ಐಪಿಎಲ್ 2020: ಟೂರ್ನಿಯ ನಂಬರ್ 1 ಬ್ಯಾಟ್ಸ್‌ಮನ್ ಎಂದು ಕನ್ನಡಿಗನನ್ನು ಹೊಗಳಿದ ಗಂಭೀರ್

ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮ ನೇರ ಮಾತುಗಳಿಂದಲೇ ಸಾಕಷ್ಟು ಖ್ಯಾತರಾಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹಾಗೂ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರದರ್ಶನ ಹಾಗೂ ಮುನ್ನಡೆಸಿದ ರೀತಿಗೆ ಗಂಭೀರ್ ಟೀಕಿಸಿದ್ದರು. ಆದರೆ ಕಿಂಗ್ಸ್ ಇಲವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಆರ್‌ಸಿಬಿ ವಿರುದ್ಧ ಆಡಿದ ಆಟದ ಬಗ್ಗೆ ಗಂಭೀರ್ ಮನಸಾರೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಕ್ರಿಕ್ ಇನ್ಫೋ 'ಟಿ20 ಟೈಮ್ ಔಟ್ ಕಾರ್ಯಕ್ರಮದಲ್ಲಿ ಗೌತಮ್ ಗಂಭೀರ್ ಹಾಗೂ ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಆಟಗಾರ ಇಯಾನ್ ಬಿಷಪ್ ಪಾಲ್ಗೊಂಡಿದ್ದರು. ಇಯಾನ್ ಬಿಷಪ್ 'ಇನ್ನಿಂಗ್ಸ್ಅನ್ನು ಆತ ಸಮತೋಲನದಿಂದ ಮುನ್ನಡೆಸಿದ ರೀತಿ ಶ್ರೇಷ್ಠವಾಗಿತ್ತು. ನಾನು ಮೊದಲ 50 ರನ್‌ಗಳನ್ನು ಕುಳಿತುಕೊಂಡು ನೋಡುತ್ತಿದ್ದೆ. ಆದರೆ ಪವರ್‌ಪ್ಲೇ ಬಳಿಕ ನಾನು ಯೋಚಿಸುತ್ತಿದ್ದೆ ಆತ ಅಲ್ಲಿ ನೆಲೆಯೂರುತ್ತಿದ್ದಾರೆ, ಹಾಗೂ ಸಮತೋಲನವನ್ನು ಕಂಡುಕೊಳ್ಳುಕೊಳ್ಳುತ್ತಿದ್ದಾನೆ ಎಂದು' ಕೆಎಲ್ ರಾಹುಲ್ ಆಟದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ದಾಖಲೆಗಾಗಿ ರೋಹಿತ್, ರೈನಾ ಜೊತೆ ಸೇರಲಿದ್ದಾರೆ ಎಂಎಸ್ ಧೋನಿ

ಇಯಾನ್ ಬಿಷಪ್ ಅಭಿಪ್ರಾಯ

ಇಯಾನ್ ಬಿಷಪ್ ಅಭಿಪ್ರಾಯ

ಆತ ತನ್ನ ಕರ್ತವ್ಯವನ್ನು ಸುಂದರವಾಗಿ ಪೂರೈಸಿದ್ದಾರೆ. ಆತನಿಗೆ ಸಿಕ್ಕ ಅವಕಾಶಗಳನ್ನು ಪಕ್ಕಕ್ಕಿಡಿ. ಅಂತಿಮ ಹಂತದಲ್ಲಿ ವೇಗವನ್ನು ಹೆಚ್ಚಿಸಿಕೊಂಡ ರೀತಿ ಹಾಗೂ ಬ್ಯಾಟಿಂಗ್‌ನಲ್ಲಿ ಆ ಮಟ್ಟದ ಪ್ರದರ್ಶನ, ನನ್ನ ಪ್ರಕಾರ ಇದು ಆತನನ್ನು ಸಂಪೂರ್ಣ ಬ್ಯಾಟ್ಸ್‌ಮನ್ ಆಗಿ ರೂಪುಗೊಳಿಸುತ್ತದೆ ಎಂದು ಇಯಾನ್ ಬಿಷಪ್ ಹೇಳಿದ್ದಾರೆ.

ಧ್ವನಿಗೂಡಿಸಿದ ಗಂಭೀರ್

ಧ್ವನಿಗೂಡಿಸಿದ ಗಂಭೀರ್

ಈ ಮಾತಿಗೆ ಗೌತಮ್ ಗಂಭಿರ್ ಧ್ವನಿಗೂಡಿಸುತ್ತಾ 'ಇದೊಂದು ಸ್ಪಷ್ಟವಾದ ಇನ್ನಿಂಗ್ಸ್. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಕೆಟ್ಟ ಹಪಡೆತವೀ ಇರಲಿಲ್ಲ. ಅದು ಬ್ಯಾಟ್ಸ್‌ಮನ್‌ನ ಗುಣಮಟ್ಟದ ಶ್ರೇಷ್ಠತೆಯಾಗಿದೆ. ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಹೆಚ್ಚಿನ ಸ್ಟ್ರೈಕ್‌ರೇಟ್‌ನೊಂದಿಗೆ ಬಾರಿಸಿದ ಹೊಡೆತಗಳು ಆತನ ಸಾಮರ್ಥ್ಯವನ್ನು ತಿಳಿಸುತ್ತದೆ ಎಂದು ಗಂಭೀರ್ ವಿವರಿಸಿದರು.

ರಾಹುಲ್ ನಂಬರ್ 1 ಬ್ಯಾಟ್ಸ್‌ಮನ್

ರಾಹುಲ್ ನಂಬರ್ 1 ಬ್ಯಾಟ್ಸ್‌ಮನ್

ಇದೇ ವೇಳೆ ಇಯಾನ್ ಬಿಷಪ್ ಅಭಿಪ್ರಾಯವನ್ನು ನಾನು ಒಪ್ಪಿಕೊಳ್ಳುತ್ತೇನೆ ಗೌತಮ್ ಗಂಭೀರ್ ಹೇಳಿದರು. 'ಇಯಾನ್ ಬಿಷಬ್ ಹೇಳಿದ ಒಂದು ಮಾತನ್ನು ನಾನು ಒಪ್ಪಿಕೊಳ್ಳತ್ತೇನೆ. ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ನಂಬರ್ 1 ಬ್ಯಾಟ್ಸ್‌ಮನ್' ಎಂದು ಗೌತಮ್ ಗಂಭೀರ್ ರಾಹುಲ್ ಆಟಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಕಿಂಗ್ಸ್ ಇಲವೆನ್ ಪಂಜಾಬ್ ತಂಡ ತನ್ನ ಮುಂದಿನ ಪಂದ್ಯವನ್ನು ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, September 27, 2020, 8:23 [IST]
Other articles published on Sep 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X