ಲಿದ್ದಾರೆ ಕನ್ನಡಿಗ ಮನೀಷ್ ಪಾಂಡೆ

IPL 2020: Sunrisers Hyderabads Manish Pandey near to a special record

ದುಬೈ: ಸನ್ ರೈಸರ್ಸ್ ಹೈದರಾಬಾದ್‌ನ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಅವೃತ್ತಿಯಲ್ಲಿ ವಿಶೇಷ ದಾಖಲೆಯ ಸನಿಹದಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಪಾಂಡೆ ಒಂದು ವೇಳೆ 20 ರನ್ ಬಾರಿಸಿದರೆ ಈ ಐಪಿಎಲ್‌ನಲ್ಲಿ 400 ರನ್ ಬಾರಿಸಿದ 4ನೇ ಕರ್ನಾಟಕ ಬ್ಯಾಟ್ಸ್‌ಮನ್‌ ಆಗಿ ಮನೀಷ್ ಗುರುತಿಸಿಕೊಳ್ಳಲಿದ್ದಾರೆ. ಒಟ್ಟು 13 ಇನ್ನಿಂಗ್ಸ್‌ಗಳನ್ನಾಡಿರುವ ಮನೀಷ್ ಪಾಂಡೆ 34.55ರ ಸರಾಸರಿಯಲ್ಲಿ 380 ರನ್ ಬಾರಿಸಿದ್ದಾರೆ. ಇನ್ನು 20 ರನ್ ಬಂದರೆ 400 ರನ್ ಪೂರ್ಣಗೊಳ್ಳಲಿದೆ.

ಕೊಹ್ಲಿಗೆ ಕುಹಕವಾಡಿದ ಇಸಿಬಿಗೆ ಕ್ರಿಕೆಟ್ ಪ್ರೇಮಿಗಳಿಂದ ಕಪಾಳ ಮೋಕ್ಷ!ಕೊಹ್ಲಿಗೆ ಕುಹಕವಾಡಿದ ಇಸಿಬಿಗೆ ಕ್ರಿಕೆಟ್ ಪ್ರೇಮಿಗಳಿಂದ ಕಪಾಳ ಮೋಕ್ಷ!

ಶುಕ್ರವಾರ (ನವೆಂಬರ್ 6) ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮನೀಷ್‌ಗೆ ದಾಖಲೆ ಪೂರೈಸಲು ಅವಕಾಶವಿದೆ. 2020ರ ಐಪಿಎಲ್‌ನಲ್ಲಿ ಈವರೆಗೆ ಒಟ್ಟು ಮೂವರು ಕರ್ನಾಟಕದ ಆಟಗಾರರು 400+ ರನ್ ಗಳಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ದೊಡ್ಡ ಗಣೇಶ್ ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿ

ಕೆಎಲ್ ರಾಹುಲ್ (670 ರನ್), ಮಯಾಂಕ್ ಅಗರ್ವಾಲ್ (424 ರನ್), ದೇವದತ್ ಪಡಿಕ್ಕಲ್ (472 ರನ್) ಈ ಸಾಲಿನಲ್ಲಿದ್ದಾರೆ. ಮನೀಷ್ ಕೂಡ ದಾಖಲೆ ಪಟ್ಟಿ ಸೇರಿಕೊಳ್ಳುವ ನಿರೀಕ್ಷೆಯಿದೆ.

ರಾಹುಲ್, ಮಯಾಂಕ್ ರನ್ ಸ್ಥಗಿತ

ರಾಹುಲ್, ಮಯಾಂಕ್ ರನ್ ಸ್ಥಗಿತ

ಕಿಂಗ್ಸ್‌ 11 ಪಂಜಾಬ್ ತಂಡ ಈ ಬಾರಿಯ ಐಪಿಎಲ್‌ನಿಂದ ಈಗಾಗಲೇ ಹೊರ ಬಿದ್ದಿರುವುದರಿಂದ ಇಬ್ಬರ ರನ್ ಕೂಡ (670 ಮತ್ತು 424) ಅಲ್ಲಿಗೇ ಸ್ಥಗಿತವಾಗಲಿದೆ. ಅತೀ ಹೆಚ್ಚು ರನ್ ಗಳಿಸಿದ ರಾಹುಲ್ ಅವರನ್ನು ಹಿಂದಿಕ್ಕುವ ಅವಕಾಶ ಡೇವಿಡ್ ವಾರ್ನರ್ (529 ರನ್) ಮತ್ತು ಶಿಖರ್ ಧವನ್ (525 ರನ್) ಅವರಿಗಿದೆ.

2011ರಲ್ಲಿ ಗಂಭೀರ್ ಮಿಸ್

2011ರಲ್ಲಿ ಗಂಭೀರ್ ಮಿಸ್

2011ರಲ್ಲಿ ಗೌತಮ್ ಗಂಭೀರ್‌ಗೆ 400 ರನ್ ಬಾರಿಸುವ ಅವಕಾಶವಿತ್ತು. ಆದರೆ ಗಂಭೀರ್ ಇದನ್ನು ಮಿಸ್ ಮಾಡಿಕೊಂಡಿದ್ದರು. ಆ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 557 ರನ್, ವೀರೇಂದ್ರ ಸೆಹ್ವಾಗ್ 424, ಶಿಖರ್ ಧವನ್ 400, ಗೌತಮ್ ಗಂಭೀರ್ 378 ರನ್ ಬಾರಿಸಿದ್ದರು.

2012ರಲ್ಲಿ ಕೊಹ್ಲಿಗೆ ನಿರಾಸೆ

2012ರಲ್ಲಿ ಕೊಹ್ಲಿಗೆ ನಿರಾಸೆ

2012ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಯ ವಿರಾಟ್ ಕೊಹ್ಲಿ 400 ರನ್ ಅವಕಾಶ ತಪ್ಪಿಸಿಕೊಂಡಿದ್ದರು. ಆವತ್ತು ಗೌತಮ್ ಗಂಭೀರ್ 590, ಶಿಖರ್ ಧವನ್ 569, ವೀರೇಂದ್ರ ಸೆಹ್ವಾಗ್ 495, ವಿರಾಟ್ ಕೊಹ್ಲಿ 364 ರನ್ ಬಾರಿಸಿದ್ದರು.

2019ರಲ್ಲಿ ರಹಾನೆ, ಶಾಗೆ ಬೇಸರ

2019ರಲ್ಲಿ ರಹಾನೆ, ಶಾಗೆ ಬೇಸರ

ಐಪಿಎಲ್ 2019ರ ಆವೃತ್ತಿಯಲ್ಲಿ 400 ರನ್ ಅವಕಾಶ ಅಜಿಂಕ್ಯ ರಹಾನೆ ಅವರ ಕೈ ತಪ್ಪಿತ್ತು. ಆ ಸೀಸನ್‌ನಲ್ಲಿ ಶ್ರೇಯಸ್ ಐಯ್ಯರ್ 463 ರನ್, ಸೂರ್ಯಕುಮಾರ್ ಯಾದವ್ 424, ರೋಹಿತ್ ಶರ್ಮಾ 405, ಅಜಿಂಕ್ಯ ರಹಾನೆ 393, ಪೃಥ್ವಿ ಶಾ 353 ರನ್ ಬಾರಿಸಿದ್ದರು.

Story first published: Friday, November 6, 2020, 14:00 [IST]
Other articles published on Nov 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X