ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020 ಟೈಟಲ್ ಹಕ್ಕುಗಳ ಬಿಡ್‌ಗೆ ಟಾಟಾ ಕಂಪನಿ ಆಸಕ್ತಿ

IPL 2020: Tata shows interest in IPL title rights

ನವದೆಹಲಿ, ಆಗಸ್ಟ್ 15: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಟೈಟಲ್ ಪ್ರಾಯೋಜಕತ್ವದ ಹಕ್ಕುಗಳ ಬಿಡ್ಡಿಂಗ್‌ಗೆ ಟಾಟಾ ಮಕ್ಕಳು ಹೊಂದಿರುವ ಟಾಟಾ ಕಂಪನಿ ಆಸಕ್ತಿ ತೋರಿದೆ. ಜೊತೆಗೆ ಫ್ಯಾಂಟಸಿ ಸ್ಪೋರ್ಟ್ಸ್ ಸಂಸ್ಥೆ ಡ್ರೀಮ್ 11, ಇ-ಲರ್ನಿಂಗ್ ಸಂಸ್ಥೆ ಬೈಜೂಸ್ ಮತ್ತು ಕೆಲ ಸಂಸ್ಥೆಗಳು ಆಸಕ್ತಿ ತೋರಿಸಿವೆ.

ದೇಶದ ಹೆಮ್ಮೆಯ ಕ್ರೀಡಾಪಟು: ಭಾರತೀಯ ಟೆನ್ನಿಸ್ ಲೋಕದ ದಂತಕತೆ ಲಿಯಾಂಡರ್ ಪೇಸ್ದೇಶದ ಹೆಮ್ಮೆಯ ಕ್ರೀಡಾಪಟು: ಭಾರತೀಯ ಟೆನ್ನಿಸ್ ಲೋಕದ ದಂತಕತೆ ಲಿಯಾಂಡರ್ ಪೇಸ್

ಲಡಾಕ್ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತರಾದ ಬಳಿಕ ಚೀನಾ ಮೊಬೈಲ್ ಉತ್ಪಾದನಾ ಕಂಪನಿ ವಿವೋ ಜೊತೆಗಿನ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದ ಮುರಿಯಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ನಿರ್ಧರಿಸಿತ್ತು. ಅದರಂತೆ ವಿವೋ ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ.

ಮೊದಲ ವಿಶ್ವಕಪ್ ಗೆಲ್ಲಿಸಿ ಭಾರತಕ್ಕೆ ಕ್ರಿಕೆಟ್ ರುಚಿ ತೋರಿಸಿದ್ದ ಕಪಿಲ್‌ದೇವ್ಮೊದಲ ವಿಶ್ವಕಪ್ ಗೆಲ್ಲಿಸಿ ಭಾರತಕ್ಕೆ ಕ್ರಿಕೆಟ್ ರುಚಿ ತೋರಿಸಿದ್ದ ಕಪಿಲ್‌ದೇವ್

ವಿವೋ ನಿರ್ಗಮನದ ಬಳಿಕ 2020ರ ಐಪಿಎಲ್‌ಗೆ ಪ್ರಾಯೋಜಕತ್ವ ನೀಡಲು ಬಿಸಿಸಿಐಯು ಆಸಕ್ತರಿಂದ ಬಿಡ್ ಆಹ್ವಾನಿಸಿತ್ತು. ಬಿಡ್‌ಗೆ ಆಸಕ್ತಿ ಉಳ್ಳವರು ತಿಳಿಸುವಂತೆ ಸೋಮವಾರದಿಂದ (ಆಗಸ್ಟ್ 10) ಶುಕ್ರವಾರರ ವರೆಗೆ (ಆಗಸ್ಟ್ 14) ಕಾಲಾವಕಾಶ ನೀಡಿತ್ತು. ವಾರ್ಷಿಕವಾಗಿ 300 ಕೋ.ರೂ. ವ್ಯವಹಾರ ಹೊಂದಿರುವವರು ಮಾತ್ರ ಬಿಡ್‌ನಲ್ಲಿ ಭಾಗವಹಿಸಬಹುದು ಎಂದು ಬಿಸಿಸಿಐ ಹೇಳಿತ್ತು.

ದೇಶ ಕಂಡ ಹೆಮ್ಮೆಯ ಕ್ರೀಡಾಪಟು: ಧ್ಯಾನ್ ಚಂದ್ ಎಂಬ ಹಾಕಿ ಮೇರುಪರ್ವತದೇಶ ಕಂಡ ಹೆಮ್ಮೆಯ ಕ್ರೀಡಾಪಟು: ಧ್ಯಾನ್ ಚಂದ್ ಎಂಬ ಹಾಕಿ ಮೇರುಪರ್ವತ

ಟೆಲಿಕಾಮ್ ದೈತ್ಯ ಜಿಯೋ, ಗ್ರಾಹಕರ ಅಯುರ್ವೇದಿಕ್ ಉತ್ಪನ್ನಗಳ ಕಂಪನಿ ಪತಂಜಲಿ, ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ಕಂಪನಿಗಳು ಬಿಡ್‌ನತ್ತ ಆಸಕ್ತಿ ತೋರಿವೆ ಎನ್ನಲಾಗಿತ್ತು. ಆದರೆ ಅವರ್ಯಾರೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಬಿಡ್‌ಗೆ ನೋಂದಾಯಿಸಿಕೊಂಡಿಲ್ಲ.

Story first published: Saturday, August 15, 2020, 16:42 [IST]
Other articles published on Aug 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X