ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಡೆಲ್ಲಿ ವಿರುದ್ದದ ಪಂದ್ಯದಲ್ಲಿ 2 ವಿಶೇಷ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

IPL 2020: Suryakumar Yadav becomes 1st uncapped player to play 100 IPL matches

ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ದ ಶತಕವನ್ನು ಸಿಡಿಸಿರುವ ಸೂರ್ಯ ಕುಮಾರ್ ಯಾದವ್ ಎರಡು ವಿಶೇಷ ದಾಖಲೆಯನ್ನು ಮಾಡಿದ್ದಾರೆ.

ಕಳೆದ ಕೆಲ ಆವೃತ್ತಿಗಳಿಂದ ಅದ್ಭುತ ಪ್ರದರ್ಶನವನ್ನು ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ಪ್ರಕಟವಾದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಆಯ್ಕೆಯಾಗದ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗೂ ಕಾರಣರಾಗಿದ್ದರು ಮುಂಬೈ ಮೂಲದ 30ರ ಹರೆಯದ ಸೂರ್ಯಕುಮಾರ್ ಯಾದವ್.

ಪ್ಲೇ ಆಫ್‌ನಲ್ಲಿ ಕಳಪೆಯಾಟ, ರೋಹಿತ್ ಶೂನ್ಯ ಸುತ್ತಿದರೂ ದಾಖಲೆಪ್ಲೇ ಆಫ್‌ನಲ್ಲಿ ಕಳಪೆಯಾಟ, ರೋಹಿತ್ ಶೂನ್ಯ ಸುತ್ತಿದರೂ ದಾಖಲೆ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯ ಸೂರ್ಯ ಕುಮಾರ್ ಯಾದವ್ ಅವರ ಐಪಿಎಲ್‌ನ 100ನೇ ಪಂದ್ಯವಾಗಿದೆ. ಈ ಮೂಲಕ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದೆ 100 ಐಪಿಎಲ್ ಆಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಸೂರ್ಯ ಕುಮಾರ್ ಯಾದವ್ ತನ್ನದಾಗಿಸಿಕೊಂಡಿದ್ದಾರೆ.

ಇದೇ ಪಂದ್ಯದಲ್ಲಿ ರನ್ ಗಳಿಕೆಯಲ್ಲೂ ವಿಶಿಷ್ಠ ಸಾಧನೆಯನ್ನು ಮಾಡಿದ್ದಾರೆ. ಡೆಲ್ಲಿ ವಿರುದ್ದದ ಪಂದ್ಯದಲ್ಲೇ ಸೂರ್ಯಕುಮಾರ್ ಯಾದವ್ 2000 ಐಪಿಎಲ್ ರನ್ ದಾಖಲಿಸುವಲ್ಲೂ ಯಶಸ್ವಿಯಾಗಿದ್ದಾರೆ. ಇದು ಕೂಡ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದೆ ದಾಖಲಾಗಿರುವ ಅತಿ ಹೆಚ್ಚಿನ ಸ್ಕೋರ್ ಆಗಿದೆ.

ಐಪಿಎಲ್‌ನಲ್ಲಿ ಚೇಸಿಂಗ್ ಯಾಕೆ ಸುಲಭವಾಗುತ್ತಿದೆ?: ರಹಸ್ಯ ಬೇಧಿಸಿದ ಸಚಿನ್ ತೆಂಡೂಲ್ಕರ್ಐಪಿಎಲ್‌ನಲ್ಲಿ ಚೇಸಿಂಗ್ ಯಾಕೆ ಸುಲಭವಾಗುತ್ತಿದೆ?: ರಹಸ್ಯ ಬೇಧಿಸಿದ ಸಚಿನ್ ತೆಂಡೂಲ್ಕರ್

ಸೂರ್ಯ ಕುಮಾರ್ ಯಾದವ್ ಟೀಮ್ ಇಂಡಿಯಾಗೆ ಆಯ್ಕೆಯಾಗದಿರುವ ಬಗ್ಗೆ ಸಾಕಷ್ಟು ಮಾಜಿ ಕ್ರಿಕೆಟಿಗರು ಕೂಡ ಪ್ರಶ್ನೆ ಮಾಡಿದ್ದಾರೆ. ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಸೂರ್ಯಕುಮಾರ್‌ಗೆ ತಾಳ್ಮೆಯಿಂದ ಕಾಯುವಂತೆ ಅಭಯ ನೀಡಿದ್ದಾರೆ. ಬಿಸಿಸಿಐ ಅಧ್ಯ ಕ್ಷ ಗಂಗೂಲಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಸೂರ್ಯ ಕುಮಾರ್ ಯಾದವ್‌ಗೂ ಕಾಲ ಕೂಡಿ ಬರಲಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

Story first published: Thursday, November 5, 2020, 22:06 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X